Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಅನಾರೋಗ್ಯದಿಂದ ಕರ್ತವ್ಯನಿರತ ಬಿಎಸ್ಎಫ್ ಯೋಧ ನಿಧನ.

ಗದಗ : ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ . ಬಿಎಸ್‌ಎಫ್‌ ಯೋಧ ಮಲ್ಲಿಕಾರ್ಜುನ ಎಂ ದೊಡ್ಡಮನಿ (34) ಅವರು ಅನಾರೋಗ್ಯದ ಕಾರಣದಿಂದಾಗಿ ಕರ್ತವ್ಯದಲ್ಲಿ  ನಿಧನರಾಗಿದ್ದಾರೆ.

 ಮಲ್ಲಿಕಾರ್ಜುನ್  ದೊಡ್ಡಮನಿ  ಅವರು ಗಜೇಂದ್ರಗಡ ತಾಲೂಕು ಸೂಡಿ ಗ್ರಾಮದವರು . ಇತ್ತೀಚಿಗೆ ರಜೆ ಪಡೆದು ಊರಿಗೆ ಬಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. 09.02.2023 ಯೋಧನ ಪಾರ್ಥಿವ ಶರೀರ ಸೂಡಿ  ಆಗಮಿಸಲಿದೆ

 ಮಲ್ಲಿಕಾರ್ಜುನ ದೊಡ್ಡಮನಿ  ಅವರಿಗೆ ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆದರೆ ಅಕಾಲಿಕವಾಗಿ ನಿಧನ ಹೊಂದಿದ್ದು, ಅತೀವ ದುಃಖ ಉಂಟಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಅಣ್ಣತಂಮ್ಮದಿರನ್ನು ಅಗಲಿದ್ದಾರೆ.

09.02.2023. ಮಧ್ಯಾಹ್ನ 2 ಗಂಟೆಗೆ  ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ. ಮಗನ ಅಕಾಲಿಕ ನಿಧನದಿಂದ  ಅವರ ಕುಟುಂಬದಲ್ಲಿ ಶೋಕ ಮುಡುಗಟ್ಟಿದೆ.

 

Related posts

satyadarshana

ಉದ್ಯೋಗ ಖಾತ್ರಿ ಯೋಜನೆ ಗ್ರಾ. ಪಂ ಮುತ್ತಿಗೆ ಹಾಕಿದ ಗ್ರಾಮಸ್ಥರು

satyadarshana

ಉತ್ತರ ಕರ್ನಾಟಕದಲ್ಲೊಂದು ಲವ್ ಧೋಕಾ.

satyadarshana

Leave a Comment