Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ತಿರುಳ್ಗನ್ನಡ ವೇದಿಕೆಯಲ್ಲಿ ಮನತಣಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು —

ಕೊಪ್ಪಳ: ಮಾರ್ಚ್ 10: ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿರುವ ತಿರುಳ್ಗನ್ನಡ ವೇದಿಕೆಯಲ್ಲಿ ಬೆಳಗ್ಗೆ 10ರಿಂದ ಆರಂಭಗೊAಡ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ತಣಿಸಿದವು.
ತಿಪ್ಪೇಶ ಜೆ ಎಂ, ಪರಶುರಾಮ ಬಣ್ಣದ, ಶ್ರೀಶೈಲ ಬಡಿಗೇರ, ಶಿವಪ್ಪ ಹುಳ್ಳಿ, ಚಂದನಾ ಬೆರಗಿ, ಭೂಪತಿ ಬಿಎನ್, ಸುಮಂಗಲಾ ಮೈಸೂರು, ಕೆ.ರಾಮಪ್ಪ, ರಂಜನಿ ಆರತಿ, ಬಸವರಾಜ ಕರಡಕಲ್, ಮಾರುತೇಶ, ವೀರಭದ್ರಪ್ಪ ಶಿವಶಿಂಪಿ ಅವರು ಸುಗಮ ಸಂಗೀತ ನಡೆಸಿಕೊಟ್ಟರು.
ಹುಲಿಗೆವ್ವ ಹಂದ್ರಾಳ, ಅನ್ನಪೂರ್ಣ ಮನ್ನಾಪೂರ, ಮರಿಯಪ್ಪ ಹೆಚ್, ಪರಶುರಾಮ ಉಪ್ಪಾರ, ರಾಮಲಿಂಗಪ್ಪ ಕುಕನೂರ, ಈರಮ್ಮ ಉಂಡಿ, ಮಂಜುನಾಥ ಕಟ್ಟಿಮನಿ, ಚನ್ನಪ್ಪ ಚಲವಾದಿ, ವಾಲ್ಮೀಕಪ್ಪ ಯಕ್ಕರನಾಳ ಅವರು ಜಾನಪದ ಸಂಗೀತವನ್ನು ಸುಸ್ರಾವ್ಯವಾಗಿ ನಡೆಸಿಕೊಟ್ಟರು.
ರಾಮಚಂದ್ರಪ್ಪ ಉಪ್ಪಾರ, ಬಿ ರೇಖಾ ಬುಟ್ಟ, ಜುಮ್ಮನಗೌಡ ಜೂಲಕಟ್ಟಿ, ಬಸವರಾಜ ವಂದಾಲಿ ಅವರು ಹಿಂದೂಸ್ಥಾನಿ ಸಂಗೀತ ನಡೆಸಿಕೊಟ್ಟರು. ರಾಮಣ್ಣ ಅವಣ್ಣಿ ಅವರು ವಚನ ಸಂಗೀತ ಪಸ್ತುತಪಡಿಸಿದರು.
ವಾರೂಣಿ ಆರ್ ನವಲಿ ಅವರು ಭರತ ನಾಟ್ಯದಲ್ಲಿ ಮಿಂಚಿದರು. ಬಸಪ್ಪ ಭರಮಪ್ಪ ಚೌಡ್ಕಿ ಅವರು ಚೌಡ್ಕಿ ಪದಗಳು, ರಾಮಪ್ಪ ಮುತ್ತಾಳ ಅವರು ತತ್ವಪದಗಳು, ದೊಡ್ಡಮಾರೆಪ್ಪ ಚೆನ್ನದಾಸರ ಅವರು ಜಾನಪದ ತತ್ವಪದಗಳನ್ನು ಹೇಳಿ ಮೆಚ್ಚುಗೆ ಗಳಿಸಿದರು.
ಭಾಷಾಸಾಬ್ ಜಿನ್ನಾದ ಅವರ ತಬಲಾ ಸೋಲೊಗೆ, ಶರಣಪ್ಪ ಬನ್ನಿಗೋಳ ಅವರ ಬಯಲಾಟದ ಪದಕ್ಕೆ, ಮಲಕೇಶ ಕೋಟಿ ಅವರ ಹಾಸ್ಯ ರೂಪಕಕ್ಕೆ ಮತ್ತು ಬಸವರಾಜ ಹೆಸರೂರ ಹಾಗೂ ಹೇಮಂತ ನಿಂಗಾಪೂರ ಅವರ ನಾಟಕಕ್ಕೆ ಸಂಗೀತ ಸಹೃದಯರು ಚಪ್ಪಾಳೆ ತಟ್ಟಿದರು. ವಾಸವಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸಮೂಹ ನೃತ್ಯವನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದರು.

Related posts

ಮಂಜುನಾಥ ಹಿರೇಮನಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕ

satyadarshana

ಐತಿಹಾಸಿಕ ಲಕ್ಕುಂಡಿ ಉತ್ಸವದ ಎರಡನೇ ದಿನದ ಸಾಂಸ್ಕøತಿಕ ಕಾರ್ಯಕ್ರಮ

satyadarshana

ನಾಡಿನ ಜನತೆಗೆ ಪೈಗಂಬರ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿಯ ಶುಭಕೋರುವವರು ಜೆಡಿಎಸ್ ತಾಲೂಕು ಅಧ್ಯಕ್ಷರು ಮುಧೋಳ ( ಸಾಗರ್ )

satyadarshana

Leave a Comment