Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಕನ್ನಡ ಕಟ್ಟಾಳುಗಳ ಸಮಾಧಿ ಸ್ಥಳದ ಅಭಿವೃದ್ದಿಗೆ ಆಗ್ರಹ

 

ಗಜೇಂದ್ರಗಡ: ನವೆಂಬರ 3: ಕನ್ನಡ ನಾಡು, ನುಡಿಗೆ ಅಪಾರ ಕೊಡುವೆ ನೀಡಿರುವ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿ ಹಾಗೂ ಸಾಹಿತಿ ದಿ. ಜ್ಞಾನದೇವ ದೊಡ್ಡಮೇಟಿಯವರ ಸಮಾಧಿಯು ಪಾಳುಬಿದ್ದ ಸ್ಥಿತಿಯದ್ದು ಸರ್ಕಾರ, ಅಧಿಕಾರಿಗಳು ಈ ಕೂಡಲೇ ಅಭಿವೃದ್ದಿಗೆ ಮುಂದಾಗಬೇಕು ಎಂದು ಕರ್ನಾಟಕ ಅಭಿವೃದ್ದಿ ವೇದಿಕೆ ರಾಜ್ಯಾಧ್ಯಕ್ಷ ವಿನಾಯಕ ಮು. ಜರತಾರಿ ಆಗ್ರಹಿಸಿದರು.

 ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕನ್ನಡ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿ ಹಾಗೂ ಸಾಹಿತಿ ದಿ. ಜ್ಞಾನದೇವ ದೊಡ್ಡಮೇಟಿಯವರ ಪಾಳುಬಿದ್ದ ಸಮಾಧಿ ಸ್ಥಳದ ಅಭಿವೃದ್ದಿಗಾಗಿ ಹಾಗೂ ಜಕ್ಕಲಿ ಗ್ರಾಮದ ದೊಡ್ಡಮೇಟಿಯವರ ಮನೆಯಲ್ಲಿರುವ ಕನ್ನಡಾಂಬೆಯ ಮೊದಲ ತೈಲಚಿತ್ರವನ್ನು ಕನ್ನಡದ ಮೂಲ ಭುವನೇಶ್ವರಿ ಚಿತ್ರವನ್ನು ಏಕಮೇವ ಭಾವಚಿತ್ರವನ್ನಾಗಿ ಬಳಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ಅಭಿವೃದ್ದಿ ವೇದಿಕೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗಜೇಂದ್ರಗಡ ಪಟ್ಟಣದಿಂದ ಜಕ್ಕಲಿ ಗ್ರಾಮದ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಗದ್ದುಗೆ (ಸಮಾಧಿ) ವರೆಗೆ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.

 ಅಂದಾನಪ್ಪ ದೊಡ್ಡಮೇಟಿಯವರ ಪ್ರಭಾವದಿಂದ ಪುಟ್ಟ ಗ್ರಾಮ ಜಕ್ಕಲಿಗೆ ಮಹಾತ್ಮ ಗಾಂಧೀಜಿ ಹಾಗೂ ನೆಹರು ಸೇರಿದಂತೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಭೇಟಿ ನೀಡಿದ್ದಾರೆ. ಬಾಂಬೆ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತನಾಡಿ, ಕರ್ನಾಟಕಕ್ಕಾಗಿ ಉಪವಾಸ ಸತ್ಯಗ್ರಹ ಮಾಡಿದ್ದಾರೆ. ಮೊದಲ ಪರಿಕಲ್ಪನಾತ್ಮಕ ಕನ್ನಡ ಭುವನೇಶ್ವರಿ ದೇವಿಯ ತೈಲ ಚಿತ್ರ ರಚನೆಗೊಳ್ಳಲು ದೊಡ್ಡಮೇಟಿಯವರೇ ಕಾರಣವಾಗಿದ್ದಾರೆ ಆದರೂ ನಮ್ಮ ಭಾಗದ ಕನ್ನಡ ಹೋರಾಟಗಾರರನ್ನು ಸರ್ಕಾರ ನಿರ್ಲಕ್ಷಿಸಲಾಗುತ್ತಿದೆ ಎಂದರು.

