ವಿಂಡೋ ಫ್ಯಾನ್ ವಾಹನಗಳ ಅಬ್ಬರಕ್ಕೆ ತಾಲೂಕಿನ ಜನ ಹೈರಾಣು
ಯಲಬುರ್ಗಾ : ತಾಲೂಕಿನ ಸಂಕನೂರ. ಹಾಗೂ ಮುಧೋಳ ಗ್ರಾಮದ ಲೋಕೋಪೋಗಿ ಇಲಾಖೆಗೆ ಸೇರಿದ ಎಸ್ ಹೆಚ್ ರಸ್ತೆಯಲ್ಲಿ ಭಾರಿ ಗಾತ್ರದ 28 ಗಾಲಿ ಇರುವ ವಾಹಗಳ ಓಡಾಟದಿಂದ. ತಾಲೂಕಿನ ಬಹುತೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕಿತ್ತು ಹೋಗಿವೆ ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ಸಂಕಟವಾಗಿದೆ. ಆದರೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು. ಕ್ಷೇತ್ರದ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಟಾಟಾ ವಿಂಡ್ ಫ್ಯಾನ್ ಕಂಪನಿ ಉಪ ಏಜೆನ್ಸಿ ಜಿ ಪವರ. ಪ್ರೈವೇಟ್ ಲಿಮಿಟೆಡ್ ಕಂಪನಿಯ ಶ್ರೀನಿವಾಸ ಹಾಗೂ ಮಾಲ್ವ ಕಂಪನಿಯ ವಾಹನಗಳು ರಾತ್ರಿ ಆಗಲು ಎನ್ನದೆ ಪ್ಯಾನ್ ನಿರ್ಮಾಣ ಮಾಡುವುದಕ್ಕೆ ಸಿಮೆಂಟ್ ತುಂಬಿಕೊಂಡು ಯಮ ಸ್ವರೂಪಿಯಾಗಿ ಟಿಪ್ಪರ್ ಲಾರಿಗಳು ಓಡಾಡುತ್ತಿವೆ .
ತಾಲೂಕಿನ ಸಂಕನೂರು ಗ್ರಾಮದ ಕೃಷಿ ಭೂಮಿಯಲ್ಲಿ. ಫ್ಯಾನಿನ ಬಿಡಿ ಭಾಗಗಳನ್ನು ಸಂಗ್ರಹ ಮಾಡಲಾಗಿದ್ದು ಇವುಗಳನ್ನು ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಮಧ್ಯವರ್ತಿಗಳ ಮುಖಾಂತರ ರೈತರ ಕೃಷಿ ಭೂಮಿಯನ್ನು 30 ವರ್ಷಗಳ ಕರಾರು ಮೇರೆಗೆ ಖರೀದಿ ಮಾಡುತ್ತಾರೆ 30 ಗುಂಟೆ ಮಾತ್ರ ಭೂ ಪರಿವರ್ತನೆ ಮಾಡಿ ಇನ್ನುಳಿದ ಭೂಮಿಯನ್ನು ಪರಿವರ್ತನೆ ಮಾಡದೆ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಕೆ ಮಾಡಬೇಕಾದರೆ ರೈತರಿಗೆ ಮಾರುಕಟ್ಟೆಯ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಿಗೆ ದರ ನೀಡಬೇಕು ಎನ್ನುವ ನಿಯಮ ಇದ್ದರು ಸ್ಥಳೀಯ ರಾಜಕಾರಣಿಗಳ ಮಧ್ಯವರ್ತಿಗಳ ಮುಖಾಂತರ ಖರೀದಿ ಮಾಡಿ ಅಲ್ಪ ಸ್ವಲ್ಪ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಮಾಡಿ ಯಲಬುರ್ಗಾ ಕ್ಷೇತ್ರದಲ್ಲಿ ಸರ್ಕಾರದ ನಿಯಮ ಆಟ ಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಖಾಸಗಿ ಕಂಪನಿಗೆ ರಕ್ಷಣೆ ನೀಡುವುದಕ್ಕೆ ಮುಂದಾಗುತ್ತಿದ್ದಾರೆ ರಾತ್ರಿ ಹಗಲು ಎನ್ನದೆ ತಾಲೂಕಿನ ಮುಧೋಳ ಗ್ರಾಮದ ಇಕ್ಕಟ್ಟು ಗಾತ್ರದ ರಸ್ತೆ ಮೇಲೆ ನಿತ್ಯ ವಾಹನಗಳು ಓಡಾಡುತ್ತಿದ್ದು, ಇದರಿಂದ ಸಾರ್ವಜನಿಕರು ಸಂಚರಿಸಲು ತೊಂದರೆಯಾಗಿದ್ದು, ಫ್ಯಾನ್ ಸಾಗಣೆ ಮಾಡುವ ವಾಹನ ಚಲಿಸಿದರೆ, ಎದುರಿಗೆ ಬರುವ ವಾಹನಗಳಿಗೆ ರಸ್ತೆ ಇಲ್ಲದಂತಾಗಿ, ಪಕ್ಕದ ಹೊಲದಲ್ಲಿ ಇಳಿಯುವಂತಾಗಿದೆ.
