Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕನ್ನಡದಲ್ಲಿ ಮಾತನಾಡಿ ಬರೆಯುವುದರ ಮೂಲಕ ಕರುನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ :ಸಚಿವ ಬಿ.ಸಿ.ಪಾಟೀಲ

ಗದಗ(ಸತ್ಯದರ್ಶನ)ನ.1: ಕನ್ನಡ ರಾಜ್ಯೋತ್ಸವವು ನಿತ್ಯೋತ್ಸವವಾಗಬೇಕು ನಮ್ಮ ಕನ್ನಡ ಭಾಷೆ ಸಮೃದ್ಧವಾಗಿದೆÀಯೆಂದು ಕೈಕಟ್ಟಿ ಕುಳಿತುಕೊಳ್ಳದೆ ಕನ್ನಡ ನೆಲ ಜಲ ಉಳಿಸಲು ಕುವೆಂಪು ಅವರು ಹೇಳಿದಂತೆ ಕರುನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ. ಕನ್ನಡದ ಉಳಿವಿಗಾಗಿ ಕನ್ನಡದಲ್ಲೇ ಮಾತನಾಡುವ ಹಾಗೂ ಬರೆಯುವ ಸಂಕಲ್ಪ ತೊಡುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ ಅವರು ಹೇಳಿದರು.

ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಆಂಗ್ಲ ಸೇರಿದಂತೆ ಅನೇಕ ಭಾಷೆಗಳ ಅತಿಯಾದ ದಾಳಿ ಕನ್ನಡದ ಮೇಲಾಗುತ್ತಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿಯೂ ಕನ್ನಡಾಭಿಮಾನ ಬೆಳೆಸುವ ಕಾರ್ಯವಾಗಬೇಕಾಗಿದೆ ಎಂದರು. ಇಂದಿನ ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸಲು ಪಾಲಕರು ಹಾಗೂ ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕು.

ಕನ್ನಡ ನಾಡು ಕಲೆ, ಸಾಹಿತ್ಯ, ಸಂಸ್ಕøತಿ, ಸಂಗೀತಗಳ ಬೀಡಾಗಿದ್ದು ಇದರಲ್ಲಿ ಗದಗ ಜಿಲ್ಲೆಯ ದೊಡ್ಡ ಕೊಡುಗೆಯಿದೆ. ಇಲ್ಲಿಯ ವೀರನಾರಾಯಣ-ತ್ರಿಕೂಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳ ಶಿಲ್ಪಕಲೆ ಮೈ-ಮನಗಳನ್ನು ಮುದಗೊಳಿಸುತ್ತದೆ. ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕುಮಾರವ್ಯಾಸ, ಚಾಮರಸರು ಮತ್ತು ಏಕೀಕರಣ ಚಳವಳಿಯ ಅಗತ್ಯವನ್ನು ಪ್ರಬಲವಾಗಿ ಪ್ರತಿಪಾದಿಸಿದ್ದ ಕನ್ನಡ ಕುಲಪುರೋಹಿತರಾದ ಶ್ರೀ ಆಲೂರ ವೆಂಕಟರಾವ್ ಅವರನ್ನು ನಾವೆಲ್ಲ ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸೋಣ ಎಂದರು. ಗದುಗಿನ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಹುಯಿಲಗೋಳ ನಾರಾಯಣರಾಯರು, ಡಾ.ಎಂ.ಎಸ್.ಸುಂಕಾಪುರ, ಪ್ರೋ ಕೀರ್ತಿನಾಥ ಕುರ್ತಕೋಟಿ, ಡಾ.ಚನ್ನವೀರ ಕಣವಿ, ಹಿಂದೂಸ್ಥಾನಿ ಗಾಯಕ ಭಾರತ ರತ್ನ ಪುರಸ್ಕøತ ಪಂಡಿತ್ ಭಿಮಸೇನ್ ಜೋಶಿಯವರು, ಸಂಗೀತ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಹಾಗೂ ವಿಕಲಚೇತನರ ಬಾಳಿನ ಬೆಳಕಾದ ಡಾ.ಪುಟ್ಟರಾಜ ಗವಾಯಿಗಳು ಗದುಗಿನ ಹೆಮ್ಮೆಯಾಗಿದ್ದಾರೆ ಎಂದರು.