ಅಷ್ಟೇ ಅಲ್ಲದೆ ಆದರ್ಶ ರಾಜಕಾರಣಿ, ಸಾಹಿತಿ ಜ್ಞಾನದೇವ ದೊಡ್ಡಮೇಟಿ ಅವರ ಸಮಾಧಿಯು ಅವರ ತಂದೆಯವರ ಸಮಾಧಿ ಪಕ್ಕದಲ್ಲಿದೆ. ಆ ಸಮಾಧಿಯೂ ಪಾಳುಬಿದ್ದ ದುಸ್ಥಿತಿಯಲ್ಲಿದೆ. ಜ್ಞಾನದೇವ ಅವರು ನಾಡಿನ ಖ್ಯಾತ ಸಾಹಿತಿಗಳಾದ ಡಾ.ಚಂದ್ರಶೇಖರ ಪಾಟೀಲ, ಡಾ.ಎಂ. ಎಂ.ಕಲಬುರ್ಗಿ, ಡಾ.ಗಿರಡ್ಡಿ ಗೋವಿಂದ ರಾಜ, ಸಂಗಮನಾಥ ಹಂಡಿ ಅವರ ಸಹಪಾಠಿಯಾಗಿದ್ದರು. ರಾಮಕೃಷ್ಣ ಹೆಗಡೆ ಮುಖ್ಯ ಮಂತ್ರಿಯಾಗಿದ್ದಾಗ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ನಾಡಿನ ಸೇವೆಗೈದಿದ್ದಾರೆ. ಇವರನ್ನು ನಿರ್ಲಕ್ಷ ಮಾಡುತ್ತಿರುವುದು ನಮ್ಮ ದೌರ್ಭಾಗ್ಯವಾಗಿದೆ ಎಂದರು.

ಸಮಾಧಿ ಸ್ಥಳದ ಅಭಿವೃದ್ದಿಗಾಗಿ ಈಗ ಪಾದಯಾತ್ರೆ ಮಾಡುತ್ತಿದ್ದೇವೆ ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ವಿಧಾನಸೌಧ ಚಲೋ ಎಂದು ಬಸ್‌, ಲಾರಿ, ಟ್ರಾಕ್ಟರ್‌ ಗಳ ಮೂಲಕ ನಮ್ಮ ಭಾಗದ ಜನರನ್ನು ಕರೆದುಕೊಂಡು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಮುಖಂಡ ರವಿ ದಂಡಿನ ಮಾತನಾಡಿ, ದಿ. ಅಂದಾನಪ್ಪ ದೊಡ್ಡಮೇಟಿ ಹಾಗೂ ದಿ. ಜ್ಞಾನದೇವ ದೊಡ್ಡಮೇಟಿಯವರ ಕೊಡುಗೆ ಅಪಾರವಾಗಿದೆ. ನಾಡುನುಡಿಗಾಗಿ ಜೀವನ ಅರ್ಪಣೆ ಮಾಡಿದ್ದಾರೆ. ಆದರೆ ಈಗಿನ ಪೀಳಗೆ ಅವರನ್ನು ಮರೆಯುತ್ತಿದೆ ಆದ್ದರಿಂದ ಪಕ್ಷಾತೀತವಾಗಿ ಪ್ರತಿಯೊಬ್ಬರು ಹೋರಾಟಕ್ಕೆ ಮುಂದಾಗಬೇಕು ಎಂದರು. 

ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಮನೆಯಲ್ಲಿರುವ ಭುವನೇಶ್ವರಿಯ ಮೊದಲ ತೈಲ ಚಿತ್ರವನ್ನು ಕನ್ನಡ ನಾಡಿನ ಭುವನೇಶ್ವರಿ ಅಧಿಕೃತ ಚಿತ್ರವೆಂದು ಮನ್ನಿಸಲ್ಪಡುವ ದಿಶೆಯಲ್ಲಿ ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಚನ್ನಮ್ಮ ಸರ್ಕಲ್‌ ನಿಂದ ಆರಂಭವಾದ ಪಾದಯಾತ್ರೆಯೂ ದುರ್ಗಾದೇವಿ ದೇವಸ್ಥಾನದ ರಸ್ತೆ, ಪುರಸಭೆ, ಚೌಕಿಮಠದ ರಸ್ತೆ, ಅಗಸಿ ಮೂಲಕ ಗಜೇಂದ್ರಗಡ ಪಟ್ಟಣದ ಪೊಲೀಸ್‌ ಠಾಣೆಗೆ ಬಂದು ತಲುಪುತ್ತದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಜಕ್ಕಲಿ ಗ್ರಾಮದ ಹೋರಾಟಗಾರ ದಿ. ಅಂದಾನಪ್ಪ ದೊಡ್ಡಮೇಟಿಯವರನ್ನು ಬಂಧಿಸಿ ಗಜೇಂದ್ರಗಡ ಪೊಲೀಸ್‌ ಠಾಣೆಯಲ್ಲಿ ಬಂಧನದಲ್ಲಿ ಇಟ್ಟಿದ್ದರು ಅಲ್ಲಿಂದ ಕರೆದುಕೊಂಡು ಹೋಗಿ ಹಿಂಡಲಾ ಜೈಲಿನಲ್ಲಿ ನೇಣು ಹಾಕುವ ಕತ್ತಲು ಕೋಣೆಯಲ್ಲಿ ಇಟ್ಟಿದ್ದರು. ಆ ಕಾರಣಕ್ಕಾಗಿ ನಮ್ಮ ಸಂಘಟನೆಯಿಂದ ಗಜೇಂದ್ರಗಡ ಪೊಲೀಸ್‌ ಠಾಣೆಯ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿಯವರ ಫೋಟೋ ಹಾಗೂ ಭುವನೇಶ್ವರಿಯ ಫೋಟೋ ಪೂಜೆ ನೆರವೇರಿತು. ನಂತರ ಪಾದಯಾತ್ರೆ ದುರ್ಗಾ ಸರ್ಕಲ್‌, ಅಂಬೇಡ್ಕರ್‌ ಸರ್ಕಲ್‌, ಶಿವಾಜಿ ಸರ್ಕಲ್‌ ಮೂಲಕ ಕೆ. ಕೆ. ಸರ್ಕಲ್‌ ನಿಂದ ರಾಜೂರ, ಸೂಡಿ, ಕಳಕಾಪುರ, ಮಾರನಬಸರಿ, ಜಕ್ಕಲಿ ಗ್ರಾಮದ ಕಡೆಗೆ ಸಾಗಿತು. 

ಪಾದಯಾತ್ರೆಯ ಮಾರ್ಗದ ಮಧ್ಯ ಬರುವ ಗ್ರಾಮಗಳಲ್ಲಿ ಜನರು ಅದ್ದೂರಿಯಾಗಿ ಸ್ವಾಗತ ಕೋರಿದ ಹಾಗೂ ಪಾದಯಾತ್ರಗೆ ಸಹಕಾರ ನೀಡಿದ ದೃಶ್ಯಗಳು ಕಂಡು ಬಂದವು. ಹಲವು ಕಡೆಗಳಲ್ಲಿ ಜನರೇ ಅಲ್ಪ ಉಪಹಾರ, ಊಟ, ಮಜ್ಜಿಗೆ, ನೀರು ನೀಡುತ್ತಿರುವ ಹಾಗೂ ಉಪಚರಿಸುತ್ತಿರುವ ದೃಶ್ಯಗಳು ಕಂಡು ಬಂದವು. ಗ್ರಾಮ ತಲುಪಿದ ನಂತರ ಸ್ಥಳೀಯರು ಭುವೇಶ್ವರಿ ಫೋಟೋಗೆ ಪೂಜೆ ಸಲ್ಲಿಸಿದರು ಹಾಗೂ ಪಾದಯಾತ್ರೆಗೆ ಬೆಂಬಲಿಸಿದರು.

