Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಅರ್ಜಿ ಆಹ್ವಾನ

ಗದಗ : ಮಾರ್ಚ 10:  2023-24 ನೇ ಸಾಲಿನ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 10 ತಿಂಗಳ ಅವಧಿಗೆ  ದಿ: 2-5-2023 ರಿಂದ 29-2-2024ರವರೆಗೆ ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಯನ್ನು ನೀಡಲು ಅರ್ಜಿ ಅಹ್ವಾನಿಸಲಾಗಿದೆ.  ಅರ್ಜಿಯನ್ನು ಮಾರ್ಚ 11 ರಿಂದ  ವಿತರಿಸಲಾಗುವುದು.  ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಎಪ್ರಿಲ್ 12 ಆಗಿದ್ದು,   ಸಂದರ್ಶನವನ್ನು  ಎಪ್ರಿಲ್ 15  ರಂದು ಬೆಳಿಗ್ಗೆ 11 ಗಂಟೆಗೆ   ಗದಗ ಭೀಷ್ಮ ಕೆರೆಯ ಹತ್ತಿರ ಇರುವ  ತೋಟಗಾರಿಕೆ ಉಪನಿರ್ದೇಶಕ ನಿರ್ದೇಶಕರ  ಕಚೇರಿಯಲ್ಲಿ ಜರುಗಿಸಲಾಗುವುದು.  ಹಾವೇರಿ ಹಾಗೂ ಧಾರವಾಡ ಜಿಲ್ಲೆ ಅಭ್ಯರ್ಥಿಗಳಿಗೆ  ಸಂದರ್ಶನ ಸ್ಥಳವನ್ನು ಆಯಾ  ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕ ಕಚೇರಿಗಳಲ್ಲಿ ನಿಗದಿತ ಸಮಯದಲ್ಲಿ  ಗುರಿಗೆ ತಕ್ಕಂತೆ ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಸಹಾಯಕ ತೋಟಗಾರಿಕೆ ನಿದೇಶಕರು ( ರಾಜ್ಯ ವಲಯ) ಮತ್ತು ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಗಿದೆ.  

Related posts

ಅನಾರೋಗ್ಯದಿಂದ ಕರ್ತವ್ಯನಿರತ ಬಿಎಸ್ಎಫ್ ಯೋಧ ನಿಧನ.

satyadarshana

ಯಾದಗಿರಿ ಹಾಸ್ಟೆಲ್‌ನಲ್ಲಿ ಉಪ್ಪಿಟ್ಟು ಸೇವಿಸಿದ್ದ 56 ವಿದ್ಯಾರ್ಥಿಗಳು ಅಸ್ವಸ್ಥ

satyadarshana

ರೋಣ ಮತಕ್ಷೇತ್ರದ ಚುನಾವಣೆಯ ಸತ್ಯದರ್ಶನ.

satyadarshana

Leave a Comment