Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಮೂರು ಜನ ಸಿಬ್ಬಂದಿಗಳ ಅಕ್ರಮ ನೇಮಕಕ್ಕೆ ಅಧಿಕಾರಿಗಳ ಶಾಮಿಲಿನ ಅನುಮಾನ.CEO ರನ್ನು ಅಮಾನತ್ತು ಗೊಳಿಸುವಂತೆ ನಿರುಪಾದಿ ಕೆ ಗೊಮರ್ಸಿ ಆಕ್ರೋಶ.

 

ಸಿಂಧನೂರು :- ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ದಲ್ಲಿ ಕಾನೂನುಬಾಹಿರವಾಗಿ ಮೂರು ಜನ ಸಿಬ್ಬಂದಿಗಳ ನೇಮಕ ಮಾಡಿಕೊಂಡ ಸಿಇಓ ಅವರನ್ನು ಅಮಾನತು ಮಾಡುವಂತೆ ಇಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಪತ್ರಿಕಾಗೋಷ್ಠಿ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದ ಪ್ರಧಾನ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಯವರು ಮೂರು ಜನ ಸಿಬ್ಬಂದಿಗಳ ಅಕ್ರಮ ನೇಮಕಾತಿಯ ಕುರಿತು ತಾಲೂಕಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿದರು ಈಗಾಗಲೇ ಕೆಲಸ ಮಾಡುತ್ತಿರುವ ಮೂರು ಜನ ಸಿಬ್ಬಂದಿಗಳನ್ನು ಕೈ ಬಿಟ್ಟು ತರಾತುರಿಯಲ್ಲಿ ಯಾವುದೇ ನೇಮಕಾತಿ ಪ್ರಕಟಣೆ ಹೊರಡಿಸದೆ ತಮ್ಮ ಆಪ್ತರನ್ನು ಮಾತ್ರ ಸಂಘದಲ್ಲಿ ಕಾರ್ಯನಿರ್ವಹಿಸಲು ನೇಮಕಾತಿ ಮಾಡಿಕೊಂಡಿರುತ್ತಾರೆ. ಈ ಅಕ್ರಮ ನೇಮಕಾತಿಯಲ್ಲಿ ಆಡಳಿತ ಮಂಡಳಿಯ ಮತ್ತು ಸಂಘದ ಸಿಇಒ ಕೆ ವಿರುಪಾಕ್ಷಪ್ಪ ಕೆಂಗಲ್ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು ಈ ವಿಷಯದ ಕುರಿತು ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸಿಂಧನೂರು ಉಪಯು ಭಾಗ ಇವರ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು ಈ ಮನವಿಯನ್ನ ಪರಿಶೀಲಿಸಿದ ಸಹಾಯಕ ನಿಬಂಧಕರು ಮುಖ್ಯ ಕಾರ್ಯನಿರ್ವಾಹಕರಿಗೆ ನೇಮಕಾತಿ ತಡೆಹಿಡಿಯುವಂತೆ ಆದೇಶ ಹೊರಡಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತಾಗಿ ಮಾನ್ಯ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರು ರಾಯಚೂರು ಹಾಗೂ ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೂ ಕೆ ಆರ್‌ಎಸ್ ಪಕ್ಷದ ವತಿಯಿಂದ ದೂರು ಸಲ್ಲಿಸಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಮೇಲಿನ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ರಾಜಕೀಯ ಒತ್ತಡಕ್ಕೆ ಮಣಿದು ಎಲ್ಲಾ ಹಂತದ ಅಧಿಕಾರಿಗಳು ಈ ಅಕ್ರಮ ನೇಮಕಾತಿಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಅನುಮಾನಕ್ಕೆ ಗುರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿಗಳ ನೇಮಕಾತಿಗೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ನೀತಿ-ನಿಯಮಗಳನ್ನ ಮತ್ತು ಕಾಯ್ದೆ-ಕಾನೂನುಗಳನ್ನ ಪಾಲನೆ ಮಾಡದೆ ತರತೂರಿಯಲ್ಲಿ ಕಾನೂನುಬಾಹಿರವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುತ್ತಾರೆ. ನೇಮಕಾತಿಗೆ ಸಂಬಂಧಿಸಿದಂತ ವಿದ್ಯಾ ಅರ್ಹತೆ ಇಲ್ಲದ, ಕಾರ್ಯದರ್ಶಿಯ ಸಂಬಂಧಿಗಳನ್ನ ನೇಮಿಸಿಕೊಂಡಿದ್ದು ಯಾವುದೇ ಪತ್ರಿಕಾ ಪ್ರಕಟಣೆ ಮಾಡದೇ, ಪರೀಕ್ಷೆಗಳನ್ನ ಎದುರಿಸದೆ ನಿಯಮಗಳನ್ನು ಗಾಳಿಗೆ ತೂರಿ ತಾತ್ಕಾಲಿಕವಾಗಿ ಸಿಬ್ಬಂದಿಗಳ ನೇಮಕವಾಗಿರೋದು, ವಿಪರ್ಯಾಸ. ಈ ಅಕ್ರಮ ನೇಮಕಾತಿಗೆ ಸಂಬಂಧಪಟ್ಟಂತೆ ರಾಜಕೀಯ ಮತ್ತು ಅಧಿಕಾರಿಗಳ ವ್ಯಕ್ತಿಗಳ ಒತ್ತಡಕ್ಕೆ ಮಣಿದಿರುವ ಆಡಳಿತ ಮಂಡಳಿಯವರು ಸಾಲಗುಂದ ಗ್ರಾಮದ ನೂರಾರು ಅರ್ಹ ವಿದ್ಯಾವಂತ ಯುವಕರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಸಾಲುಗುಂದ ವಿದ್ಯಾವಂತರಾದ ಈ ಸಿಬ್ಬಂದಿಗಳ ಅಕ್ರಮ ನೇಮಕಕ್ಕೆ ಹಲವಾರು ದಿನಗಳಿಂದ ಹೋರಾಟ ನಡೆಸಿದ ರಾಜಶೇಖರ ಗುಡಿ ಮಾತನಾಡಿ ಯಾಕ್ರಮ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿದು ಮರು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಅರ್ಹ ವಿದ್ಯಾವಂತರಿಗೆ ಈ ಸಿಬ್ಬಂದಿಯ ಹುದ್ದೆ ಸಿಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶರಣಪ್ಪ ಬೇರಿಗಿ,ಅಜಿದ್ ಕುನ್ನಟಗಿ,ಮಾರಪ್ಪ ಬೇರಿಗೆ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

Related posts

2023 ರ ಸ್ವಾತಂತ್ರೊö್ಯÃತ್ಸವ ದಿನಾಚರಣೆ ನಿಮಿತ್ಯ ಅತ್ಯುತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಪುರಸ್ಕಾರ ಪಡೆದವರ ಮಾಹಿತಿ ನೀಡುವ ಕುರಿತು.

satyadarshana

ಮತಾಂತರ ನಿಷೇಧ ಕಾಯ್ದೆಯನ್ನು ಬಲವಾಗಿ ಖಂಡಿಸಲು ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ.ಸಿದ್ದರಾಮಯ್ಯ  

satyadarshana

2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ.

satyadarshana

Leave a Comment