1ಗಜೇಂದ್ರಗಡ1: ಗಜೇಂದ್ರಗಡ ದಿಂದ ಜಕ್ಕಲಿ ಗ್ರಾಮದ ವರೆಗೆ ಕರ್ನಾಟಕ ಅಭಿವೃದ್ದಿ ವೇದಿಕೆಯಿಂದ ಹಮ್ಮಿಕೊಳ್ಳಲಾದ ಪಾದಯಾತ್ರೆಗೆ ಚನ್ನಮ್ಮ ಸರ್ಕಲ್‌ ನಲ್ಲಿ ಚಾಲನೆ ನೀಡಲಾಯಿತು

 ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಜನಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಮಹಾಂತೇಶಗೌಡ ಪಾಟೀಲ್, ಕಳಕಪ್ಪ ಸಂಗನಾಳ, ಚಂಬಣ್ಣ ಚವಡಿ, ಶರಣಪ್ಪ ಚಳಗೇರಿ, ವೆಂಕಟೇಶ ಬಂಕದ, ದುರಗಪ್ಪ ಮುಧೋಳ, ನಿಂಗಪ್ಪ ತೊಂಡಿಹಾಳ, ಶರಣು ಪೂಜಾರ, ಲಕ್ಷ್ಮಣ ಮಾಳೋತ್ತರ, ಹೂವಾಜಿ ಚಂದೂಕರ, ಸಾಮಾಜಿಕ ಕಾರ್ಯಕರ್ತ ಅನಿಲ ಕರ್ಣೆ, ಬಾಬು ಗೋಡೆಕಾರ, ಆಂಜನೇಯ ಮುತುಗಾರ, ಅಬ್ದುಲ ಮಾರನಬಸರಿ, ಬಾಬು ಬದಿ, ಕನಕಪ್ಪ ಕಲ್ಲೋಡ್ಡರ, ಪ್ರಕಾಶ ರಾಠೋಡ, ನಿಲಪ್ಪ ಚಲವಾದಿ, ಜೀವನಸಾಬ ಸರ್ಕಾವಾಸ, ಮಂಗಳಮುಕಿಯರಾದ ಪಲ್ಲವಿ, ದುರ್ಗಾ, ಲಕ್ಷಣ ಬಂಕದ, ರವಿ ಶಾಸ್ತ್ರಿ, ರೇಣುಕಾ ಶಂಕರ ಏವೂರ, ಚಂದ್ರಕಲಾ ರವಿ. ಗೊಂಧಳೆ ಇದ್ದರು. 

1ಗಜೇಂದ್ರಗಡ2: ಗಜೇಂದ್ರಗಡ ದಿಂದ ಜಕ್ಕಲಿ ಗ್ರಾಮದ ವರೆಗೆ ಕರ್ನಾಟಕ ಅಭಿವೃದ್ದಿ ವೇದಿಕೆಯಿಂದ ಹಮ್ಮಿಕೊಳ್ಳಲಾದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪಾದಯಾತ್ರಿಗಳು

Related posts

ನಿಷ್ಪಾಪ ಹಸ್ತದಿಂದ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ..ಸಿದ್ದರಾಮೇಶ್ವರ ಕೊಪ್ಪಳ

satyadarshana

ಎರಡು ಬಾರಿ ಹಾಜರಾತಿ ಕಡ್ಡಾಯ : ಸಂತೋಷಕುಮಾರ ಪಾಟೀಲ್ ಹೇಳಿಕೆ

satyadarshana

ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳು:ಕುರಿತು ಸಿಎಂಗೆ ಪತ್ರ ಬರೆದ.ಸಿದ್ದರಾಮಯ್ಯ

satyadarshana

Leave a Comment