Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕ ನೀರು ಒದಗಿಸಿ> ಸಂಸದ  ಶಿವಕುಮಾರ ಉದಾಸಿ

ಗದಗ : (ಸತ್ಯ ದರ್ಶನ )ಅ. 14:  ಜಿಲ್ಲೆಯಲ್ಲಿ ಮುಕ್ತಾಯ ಹಂತದಲ್ಲಿರುವ   ಗ್ರಾಮದ ಪ್ರತಿ ಮನೆಗೂ ಪೈಪ್ ಲೈನ್ ಅಳವಡಿಸಿ ನೀರು ಪೂರೈಕೆ ಮಾಡುವ ಜಲಜೀವನ ಮಷಿನ್ ಯೋಜನೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಎಲ್ಲ ಕುಟುಂಬಗಳಿಗೂ ಸಮರ್ಪಕ ನೀರು ಸರಬರಾಜು ಮಾಡುವಂತೆ ಸಂಸದ ಶಿವಕುಮಾರ ಉದಾಸಿ ತಿಳಿಸಿದರು.

 ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ ) ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕಾಮಗಾರಿ ಪೂರ್ಣಗೊಂಡಿರುವ ಕಡೆಗಳಲ್ಲಿ ನೀರು ಸಮರ್ಪಕವಾಗಿ  ಪೂರೈಕೆಯಾಗುತ್ತಿರುವ  ಕುರಿತು  ಪರಿಶೀಲನೆ ನಡೆಸಬೇಕು . ಸರ್ಕಾರದ ಉದ್ದೇಶ ಈಡೇರಿಕೆಗಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಕಾಮಗಾರಿ ಪೂರ್ಣಗೊಂಡ ಪ್ರದೇಶದಲ್ಲಿ  ನಳದ ಸಂಪರ್ಕ ದಿಂದ ಬರುವ ನೀರನ್ನು ಸಮರ್ಪಕವಾಗಿ ಬಳಸಲು ಜಾಗೃತಿ ಮೂಡಿಸಬೇಕು ಎಂದರು.

         ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ವಸತಿ ರಹಿತ ಮತ್ತು ನಿವೇಶನ ರಹಿತ ಫಲಾನುಭವಿಗಳಿಗೆ  ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಜಾಬ್ ಕಾರ್ಡನ್ನು ಆಧಾರ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ಈಗಾಗಲೇ ಪ್ರಗತಿಯಲ್ಲಿರುವ ವಸತಿ ಮನೆಗಳ ನಿರ್ಮಾಣ ಕುರಿತಂತೆ ಫಲಾನುಭವಿಗಳಿಗೆ ಅನುದಾನ ಬಿಡುಗಡೆಗೆ ಇರುವ ತಾಂತ್ರಿಕ ತೊಂದರೆಗಳನ್ನು ಪರಿಹರಿಸಿ ಅನುದಾನ ಒದಗಿಸಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ  ಅನುಷ್ಟಾನ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಇರಬೇಕು ಎಂದರು.

