ಬೆಂಗಳೂರು :ಸರಕಾರಿ ನೌಕರ ಭವನದಲ್ಲಿ ಅಮ್ಮಾ ಅಮ್ಮ ಫೌಂಡೇಶನ್ (ರಿ) ಬೆಂಗಳೂರು ಇವರ ವತಿಯಿಂದ ಕ್ಯಾಲೆಂಡರ್ ಹಾಗೂ ಡೈರಿ ಬಿಡುಗಡೆ ಕಾರ್ಯಕ್ರಮ ಮಾಡಲಾಯಿತು . ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಜಗದೀಶ್ ಗಂಗಣ್ಣನವರ್ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಬಿಡಿಎ ಬೆಂಗಳೂರು ಇವರು ಸಸಿಗೆ ನೀರು ಹಾಕುವುದರ ಮುಖಾಂತರ ನೆರವೇರಿಸಿ ಮಾತನಾಡುತ್ತಾ 
ಸಾಮಾಜಿಕ ಸೇವೆಯ ಉದ್ದೇಶವನ್ನು ಇಟ್ಟುಕೊಂಡು ನೀವು ಹೊರಟಿರುವುದು ಬಹಳ ಸಂತೋಷದ ವಿಷಯ ಇದು ಬಹಳ ಸವಾಲಿನ ಕೆಲಸ ಕೂಡ ಆಗಿದೆ ನಿಮ್ಮಿಂದ ಸಮಾಜಕ್ಕೆ ಒಳ್ಳೆಯ ಕೆಲಸಗಳು ಸದಾ ನಡಿಯುತ್ತಿರಲಿ ನಮ್ಮ ಬೆಂಬಲ ಕೂಡ ಸದಾ ನಿಮ್ಮ ಅಮ್ಮಾ ಫೌಂಡೇಷನ್ ಮೇಲೆ ಇರಲಿದೆ ಎಂದು ಶುಭ ಕೋರಿದರು.
ಕಾರ್ಯಕ್ರಮದ ಘನ ಉಪಸ್ಥಿತಿ ಹಾಗೂ ಕ್ಯಾಲೆಂಡರ್ ಬಿಡುಗಡೆಗೊಳಿಸಿದ ಶ್ರೀ ಶಿವಕುಮಾರ ಬೆಳ್ಳಿತಟ್ಟೆ ಅವರು ಪ್ರಧಾನ ಕಾರ್ಯದರ್ಶಿಗಳು ಪ್ರೆಸ್ ಕ್ಲಬ್ ಬೆಂಗಳೂರು ಇವರು ಮಾತನಾಡುತ್ತಾ 
ಹಾಸ್ಟೆಲ್ ಸ್ನೇಹಿತರು ಕಲಿತ ವಿದ್ಯಾರ್ಥಿಗಳು ಸೇರಿ ಅಮ್ಮಾ ಫೌಂಡೇಷನ್ ಸಂಸ್ಥೆಯನ್ನು ಹುಟ್ಟಿ ಹಾಕಿ ಇಂತಹ ಅದ್ಭುತ ಕೆಲಸವನ್ನು ನೀವು ಮಾಡುತ್ತಾ ಬಂದಿದ್ದೀರಿ ಅಮ್ಮ ಫೌಂಡೇಶನ್ ಬೆಂಗಳೂರು ಇದರಲ್ಲಿ ಉತ್ತರ ಕರ್ನಾಟಕದ ಭಾಗದ ಜನರು ಹೆಚ್ಚಿದ್ದೀರಿ ಬಹಳಷ್ಟು ಸಮಸ್ಯೆಗಳು ಉತ್ತರ ಕರ್ನಾಟಕದ ಭಾಗದಲ್ಲಿದೆ ಆ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಕೆಲಸ ನಿಮ್ಮ ತಂಡದಿಂದ ಆಗಲಿ ಅಲ್ಲದೆ ಹಲವಾರು ರೀತಿಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳು ಇದ್ದು ಅದರಲ್ಲಿ ಪ್ರಮುಖ ಸಮಸ್ಯೆಗಳನ್ನು ನೀವು ತೆಗೆದುಕೊಂಡು ನಿಮ್ಮ ಅಮ್ಮಾ ಪೌಂಡೇಶನ್ ಡಿಂದ ಸಮಾಜಕ್ಕೆ ಅನುಕೂಲ ಆಗುವಂತಹ ಸಮಾಜಿಕ ಕಾರ್ಯಗಳನ್ನು ಮಾಡಿ ಅದಕ್ಕೆ ನಮ್ಮ ಮಾರ್ಗದರ್ಶನ ಸಹಾಯ ಸದಾ ಇರುತ್ತೆ ಎಂದು ಅವರು ತಿಳಿಸಿದರು.
