
ರಾಜಕಾರಣಿಗಳಿಗೆ ಅಧಿಕಾರಮುಖ್ಯವಲ್ಲ, ಜನರ ಸೇವೆಗೆ ಆದ್ಯತೆ ನೀಡಿ ಸಚಿವ ಸಿ.ಸಿ.ಪಾಟೀಲ
ಗದಗ : ೨೦೧೮ರಲ್ಲಿ ಬಿಜೆಪಿ ಪಕ್ಷಕ್ಕೆ ಮತದಾರರು ಜನಾದೇಶ ಮಾಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಾರದಂತೆ ತಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡಿಕೊಂಡು ಮೈತ್ರಿ ಸರ್ಕಾರವನ್ನು ರಚನೆ ಮಾಡಿದ್ದರು. ಆದರೆ, ಅದು ಅಪವಿತ್ರ ಸರ್ಕಾರ ಆಗಿರುವದಿಂದ ಆ ಸರ್ಕಾರ ಬಹಳ ದಿನ ನಡೆಯಲಿಲ್ಲ. ಈ ವೇಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆಗೆ ನಮ್ಮಗೆ ಅವಿನಾಭಾವ ಸಂಬಂಧವಿದೆ. ಅಪಾರ ಪ್ರಮಾಣದ ಮಳೆಯಿಂದ ಸಾಕಷ್ಟು ಪ್ರವಾಹ ಕೂಡ ನಮ್ಮ ಜಿಲ್ಲೆಯಲ್ಲಿ ಸಂಭವಿಸಿತ್ತು. ಆದರೆ, ಮುಖ್ಯಂಮತ್ರಗಳ ನಿದರ್ಶನದ ಪ್ರವಾಹಕ್ಕೆ ತುತ್ತಾಗಿರುವ ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಜಿಲ್ಲೆಯ ರೋಣ ತಾಲೂಕಿನ ಡ. ಸ. ಹಡಗಲಿ ಗ್ರಾಮದಲ್ಲಿ ಶನಿವಾರ ಸಣ್ಣ ನೀರಾವರಿ ಇಲಾಖೆಯ 2021-22 ನೇ ಸಾಲಿನ ಅನುದಾನ ೭೦ ಲಕ್ಷ ರೂ, ವೆಚ್ಚದಲ್ಲಿ ಗ್ರಾಮದ ಹತ್ತಿರ ಹಳಕ್ಕೆ ಚೆಕ್ ಡ್ಯಾಂ ಬ್ರಿಡ್ಜ್ ನಿರ್ಮಾಣ ಮತ್ತ ಹಳ್ಳ ಸುಧಾರಣೆ ಕಾಮಗಾರಿ, ಜಿಲ್ಲಾ ಪಂಚಾಯತ ಅನುದಾನ ೫೦ ಲಕ್ಷ ರೂ, ವೆಚ್ಚದಲ್ಲಿ ಡ.ಸ. ಹಡಗಲಿ ಹೊನ್ನಾಪೂರ ರಸ್ತೆ ಸುಧಾರಣೆ, ಲ್ಯಾಂಡ ಆರ್ಮಿ ಇಲಾಖೆಯ ಅನುದಾನ ೪೫ ಲಕ್ಷ ರೂ, ವೆಚ್ಚದಲ್ಲಿ ಆಶ್ರಯ ಕಾಲೋನಿಯಲ್ಲಿ ಸಿ.ಸಿ. ಚರಂಡಿ ನಿರ್ಮಾಣ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಚಿತ್ರದುರ್ಗ ಇಲಾಖೆಯ ಅನುದಾನ ೮ ಲಕ್ಷ ರೂ, ವೆಚ್ಚದಲ್ಲಿ ಎಸ್.ಸಿ. ಕಾಲೋನಿಯಲ್ಲಿ ಶಾಲಾ ರಸ್ತೆಯಿಂದ ಹೊಸ್ ಗ್ರಾ.ಪಂ ವರೆಗೆ ಸಿ.