ಕುರಹಟ್ಟಿ ಗ್ರಾಮದಲ್ಲಿ ಶಾಲಾ ಕಟ್ಟಡ ಕಟ್ಟಲು 2 ಎಕರೆ ಜಮೀನನ್ನು ಈಗಾಗಲೇ ದಾನವಾಗಿ ಪಡೆಯಲಾಗಿದೆ. ವಿಳಂಬ ಮಾಡದೇ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಬೇಕು
.ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆ ಕಾರ್ಯವು ವಿವಿಧ ಹಂತಗಳಲ್ಲಿದ್ದು ಸಮೀಕ್ಷೆ ಕಾರ್ಯ ತ್ವರಿತ ಗತಿಯಲ್ಲಿ ಕೈಗೊಂಡು  100 %  ಪ್ರಗತಿ ಸಾಧಿಸಲು ಕ್ರಮ ವಹಿಸಬೇಕು.  ಶಾಲೆಗಳಲ್ಲಿ  ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಕುರಿತು ಸಂಸದರು ಚರ್ಚಿಸಿದಾಗ ಅಕ್ಷರ ದಾಸೋಹ ಅಧಿಕಾರಿ ಶ್ರೀಮತಿ ಮಂಗಳಾ ತಾಪಸ್ಕರ್ ಅವರು ಮಾತನಾಡಿ ಅಕ್ಷರದಾಸೋಹ ಗೋದಾಮಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಗುಣಮಟ್ಟದ ಆಹಾರ ಪರಿಶೀಲನೆ ಕಾರ್ಯ ಕೈಗೊಳ್ಳಲಾಗಿದೆ ಎಂದರು ಉತ್ತರಿಸಿದರು.
ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರು ಮಾತನಾಡಿ ಬಾಕಿ ಉಳಿದಿರುವ  ಜೆಜೆಎಂ  ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿನಾಕಾರಣ  6 ತಿಂಗಳಿಗಿಂತ ಹೆಚ್ಚಿನ ಅವಧಿಗೆ ವಿಳಂಬ ಮಾಡಿದ್ದಲ್ಲಿ ಅಂತಹ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.  ಕಾಮಗಾರಿಗಳನ್ನು ಕೈಗೊಂಡ ಪ್ರದೇಶಗಳಲ್ಲಿ  ಸಮರ್ಪಕ ನೀರು ಪೂರೈಕೆಯಾಗುತ್ತಿರುವ ಕುರಿತು ನಿಯಮಿತವಾಗಿ  ಪರಿಶೀಲನೆ ನಡೆಸಬೇಕು ಎಂದರು.
ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ ಕಣಗಿನಹಾಳ ಗ್ರಾಮದಲ್ಲಿ ಗ್ರಾಮದ ಚರಂಡಿ ನೀರು ಸರಾಗವಾಗಿ ಮುನ್ನುಗ್ಗಲು ಸೂಕ್ತ  ವ್ಯವಸ್ಥೆ ಇಲ್ಲದಿರುವ ಕುರಿತು ಚರ್ಚಿಸಿ ಈ ಬಗ್ಗೆ ಶೀಘ್ರವೇ ಚರಂಡಿ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.
 ಜೆಜೆಎಂ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು ಗುತ್ತಿಗೆದಾರರು ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಮೂಲಕ ರಸ್ತೆಗಳ ಸುಧಾರಣೆಗೆ ಮುಂದಾಗುವಂತೆ ಸೂಚಿಸಲು ತಿಳಿಸಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಮಾತನಾಡಿ ಇಲಾಖೆಯ ಅಧಿಕಾರಿಗಳು ಸಭೆಗೆ ಬರುವಾಗ ಇಲಾಖೆಗೆ ಸಂಬಂಧಿಸಿದಂತೆ ಕೈಗೊಂಡ ಕಾಮಗಾರಿಗಳ ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳ  ಪೂರ್ಣ ಮಾಹಿತಿ ಯನ್ನು ಪ್ರಸ್ತುತಪಡಿಸಬೇಕು. ಮಾಹಿತಿ ಇಲ್ಲದೇ ಸಭೆಗೆ ಆಗಮಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು  ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ ಮಾತನಾಡಿ ಜಿಲ್ಲಾ ಪಂಚಾಯತ್ ಸಂಬಂಧಿತ ಇಲಾಖೆಗಳಿಗೆ ನಿಗದಿಪಡಿಸಲಾದ ಕೇಂದ್ರ ಹಾಗೂ ರಾಜ್ಯ ಪುರಸ್ಕøತ ಯೋಜನೆಗಳ ಅನುಷ್ಟಾನದಲ್ಲಿ  ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆಗೆ ಅಧಿಕಾರಿಗಳು ಮುಂದಾಗಬೇಕು.ಯಾವುದೇ ಕಾರಣಕ್ಕೂ ಕಾಮಗಾರಿಗಳ ಅನುಷ್ಟಾನದಲ್ಲಿ  ಅನುಮಾನಕ್ಕೆ ಆಸ್ಪದವಿಲ್ಲದಂತೆ ಗುಣಮಟ್ಟದ ಕಾಮಗಾರಿಗಳನ್ನು  ಕೈಗೊಳ್ಳುವಂತೆ ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ ಅಗಸ್ಟ 2022ರ ಅಂತ್ಯದವರೆಗೆ   44509 ಫಲಾನುಭವಿಗಳು ವೃದ್ಧಾಪ್ಯ ವೇತನ, 37740 ಜನರು  ವಿಧವಾ ವೇತನ, 11222  ಜನರು ( 45 %)   ಅಂಗವಿಕಲ ವೇತನ , 12421 ಜನರು ( 75 %) ಅಂಗವಿಕಲ ವೇತನದ ಸೌಲಭ್ಯ ಪಡೆದಿದ್ದಾರೆ ಎಂದು ಸಭೆಗೆ  ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಸವರಾಜ ಅಡವಿಮಠ ಅವರು ಮಾತನಾಡಿ ಜಿಲ್ಲೆಯಲ್ಲಿ  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೆಪ್ಟೆಂಬರ್ ಅಂತ್ಯದವರೆಗೆ  25.85 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ನರೇಗಾ ಯೋಜನೆಯಡಿ  263288 ಕೆಲಸಗಾರರಿದ್ದು ಆ ಪೈಕಿ 246397 ಕೆಲಸಗಾರರ  ಆಧಾರ ಸೀಡಿಂಗ್ ಆಗಿದ್ದು ಶೇ. 