Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ- ಡಾ.ಮಾದಿ.

ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ- ಡಾ.ಮಾದಿ.

 ಕಾರಟಗಿ :   ಇಂದು ಸಮಾಜದಲ್ಲಿ ಬಾಂಧವ್ಯಗಳು ಹಳಸಿವೆ

ಹಿಂದೆ ಅವಿಭಕ್ತ ಕುಟುಂಬದಲ್ಲಿ ಅಜ್ಜ,ಅಜ್ಜಿ ಕಥೆಗಳ ಮೂಲಕ ಸಂಸ್ಕಾರ ನೀಡುತ್ತಿದ್ದರು,

ಹಿರಿಯರ ಬಗ್ಗೆ ಅಪಾರ ಗೌರವವಿತ್ತು. ಇಂದಿನ ಸಮಾಜಗಳು ವಿಭಕ್ತ ಕುಟುಂಬಗಳಾಗಿದ್ದು ತಂದೆ ತಾಯಿ ಇವರಿಬ್ಬರು ದುಡಿಮೆಯಲ್ಲಿ ತೊಡಗಿಕೊಂಡ ನಿಮಿತ್ಯ ವೃದ್ಧಾಶ್ರಮಗಳು ಆರಂಭಗೊಂಡಿವೆ.

ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗಲೇl ಸಾತ್ವಿಕ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಈ ದಿಸೆಯಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ತರಾಗಬೇಕೆಂದು ಡಾ.ಬಿ.ಕೆ.ಮಾದಿ ಕರೆ ನೀಡಿದರು.

ಪಟ್ಟಣದ ಎಲ್. ವಿ. ಟಿ. ನಿಸರ್ಗ ದಾಮದ “ಬಿ.ಜಿ. ಅರಳಿ” ವೇದಿಕೆಯಲ್ಲಿ ಜರುಗಿದ 2002ನೇ ಸಾಲಿನ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅತಿಥಿ ಉಪನ್ಯಾಸದಲ್ಲಿ ಮಾತನಾಡುತ್ತಾ ,ಜನತೆಗೆ ಹಣದ ಹುಚ್ಚು ಹಿಡಿದಿದೆ, ನಿಜವಾದ ಶ್ರೀಮಂತಿಕೆ ಕುರಿತು ವಚನಕಾರರ ನಿಲುವು ಇಂದಿನ ಕಾರ್ಯಕ್ರಮಕ್ಕೆ ಅನ್ವಯಗೊಳ್ಳುತ್ತದೆ ಎಂದರು.

ಕಾರಟಗಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ರಾಜಶೇಖರ್ ಮಾತನಾಡಿ ವಿದ್ಯಾರ್ಥಿಗಳಾಗಿರುವಾಗ ಸಮರ್ಥ ಲೆಕ್ಕ ಕಲಿತ ನಿಮಿತ್ಯ ಬದುಕಿನ ಬದ್ಧತೆಗೆ ಲೆಕ್ಕಾಚಾರವಿದ್ದಾಗ ಬ್ರಷ್ಟಾಚಾರ ದೂರವಾಗಿ ದೈನಂದಿನ ಬದುಕು ದೈವತ್ವದ ಕುರುಹುವಾಗಿರುತ್ತದೆ.

ಕಠಿಣ ಪರಿಶ್ರಮದಿಂದಾಗಿಯೇ ನೀವೆಲ್ಲರೂ ನಿಮ್ಮದೇ ಆದ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿರುವುದು ಅಂದು ನಿಮಗೆ ವರ್ಗ ಶಿಕ್ಷಕನಾಗಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಪ್ರೊ. ಗಂಗಮ್ಮ ಹಿರೇಮಠರು ಮಾತನಾಡುತ್ತಾ ಸಂಬಂಧಗಳು ಇಂದು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ನಿಮಿತ್ಯ ಮೌಲ್ಯಯುತ ಬದುಕಿನ ಸಮಾಜ ನಿರ್ಮಿಸಲು ನಾವೆಲ್ಲರೂ ಶ್ರಮಿಸಬೇಕಿದೆ ಎಂದರು.