ವೇಗವಾಗಿ ಬರುತ್ತಿರುವ ದ್ವಿಕಚ್ರವಾಹನಗಳು ಸ್ವಲ್ಪ ಎಡವಿದರೆ ತಗ್ಗು ಗುಂಡಿಗಳಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ ನಿತ್ಯ ಹೋಗುವ ಕೂಲಿ ಕಾರ್ಮಿಕರು ರೈತರು, ಮಹಿಳೆಯರು ಶಾಲಾ ಕಾಲೇಜು ಮಕ್ಕಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಈ ಕುರಿತು ಪ್ರಶ್ನಿಸಿದರೆ ಪೊಲೀಸ್ ಇಲಾಖೆಯವರು ಲೋಕೋಪೋಗಿ ಇಲಾಖೆ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದಾರೆ. ಕೇಳಲು ನೀವ್ಯಾರು ಎಂದು ಕಂಪನಿಯ ಬೆಂಬಲಕ್ಕೆ. ಗುಂಡಗಳನ್ನು ಬಿಟ್ಟು ಪ್ರಶ್ನೆ ಮಾಡಿದವರ ಮೇಲೆ ದಬ್ಬಾಳಕ್ಕೆ ಮಾಡುತ್ತಾರೆ ಎನ್ನುವ ಆರೋಪ ಇದೆ ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಸಂಬಂಧ ಪಟ್ಟ ಇಲಾಖೆ ಇವರಿಗೆ ಸಂಪೂರ್ಣ ರಕ್ಷಣೆ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಯನ್ನು ಕಳೆದ ಆರು ತಿಂಗಳ ಹಿಂದೆ ಕೈಗೆತ್ತಿಕೊಳ್ಳಲಾಗಿತ್ತು.
ಆದರೆ ಬಹು ಗಾತ್ರದ ವಾಹನಗಳ ಓಡಾಡುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಮೇಲೆ ಕಂಕರ್ ಚೆಲ್ಲಾಪಿಲ್ಲಿಯಾಗಿದ್ದರಿಂದ ದ್ವಿಚಕ್ರ ವಾಹನ ಸವಾರ, ಪಾದಚಾರಿಗಳಿಗೆ ತೊಂದರೆಯಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಲಬುರ್ಗಾ ತಾಲೂಕಿನ ಸಂಕನೂರ ಹಾಗೂ ಮುಧೋಳ ಹಾಗೂ ಇನ್ನಿತರ ಗ್ರಾಮಗಳಲ್ಲಿ ಸಂಜೆಯಾದರೆ ಸಂಚರಿಸುವುದೇ ಕಷ್ಟ, ಅತಿ ವೇಗವಾಗಿ ಟಾಟಾ ಕಂಪನಿ ಗೆ ಸಂಬಂಧಪಟ್ಟ ವಿಂಡ್ ಫ್ಯಾನಿನ ಜಿ ಪವರ ಹಾಗೂ ಮಾಲ್ವ ಕಂಪನಿಯ ಲಾರಿಗಳು ಎಂ. ಸ್ಯಾಂಡ್. ಕಡಿ ತುಂಬಿಕೊಂಡು ಅಧಿಕ ಭಾರ ಹೊತ್ತು ಸಂಚರಿಸುವ ಟಿಪ್ಪರ್ ಗಳಿಂದ ತಾಲೂಕಿನ ನಾನಾ ರಸ್ತೆಗಳಲ್ಲಿ ಸಣ್ಣ ಸಣ್ಣ ಜಲ್ಲಿಕಲ್ಲುಗಳು ರಸ್ತೆಯ ಮೇಲೆ ಬಿದ್ದಿವೆ ದೊಡ್ಡ ರಸ್ತೆಯಲ್ಲಿ ಓಡಾಡುವ ವಾಹನಗಳು ಗ್ರಾಮೀಣ ಭಾಗದ ಸಣ್ಣ ರಸ್ತೆಯಲ್ಲಿ 38 ಗಾಲಿಯ ವಾಹನಗಳು ಸಂಚಾರ ಮಾಡುತ್ತಿವೆ ಇದರಿಂದ ತಾಲೂಕಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ ಕ್ರಮಕ್ಕೆ ಮುಂದಾಗ ಬೇಕಾದ ಅಧಿಕಾರಿಗಳು ಖಾಸಗಿ ವಿಂಡ್ ಫ್ಯಾನ್ ಕಂಪನಿಗಳ ರಕ್ಷಣೆಗೆ ನಿಂತಿವೆ
ಯಲಬುರ್ಗಾ ಕ್ಷೇತ್ರದ ಶಾಸಕರ ಸಹೋದರ ವಿರುಪಾಕ್ಷಪ್ಪ. ಹಾಗೂ ನವಲಿ ಹಿರೇಮಠ ಅವರಿಗೆ ಸಂಬಂಧಿಸಿದ ಕ್ರಷರ್ ಮೂಲಕ ತಾಲೂಕಿನಲ್ಲಿ ನಡೆಯುವ ವಿಂಡ್ ಫ್ಯಾನಗಳ ಕೆಲಸಕ್ಕೆ ಹಾಗೂ ಕಾಮಗಾರಿಗಳಿಗೆ ಕೊಪ್ಪಳ ತಾಲೂಕಿನ ಕೆರಳಿ ಗ್ರಾಮದ ಶಾಸಕರ ಸಹೋದರ ಕ್ರಷರ್ ಗಳಲ್ಲಿ ಮಾತ್ರ ಕಡಿ ತರಬೇಕು ಇನ್ನುಳಿದ ಕ್ರಷರ್ ಮೇಲೆ ವಿವಿಧ ಕಾನೂನು ನೆಪ ಹೇಳಿ ಸಂಪೂರ್ಣ ಬಂದ ಮಾಡಿದ್ದಾರೆ ಕ್ಷೇತ್ರದಲ್ಲಿ ಶಾಸಕರ ಸಹೋದರ ಹಾಗೂ ನವಲಿ ಹಿರೇಮಠ ಅವರೇ ಸೂಪರ ಶಾಸಕರಾಗಿದ್ದಾರೆ ಕ್ಷೇತ್ರದ ಜನ ಮುಂದಿನ ದಿನಮಾನಗಳಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ
. ಅರವಿಂದ ಗೌಡ ಪಾಟೀಲ ಮಾಜಿ ಜಿಪಂ ಸದಸ್ಯರು ಯಲಬುರ್ಗಾ
ನಮ್ಮ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ರಸ್ತೆಗಳಲ್ಲಿ ಸಾರ್ವಜನಿಕ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುವ ಓವರ್‌ಲೋಡ್ ಎಂ ಸ್ಯಾಂಡ್ ಟಿಪ್ಪರ್ ಹಿಡಿದು ಪ್ರಕರಣ ದಾಖಲು ಮಾಡಲಾಗಿದೆ ಸಣ್ಣ ರಸ್ತೆಯಲ್ಲಿ ದೊಡ್ಡ ವಾಹನ ಓಡಾಡಬಾರದು ಹೆಚ್ಚಿನ ಮಾಹಿತಿಗೆ ಕೊಪ್ಪಳ ಸಾರಿಗೆ ಇಲಾಖೆ ಆರ್ ಟಿ ಓ ಅವರನ್ನು ವಿಚಾರಿಸಿ ಎಂದರು
