Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಉದ್ಯಮ ಉತ್ತೇಜಿಸಲು ಮಾರಾಟ ಮಳಿಗೆ ಸಹಕಾರಿ: ಬಡಿಗೇರ

ಸಂಜೀವಿನಿ ಗುಂಪಿನಿಂದ ತಯಾರಿಸಿದ ಸಾಮಾಗ್ರಿಗಳು ಸಾನ್ವಿ ಮಾರ್ಟ್ ಮಾರಾಟ

ಗಜೇಂದ್ರಗಡ: ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ ಮತ್ತು ಉದ್ಯಮವನ್ನು ಉತ್ತೇಜಿಸಲು ಮುಂದಾಗಲು ಈ ಮಾರಾಟ ಮಳಿಗೆ ಸಹಕಾರಿಯಾಗಿದೆ ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಬಡಿಗೇರ ಹೇಳಿದರು.

ಪಟ್ಟಣದ ಸಾನ್ವಿ ಮಾರ್ಟ್ ನಲ್ಲಿ ಇಂದು ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು ತಯಾರಿಸಿರುವ ಉತ್ನನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎನ್ಆರ್ ಎಲ್ ಎಂ ಸಂಜೀವಿನಿ ಒಕ್ಕೂಟ ಬಡ ಮಹಿಳೆಯ ಸ್ವಯಂ ಉದ್ಯೋಗ ನೀಡುವ ಮೂಲಕ ಅವರನ್ನು ಆರ್ಥಿಕ ಸಾಮಾಜಿಕವಾಗಿ ಮುಂದೆ ಬರಲು ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಟ್ಟಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಮಾರಾಟ ಮಾಡು ವಸ್ತುಗಳು: ಸಂಜೀವಿನಿ ಮಹಿಳಾ ಉದ್ಯಮಿದಾರರಿಂದ ಮಾರ್ಟ್ ನಲ್ಲಿ ಅಗರ ಬತ್ತಿ, ಎಣಿಕೆ ಸಾಮಾಗ್ರಿಗಳು, ಪೇಪರ್ ಪ್ಲೆಟ್, ರೊಟ್ಟಿ, ಗಾಣದ ಎಣ್ಣೆ, ಶೇಂಗಾ, ಕುಸುಬಿ ಚಟ್ನಿ, ಮೂರ್ತಿಗಳು (ಗಿಪ್ಟ) ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಎನ್ ಆರ್.ಎಲ್ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಗುರು ವೀರಾಪೂರು, ಮೇಲ್ವಿಚಾರಕರು ವೀರೇಶ ಎಸ್. ಬಳಿಗಾರ, ತಾಲೂಕು ವ್ಯವಸ್ಥಾಪಕರು ಅನೀಲಕುಮಾರ್, ಸಾನ್ವಿ ಮಾರ್ಟ್ ಅಂಗಡಿಯ ಮಾಲೀಕರು, ಸಂಜೀವಿನಿ ಒಕ್ಕೂಟದ ಸಿಬ್ಬಂದಿಗಳಾದ ಕವಿತಾ ರೋಣದ, ಸಮೀನಾ, ರೋಷನ್ ಬೇಗಂ, ಶಾಂತಾ ಕರಮುಡಿ, ಮಾಲಾ ಕಮ್ಮಾರ, ವಿದ್ಯಾ ರೊಳ್ಳಿ, ಸಂಘದ ಉದ್ಯಮಿದಾರ ಮಹಿಳೆಯರು ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಹಾಜರಿದ್ದರು.

Related posts

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ-2024”

satyadarshana

ಸರ್ಕಾರಿ ಸಾವಲತ್ತುಗಳನ್ನು ಸಕಾಲದಲ್ಲಿ ಪಡೆದು ಮಹಿಳೆಯರು ಸಭಲರಾಗಿ-ಹಾಲಪ್ಪ ಆಚಾರ್.

satyadarshana

2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಎಂ ಸ್ಥಾನ ಒಲಿಯಬಹುದೆಂಬ ಕನಸು ಮೂಡಿದೆಯಂತೆ..?

satyadarshana

Leave a Comment