ನಮ್ಮ ಫೌಂಡೇಶನ್ ಮಾರ್ಗದರ್ಶಕರು ,ತಾಲೂಕ ಕಲ್ಯಾಣ ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಗದಗ ಇದರ ಅಧಿಕಾರಿಗಳಾದ ಬಸವರಾಜ್ ಬಳ್ಳಾರಿ ಡೈರಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಸಾಮಾಜಿಕ ಕೆಲಸಗಳನ್ನು ಮಾಡಲು ಯುವಕರು ಹೆಚ್ಚು ಹೆಚ್ಚು ಅಸಕ್ತಿಯನ್ನು ಬೆಳೆಸಿಕೊಳ್ಳಬೇಕು ಅಂದಾಗ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ನನ್ನ ವಿದ್ಯಾರ್ಥಿಗಳು ನನ್ನ ಶಿಷ್ಯ ಬಳಗ ಸೇರಿಕೊಂಡು ಇವತ್ತು ನೀವು ಅದ್ಭುತವಾದ ಫೌಂಡೇಶನ್ ಮಾಡಿಕೊಂಡಿದ್ದೀರಿ 
ಹಾಗೂ ಒಳ್ಳೆಯ ಸಾಮಾಜಿಕ ಆರ್ಥಿಕ ಶೈಕ್ಷಣಿಕ ವಿಚಾರಗಳನ್ನು ಹಿಂದುಳಿದವರಿಗೆ ದೀನದಲಿತರಿಗೆ ಮುಟ್ಟಿಸುವ ನಿಮ್ಮ ಕನಸುಗಳು ನನಸಾಗಲಿ, ಸದಾ ನನ್ನ ಮಾರ್ಗದರ್ಶನ ತನು ದನ ಮನದಿಂದ ನಿಮ್ಮ ಮೇಲೆ ಇರುತ್ತೆ ಎಂದು ತಿಳಿಸಿದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಟಿ ಎಂ ಮಂಜುನಾಥ್ ಖ್ಯಾತ ಹೈಕೋರ್ಟ್ ವಕೀಲರು ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಅಮ್ಮಾ ಫೌಂಡೇಶನ್ ಬರೀ ಉತ್ತರ ಕರ್ನಾಟಕಕ್ಕೆ ಸೀಮಿತ ಆಗದೆ ಇಡಿ ರಾಜ್ಯಾದ್ಯಂತ ನಿಮ್ಮ ಫೌಂಡೇಶನ್ ಕೆಲಸ ಮಾಡಬೇಕಾಗುತ್ತದೆ ಅಂದಾಗ ಮಾತ್ರ ನಿಮ್ಮ ಫೌಂಡೇಶನ್ ಹೆಸರು ಇಡೀ ರಾಜ್ಯದ ತುಂಬಾ ನಿಮ್ಮ ಕೆಲಸ ಕಾರ್ಯಗಳ ಮೂಲಕ ಹೆಸರುವಾಸಿಯಾಗುತ್ತದೆ ಅಲ್ಲದೆ ಬಡವರಿಗೆ ವಿಕಲಚೇತನರಿಗೆ ನಿರ್ಗತಿಕರಿಗೆ ಅಂದ ಅನಾಥ ವಿವಿಧ ಆಶ್ರಮಗಳಿಗೆ ಬಹಳಷ್ಟು ಸಹಾಯ ಸಹಕಾರ ಮಾಡುತ್ತಾ ಅವರನ್ನು ಸಹ ಸಮಾಜಡಲ್ಲಿ ಮೇಲೆತರಕ್ಕೆ ತರಲು ತಾವು ಸತತ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದ ಕುರಿತು ಮಾತನಾಡಿದ ವಕೀಲರಾದ ಹನುಮೇಶ ಗುಂಡೂರು ಬಹಳಷ್ಟು ಫೌಂಡೇಶನ್ ಗಳು