ಸಿ. ರಸ್ತೆ ನಿರ್ಮಾಣ, ಮುಜರಾಯಿ ಇಲಾಖೆಯ ಅನುದಾನ ೫ ಲಕ್ಷ ರೂ, ವೆಚ್ಚದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ, ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿ ಅನುದಾನ ೫ ಲಕ್ಷ ರೂ, ವೆಚ್ಚದಲ್ಲಿ ಶ್ರೀ ಮಾರುತಿ ಭಜನಾ ಸಂಘ ( ಸಂಗಮೇಶ್ವರ ಭಜನಾ ಸಂಘ) ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನರಗುಂದ ಮತ್ರಕ್ಷೇತ್ರದ ಇತಿಹಾಸದಲ್ಲಿಯೇ ಕಂಡು ಕಾಣದಂತಹ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನು ಮಾಡಲು ಪ್ರಯತ್ನ ಮಾಡುತ್ತಿರುವೆ. ಜನರಿಗೆ ಅವಶ್ಯಕತೆ ಇರುವ ಕೆಲಸಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಲು ಪ್ರತಿಯೊಬ್ಬ ನಾಯಕರು ಪ್ರಯತ್ನ ಮಾಡಬೇಕು. ಪಾರದರ್ಶಕವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಯಾರು ಬಿಜೆಪಿಗೆ ಮತ ಹಾಕುವದಿಲ್ಲ ಅಂತಾ ಹೇಳುವ ವ್ಯಕ್ತಿಗೆ ಮೊದಲು ಸರ್ಕಾರದಿಂದ ಬರುವ ಮನೆಗಳನ್ನು ಮೊದಲು ಹಾಕಬೇಕು.ಇದರಿಂದ ದೇವರು ನಾವು ಮಾಡುತ್ತಿರುವ ಕಾರ್ಯವನ್ನು ನೋಡುತ್ತಾನೆ. ರಾಜಕಾರಣ ಮತ್ತು ಅಧಿಕಾರ ಬಹಳ ತಲೆಗೆ ಹಚ್ಚಿಕೊಳ್ಳಬಾರದು. ಅಧಿಕಾರ ಬಂದಾಗ ಜನರ ಸೇವೆ, ಅಧಿಕಾರ ಇಲ್ಲದಿದ್ದಾಗ ಮನೆಯ ಸೇವೆ ಮಾಡಬೇಕು ಎಂದರು.
ರಾಜ್ಯದಲ್ಲಿ ಮೊದಲು ಭಾರಿಗೆ ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಕಲ್ಯಾಣ ನಿಧಿಯನ್ನು ಜಾರಿಗೆ ತರಲಾಗಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನರಗುಂದ ಮತಕ್ಷೇತ್ರದಲ್ಲಿ ಎಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂಬುವುದರ ಬಗ್ಗೆ ಪಾಂಪಲೆಟ್ ಪ್ರೀಂಟ್ ಮಾಡಿಸಿ, ನಾನು ಕೂಡ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಕೆಲಸ ಮಾಡಿರುವೆ ಎಂಬುವುದರ ಬಗ್ಗೆ ಪಾಂಪಲೆಟ ಪ್ರೀಂಟ್ ಮಾಡಿಸುವೆ. ಅಲ್ಲಿ ಇಲ್ಲಿ ಕುಳಿತುಕೊಂಡು ಮಾತನಾಡುವುದನ್ನು ಭೇಟಿ ಮುಕ್ತ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ಮಾಜಿ ಎಪಿಎಂಸಿ ಸದಸ್ಯ ವಸಂತ ಮೇಟಿ ಮಾತನಾಡಿ, ಮೂರು ವರ್ಷಗಳಿಂದ ಪ್ರಕೃತಿ ವಿಕೋಪದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿದ್ದವು. ಹಡಗಲಿ ಗ್ರಾಮಕ್ಕೆ ೨ ಕೋಟಿ ೨೪ ಲಕ್ಷ ರೂ,ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಮುಗಿಸಿದೇವೆ. ಅಲ್ಲದೆ ಈಗ ಮತ್ತೆ ಗ್ರಾಮದ ಅಭಿವೃದ್ಧಿಗೆ ೨ ಕೋಟಿ ೩ ಲಕ್ಷ ರೂ,ಗಳನ್ನು ಕೂಡ ಸಿ.ಸಿ. ಪಾಟೀಲ ಸಾಹೇಬರು ಬಿಡುಗಡೆಯನ್ನು ಮಾಡಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸಿ.ಸಿ. ಪಾಟೀಲ ಸಾಹೇಬರು ಬೇಕಾದರೆ ಪ್ರಾಣಕೊಡುತ್ತಾರೆ. ಅಲ್ಲಿ ಇಲ್ಲಿ ನಿಂತು ಶಾಸಕರು ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನೇ ಮಾಡುವ ಕೆಲವೊಬ್ಬರು ಶಾಸಕರು ನಮ್ಮ ಊರಿಗೆ ಬರಲಿ ಎಂದು ಹೇಳಿದ ಜನ ಈಗ ಬನ್ನಿ ಸಿ.ಸಿ. ಪಾಟೀಲ ಸಾಹೇಬರು ನಮ್ಮ ಊರಿಗೆ ಬಂದಿದ್ದಾರೆ. ಮುಂದೆ ಬಂದು ಅಭಿವೃದ್ಧಿ ಕಾಮಗಾರಿಗಳನ್ನು ಕೇಳಿ ಎಂದು ವಿರುದ್ಧ ಪಕ್ಷದ ನಾಯಕರಿಗೆ ಹಾಗೂ ಗ್ರಾಮಸ್ಥರಿಗೆ ಕರೆ ನೀಡಿದರು. ಅಭಿವೃದ್ಧಿ ಕಾಮಗಾರಿ ವಿಷಯ ಬಂದಾಗ ಪಕ್ಷ ಬೇದ ಮರೆತು ಮುಂದೆ ಬಂದು ಅಭಿವೃದ್ಧಿ ಕೆಲಸಗಳನ್ನು ತಿಳಿದುಕೊಳ್ಳಬೇಕು. ಕೇವಲ ಗ್ರಾ.ಪಂ ಕಛೇರಿಯಲ್ಲಿ ಕುಳಿತುಕೊಂಡು ಮಾತನಾಡುವ ಗ್ರಾ.ಪಂ ಸದಸ್ಯರು ಅದನ್ನು ಬಿಟ್ಟು ಗ್ರಾಮದ ಅಭಿವೃದ್ಧಿಗೆ ಮುಂದೆ ಬಂದು ಯಾವ ಯಾವ ಇಲಾಖೆಯಲ್ಲಿ ಯಾವ ಯಾವ ಅಭಿವೃದ್ಧಿ ಕೆಲಸಕ್ಕೆ ಅನುದಾನ ಇದೆ ಎಂಬುವದರ ಬಗ್ಗೆ ತಿಳಿದುಕೊಳ್ಳಲು ಮುಂದಾಗಬೇಕು ಎಂದರು.
ಗ್ರಾ.ಪಂ ಲಲಿತಾ ಹೂಲ್ಲರ, ಲಕ್ಕುಂಡಿ ಮಂಡಲ ಅಧ್ಯಕ್ಷ ನಿಂಗಪ್ಪ ಮಣ್ಣೊರ, ಮೀನಾಕ್ಷಿ ಚಲವಾದಿ, ಶಿವಗಂಗಮ್ಮ ಮೇಟಿ, ರೇಣಮ್ಮ ಕಂಪ್ಲಿ, ಗಂಗಾಧರ ಕಮ್ಮಾರ, ಬಿ.ಎಸ್. ಚೇಗರಡ್ಡಿ, ಪ್ರದೀಪ ನವಲಗುಂದ, ಎಸ್.ಬಿ.ಮೇಟಿ, ಶರಣಪ್ಪ ಪಟ್ಟೇದ, ಚಿದಾನಂದ ದಾನರಡ್ಡಿ, ಗುರುಶಾಂತ ಸೂಡಿ, ಸುರೇಶ ಹೂಗಾರ ಸೇರಿದಂತೆ ಬಿಜೆಪೆ ಕಾರ್ಯಕರ್ತರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