ಕನ್ನಡದ ಬಗ್ಗೆ ಸ್ವಾಭಿಮಾನ ಹೆಚ್ಚಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರವು ಅಕ್ಟೋಬರ 28 ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮತ್ತು ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ದಾಪುಗಾಲಿಟ್ಟಿದೆ. ಕೃಷಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ರೈತ ಕುಟುಂಬಗಳಿಗೆ ಪಿ.ಎಂ.ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ 6,000 ಹಾಗೂ ರಾಜ್ಯ ಸರ್ಕಾರದಿಂದ 4,000 ಒಟ್ಟು 10,000 ರೂ ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿದ್ದು ಜಿಲ್ಲೆಯ ಒಟ್ಟು 124810 ರೈತರುಗಳ ಖಾತೆಗೆ ಅಂದಾಜು 74.88 ಕೋಟಿ ರೂ ಸಂದಾಯವಾಗಿರುತ್ತದೆ. ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಹೆಸರು ಕಾಳು ಖರೀದಿಸಲು 49 ಕೇಂದ್ರಗನ್ನು ತೆರೆಯಲಾಗಿದ್ದು 21,555 ರೈತರಿಂದ 69610 ಕ್ವಿಂ, ಹೆಸರು ಕಾಳು ನೋಂದಣಿಯಾಗಿದ್ದು 5995 ರೈತರು ಯೋಜನೆಯ ಪ್ರಯೋಜನೆ ಪಡೆದುಕೊಂಡಿರುತ್ತಾರೆ ಎಂದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಹಾನಿಯಾದ 2194 ಮನೆಗಳಿಗೆ 10.97 ಕೋಟಿ ರೂ ಪರಿಹಾರ ನೀಡಲಾಗಿದ್ದು ಮಳೆಯಿಂದಾಗಿ ಹಾನಿಗೊಳಗಾದ 1.76 ಲಕ್ಷ ಹೆಕ್ಟೆರ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟ ಸಂಭವಿಸಿದ್ದು 105119 ರೈತರಿಗೆ ರೂ. 166.98 ಕೋಟಿ ಪರಿಹಾರ ವಿತರಿಸಲಾಗಿದೆ. ಲೋಕೊಪಯೋಗಿ ಇಲಾಖೆಯಿಂದ ಒಟ್ಟು 189.93 ಕಿ,ಮೀ. ರಾಜ್ಯ ಹೆದ್ದಾರ, ಜಿಲ್ಲಾ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸಿ ರೂ. 365 ಕೋಟಿಗಳನ್ನು ಹಾಗೂ 134 ಶಲಾ ಕೊಠಡಿ ನಿರ್ಮಿಸಿ ರೀ. 38.58 ಕೋಟಿ ಖರ್ಚು ಮಾಡಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 397.94 ಕಿ.ಮೀ ರಸ್ತೆ ಸೇರಿದಂತೆ 8 ಸೇತುವೆ 31 ಶಾಲಾ ಹಾಗೂ ನ್ಯಾಯಾಂಗ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟಾರೆ 255 ಕಾಮಗಾರಿಗಳಿಗೆ ಅಂದಾಜು 355 ಕೋಟಿ ರೂ. ಅನುದಾನ ಬಳಕೆ ಮಾಡಲಾಗಿರುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ ನುಡಿದರು.

ಉಪಸ್ಥಿತಿ: ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಕೆ.ಪಾಟೀಲ, ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ, ಎಂ.ಸಿ.ಎ. ಅಧ್ಯಕ್ಷ ಎಂ.ಎಸ್.ಕರಿಗೌಡರ, ಗದಗ-ಬೆಟಗೇರಿ ನಗರ ಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿ.ಪಂ. ಸಿ.ಇ.ಓ ಡಾ.ಸುಶೀಲಾ ಬಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಉಪವಿಭಾಗಾಧಿಕಾರಿ ಅನ್ನಪೂರ್ಣ ಸೇರಿದಂತೆ ನಗರ ಸಭೆ ಸದಸ್ಯರು, ಗಣ್ಯರು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಶಾಲಾ, ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ದತ್ತಪ್ರಸನ್ ಪಾಟೀಲ ಹಾಗೂ ಕು. ಮಂಜರಿ ಹೊಂಬಾಳೆ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಹಾಗೂ ಸಂಗಡಿಗರು ನಾಡಗೀತೆ ಪ್ರಚುರ ಪಡಿಸಿದರು

Related posts

ಶಿಥಿಲಾವಸ್ಥೆಯಲ್ಲಿರುವ ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಿ.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶೀಖಾ

satyadarshana

ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಕೆಲಸ ಮಾಡುವ ಪೊಲೀಸರು ತಮ್ಮ ದೇಹಗಳಿಗೆ ಕ್ಯಾಮರ ಕಡ್ಡಾಯ ಮಾಡಿ ಆದೇಶ

satyadarshana

ಹಲವಾರು ಚಳುವಳಿ ಮಾಡುವ ಮೂಲಕ ಎಲ್ಲಾ ಸರ್ಕಾರಗಳಿಗೆ ನಮ್ಮ ಎಚ್ಚರಿಕೆ ಕೊಟ್ಟಿದ್ದೇವೆ.ಬಸವರಾಜ ಕಡಿಬಿನ

satyadarshana

Leave a Comment