ಶಿಕ್ಷಕಿ ಶ್ರೀಮತಿ. ಗೀತಾ ಮಾತನಾಡಿ ಭಾಷಾಜ್ಞಾನವು ನಮ್ಮನ್ನು ಹೆಚ್ಚು ಜ್ಞಾನವಂತರನ್ನಾಗಿಸುತ್ತದೆ. ಒಬ್ಬ ವ್ಯಕ್ತಿಯ ಬದುಕಿನ ಬೆಳಕಿಗೆ ಕಾರಣ ಮುಂದಿರುವ ಗುರಿ, ಹಿಂದಿರುವ ಗುರು ಎನ್ನುವುದು ಅತ್ಯಂತ ಸತ್ಯವಾದ ಮಾತು. ಇದು ನಿಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಗಿರುವುದು ಸಂತಸದ ಸಂಗತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ.ವಿಜಯಲಕ್ಷ್ಮಿ ಮಾತನಾಡಿ ನಾವು ನಿಮ್ಮನ್ನು ಸಿದ್ಧಗೊಳಿಸಿದಾಗ ಯಾವುದೇ ಸಮೂಹ ಮಾಧ್ಯಮಗಳು ಇರಲಿಲ್ಲ. ಇಂದು ಅವುಗಳ ಹಾವಳಿ ಹೆಚ್ಚಾಗಿರುವುದು ನಮಗೆಲ್ಲ ತಿಳಿದ ಸಂಗತಿ ಈ ದೆಸೆಯಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಡದೆ ಸದಾಚಾರ, ಸದ್ಭಾವನೆಗಳನ್ನು ಬೆಳಸಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮುಂದಾಗಿರಿ ಎಂದರು.

ತಂದೆಯ ಉಪದೇಶವು ಪುಷ್ಪಕಿರಿಟ, ತಾಯಿಯ ಬೋಧನೆಯು ಕೊರಳ ಹಾರ, ಗುರುವಿನ ಬೋಧನೆಯು ಅಜ್ಞಾನವನ್ನು ಕತ್ತರಿಸಿ ಹಾಕುವ ಖಡ್ಗ ಗುರಾಣಿಗಳು.

ವಿವೇಕಯುತವಾದ ಜ್ಞಾನ, ನೀತಿ, ನ್ಯಾಯ , ಧರ್ಮ ಮಾರ್ಗದಲ್ಲಿ ನಡೆದಾಗಲೇ ನಮ್ಮ ಜೀವನ ಧನ್ಯವು,

ಮಾನ್ಯವುವಾಗುತ್ತದೆ. ಎಂಬುವುದನ್ನು ಬಹುತೇಕ ವಿದ್ಯಾರ್ಥಿ- ವಿದ್ಯಾರ್ಥಿನಿಯರು ತಮ್ಮ ಎರಡು ದಶಕಗಳಾಚೆಗಿನ ಅನುಭವ ಹಂಚಿಕೊಂಡರು. ಕಾರ್ಯಕ್ರಮವು ಡಾ. ಶ್ರುತಿ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು,

ಶ್ರೀಮತಿ ಶಿಲ್ಪಾ ಸರ್ವರನ್ನು ಸ್ವಾಗತಿಸಿದರು,

ಶ್ರೀಮತಿ ನಂದಿನಿ ಪ್ರಸ್ತಾವಿಕವಾಗಿ ಮಾತನಾಡಿದರು, ಸತೀಶ್ ವಂದಿಸಿದರು, ಶಿಕ್ಷಕಿ ಲಕ್ಷ್ಮಿ ನಿರೂಪಿಸಿದರು.

ಹಳೆಯ ವಿದ್ಯಾರ್ಥಿ ವೃಂದ ಎಲ್ಲ ಗುರು, ಗುರುಮಾತೆಯರನ್ನು ಸನ್ಮಾನಿಸಿದರು.

Related posts

ರೈತ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ ನೀಡಿ- ಸಚಿವ ಶಿವರಾಜ ತಂಗಡಗಿ

satyadarshana

ಅನಾರೋಗ್ಯದಿಂದ ಕರ್ತವ್ಯನಿರತ ಬಿಎಸ್ಎಫ್ ಯೋಧ ನಿಧನ.

satyadarshana

ಹುಲಿಗೆಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಕರ್ಯಗಳ ವ್ಯವಸ್ಥೆ: ಸಂಸದ ಕೆ.ರಾಜಶೇಖರ ಹಿಟ್ನಾಳ

satyadarshana

Leave a Comment