ಸಂಘ-ಸಂಸ್ಥೆಗಳು ಕೆಲಸವನ್ನು ನಿರ್ವಹಿಸುತ್ತಿದೆ ಬೆಂಗಳೂರಿನ ನಗರಕ್ಕೆ ಉತ್ತರ ಕರ್ನಾಟಕದ ಜನರು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಬಂದಿರುತ್ತಾರೆ ಆದರೆ ಅವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇರುವುದಿಲ್ಲ ನಿಮ್ಮ ಫೌಂಡೇಶನ್ ಮುಖಾಂತರ ಹಾಗೂ ಸರ್ಕಾರದ ಸಹಯೋಗದೊಂದಿಗೆ ಈ ಸಮಸ್ಯೆಗೆ ಏನಾದರೂ ಪರಿಹಾರವನ್ನು ಹುಡುಕಿ ಮುಂದಿನ ದಿನಮಾನಗಳಲ್ಲಿ ಒಳ್ಳೆಯ ವ್ಯವಸ್ಥೆ ನಿರ್ಮಾಣ ಮಾಡುವುದು ಕುರಿತು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮ್ಮ ಫೌಂಡೇಶನ್ ಅಧ್ಯಕ್ಷರು ಹಾಗೂ ವಕೀಲರಾದಂತ ಶ್ರೀ ಮೈಲಾರಪ್ಪ ಡಿ ಎಚ್ ರವರು ಮಾತನಾಡುತ್ತಾ ನಮ್ಮ ಅಮ್ಮಾ ಫೌಂಡೇಷನ್ ಸುಮಾರು ಹುಟ್ಟು ಹಾಕಿ ಒಂದು ವರ್ಷ ಕಳೆದಿದೆ ಈ ಒಂದು ವರ್ಷದಲ್ಲಿ ಹಲವಾರು ರೀತಿಯ ಸಾಮಾಜಿಕ, ಶೈಕ್ಷಣಿಕವಾಗಿ ರಾಜ್ಯದ ತುಂಬಾ ಹಲವಾರು ರೀತಿಯ ಕೆಲಸವನ್ನು ಮಾಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇದೆ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಅಮ್ಮಾ ಫೌಂಡೇಷನ್ ಬೆಳವಣಿಗೆ ಮಾಡುತ್ತೇವೆ ಎಂದು ಹೇಳಿದರು. 
ಶ್ರೀ ಪರಶುರಾಮ್ ತಳವಾರ್ ಕಾರ್ಯಕ್ರಮವನ್ನು ನಿರೂಪಿಸಿದರು
ಶ್ರೀ ಸುರೇಶ್ ಹಾಳಕೇರಿ ಸ್ವಾಗತಿಸಿದರು
ಶ್ರೀ ವಿಶ್ವನಾಥ ದಲಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಶ್ರೀ ಪ್ರಶಾಂತ್ ನಾಗರಹಳ್ಳಿ
ಶ್ರೀ ಬಸವರಾಜ್ ಲಾಲಿ
ಶ್ರೀ ಮಂಜುನಾಥ ನಿಡಗುಂದಿ
ಶ್ರೀ ಮಲ್ಲಿಕಾರ್ಜುನ್ ಪೂಜಾರ
ಶ್ರೀ ಬಸವರಾಜ್ ಪೂಜಾರ
ಶ್ರೀಮತಿ ಸೌಮ್ಯ ಆರ್ ಸಿ ಶರೀಫ ಡಿ ಎಚ್
ಶ್ರೀ ಮಾರುತಿ ಜಿ ಹೆಚ್ ಇನ್ನೂ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣಿಕರ್ತರಾದರು.
