Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಫೆ.14 ರಿಂದ ಯಲಬುರ್ಗಾ ತಾಲೂಕಿನಲ್ಲಿ ವಾರ್ತಾ ಇಲಾಖೆಯಿಂದ ಬೀದಿ ನಾಟಕ ಕಾರ್ಯಕ್ರಮಗಳ ಪ್ರದರ್ಶನ

ಕೊಪ್ಪಳ :ಫೆಬ್ರವರಿ 13 : ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2023-24ನೇ ಸಾಲಿನಲ್ಲಿ ಕಾರ್ಗಿಲ್ ಮಲ್ಲಯ್ಯ ಅಂಗವಿಕಲರ ಸಂಘ (ರಿ) ಕಲಾತಂಡದ ಮೂಲಕ ಫೆ.14 ರಿಂದ ಫೆ.23 ರವರೆಗೆ ಯಲಬುರ್ಗಾ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ನಡೆಯಲಿವೆ.

ಫೆ.14 ರಂದು ಬೆಳಿಗ್ಗೆ ಕಲ್ಲೂರು ಹಾಗೂ ಸಂಜೆ ಸಂಗನಾಳದಲ್ಲಿ, ಫೆ.15 ರಂದು ಬೆಳಿಗ್ಗೆ ಹೊಸೂರು ಹಾಗೂ ಸಂಜೆ ಹಿರೇಅರಳಿಹಳ್ಳಿಯಲ್ಲಿ, ಫೆ.16 ರಂದು ಬೆಳಿಗ್ಗೆ ಗುನ್ನಾಳ ಹಾಗೂ ಸಂಜೆ ತಾಳಕೇರಿಯಲ್ಲಿ, ಫೆ.17 ರಂದು ಮಾಟಲದಿನ್ನಿ ಹಾಗೂ ಸಂಜೆ ಕರಮುಡಿಯಲ್ಲಿ, ಫೆ.18 ರಂದು ತೊಂಡಿಹಾಳ ಹಾಗೂ ಸಂಜೆ ಬಳೂಟಗಿಯಲ್ಲಿ, ಫೆ.19 ರಂದು ಬೆಳಿಗ್ಗೆ ಹೊಸಳ್ಳಿ ಹಾಗೂ ಸಂಜೆ ಬಂಡಿಯಲ್ಲಿ, ಫೆ.20 ರಂದು ಬೆಳಿಗ್ಗೆ ಬಸಾಪೂರ ಹಾಗೂ ಸಂಜೆ ಸಂಕನೂರನಲ್ಲಿ, ಫೆ.21 ರಂದು ಬೆಳಿಗ್ಗೆ ಶಿರಗುಂಪಿ ಹಾಗೂ ಸಂಜೆ ಹಿರೇಮ್ಯಾಗೇರಿಯಲ್ಲಿ, ಫೆ.22 ರಂದು ಬೆಳಿಗ್ಗೆ ನಿಟ್ಟಾಲಿ ಹಾಗೂ ಸಂಜೆ ಮಸಬಹಂಚಿನಾಳದಲ್ಲಿ, ಫೆ.23 ರಂದು ಬೆಳಿಗ್ಗೆ ನಿಲೋಗಲ್ ಹಾಗೂ ಸಂಜೆ ಹಿರೇವಂಕಲಕುAಟಾ ಗ್ರಾಮದಲ್ಲಿ ಬೀದಿ ನಾಟಕ ಕಾರ್ಯಕ್ರಮಗಳು ಜರುಗಲಿದೆ.

ಕಲಾವಿದರು ಆಯಾ ಗ್ರಾಮದ ಜನ ಸಂದಣಿ ಸ್ಥಳದಲ್ಲಿ ಸರ್ಕಾರದ ಬೀದಿ ನಾಟಕ ಕಾರ್ಯಕ್ರಮಗಳ ಮೂಲಕ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚುರಪಡಿಸುವರು. ಆಯಾ ಗ್ರಾಮಸ್ಥರು ಬೀದಿ ನಾಟಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗಾಗಿದ್ದು ಆತ್ಮಹತ್ಯೆಯನ್ನು ಎಲ್ಲರೂ ಸೇರಿ ತಡೆಗಟ್ಟೋಣ ಕೆ. ಗುರುಪ್ರಸಾದ

satyadarshana

ಎನ್ ಸಿಬಿ ದಾಳಿ, ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಮಂದಿ ವಶಕ್ಕೆ

satyadarshana

ಐಎಂಎ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ; ಸಮಾಜಕ್ಕೆ ಮರಳಿ ಕೊಡುವ ವೈದ್ಯರ ಸೇವೆ ಶ್ಲಾಘನೀಯ ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ

satyadarshana

Leave a Comment