93.58 ಪ್ರಗತಿ ಸಾಧಿಸಲಾಗಿದೆ. 2022-23 ನೇ ಸಾಲಿನಲ್ಲಿ  ನರೇಗಾ ಯೋಜನೆಯಡಿ  1335  ರಸ್ತೆ  ಕಾಮಗಾರಿಗಳಿಗೆ 968.12 ಲಕ್ಷ ರೂ  , 106 ಸಿಡಿ ಕಾಮಗಾರಿಗಳಿಗೆ 90.10 ಲಕ್ಷ ರೂ,  799 ಡ್ರೈನೇಜ್ ಕಾಮಗಾರಿಗಳಿಗೆ 509.74 ಲಕ್ಷ ರೂ,  79 ಶಾಲಾ ಕಂಪೌಂಡ್ ಕಾಮಗಾರಿಗಳಿಗೆ 438 .45 ಲಕ್ಷ ರೂ.ವೆಚ್ಚ ಮಾಡಲಾಗಿದೆ.       2021-22 ನೇ ಸಾಲಿನ ಹೊಸ ಪ್ರಾಜೆಕ್ಟ್‍ದಡಿ  17 ಬಾಸ್ಕೆಟ್ ಬಾಲ್ ಕೋರ್ಟ್ ಕಾಮಗಾರಿಗಳಿಗೆ   102 ಲಕ್ಷ ರೂ.  29 ಪಿಂಕ್ ಟಾಯ್ಲೆಟ್‍ಗಾಗಿ 174 ಲಕ್ಷ ರೂ. ವೆಚ್ಚ,  4 ಮಿಡ್ ಡೇ ಮೀಲ್ ರೂಮ್‍ಗಳಿಗೆ 48 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ ಮಾತನಾಡಿ ಮುಂಗಾರು ಹಂಗಾಮಿನಲ್ಲಿ ಪಿ.ಎಂ.ಎಫ್.ಬಿ.ವೈ ಯೋಜನೆಯಡಿಯಲ್ಲಿ 114764 ರೈತರ ನೊಂದಣಿಯಾಗಿದೆ. ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ  ಕೊರತೆ ಇರುವುದಿಲ್ಲ ಎಂದು ಸಭೆಗೆ ತಿಳಿಸಿದರು.  ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಧರ ಕೋಟಿಮನಿ ಮಾತನಾಡಿ ಎನ್.ಎಚ್.ಎಮ್.  ಯೋಜನೆಯಡಿ  ಒಟ್ಟಾರೆಯಾಗಿ  35 ಫಲಾನುಭವಿಗಳಿಗೆ   50.49 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಆಯುಷ್ ಇಲಾಖೆ ಅಧಿಕಾರಿ ಡಾ. ಮಲ್ಲಿಕಾರ್ಜುನ್ ಉಪ್ಪಿನ ಅವರು ಮಾತನಾಡಿ  ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯಿಂದ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಳಾಗಿದೆ.  ಈ ಶಿಬಿರದ  350  ಓಪಿಡಿ ರೋಗಿಗಳು ಶಿಬಿರದ ಸೌಲಭ್ಯ ಪಡೆದಿದ್ದು  ಪಂಚಕರ್ಮ ಚಿಕಿತ್ಸೆ, ಔಷಧಿ ವಿತರಣೆ ಕೈಗೊಳ್ಳಲಾಗಿದೆ  ಎಂದು ಸಭೆಗೆ ತಿಳಿಸಿದರು.
ಸಭೆಯಲ್ಲಿ ಉಜ್ವಲ ಯೋಜನೆ, ನಗರಸಭೆಯಿಂದ ಮನೆ ಹಂಚಿಕೆ, ಉದ್ಯೋಗ ಖಾತ್ರಿ ಯೋಜನೆ, ಕೌಶಲ್ಯಾಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳು, ವಿವಿಧ ವಸತಿ ಯೋಜನೆಗಳು, ಬೆಳೆ ವಿಮೆ, ಪಿಎಂಕಿಸಾನ್ , ಹೆಸ್ಕಾಂ, ಅಪೌಷ್ಟಿಕತೆ ನಿವಾರಣೆ , ಸಾಂಕ್ರಾಮಿಕ ರೋಗ, ಕೋವಿಡ್ ಲಸಿಕೆ ಕುರಿತಂತೆ ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆರೋಗ್ಯ ಯೋಜನೆಗಳ ಕೈಪಿಡಿ    ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಉಷಾ ದಾಸರ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಶಿವಪ್ರಕಾಶ ದೇವರಾಜ , ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ,  ಜಿ.ಪಂ. ಮುಖ್ಯ ಯೋಜನಾಧಿಕಾರಿ ವಾಗೀಶ, ಜಿಲ್ಲಾ ಪಂಚಾಯತ್ ಹಣಕಾಸು ಅಧಿಕಾರಿ ಪ್ರಶಾಂತ ಜೆ ಸಿ, ನಗರಾಬಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಡಿಡಿಪಿಐ ಬಸವಲಿಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ ನುಚ್ಚಿನ , ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ  ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು

Related posts

ಕೆರೆ ತುಂಬುವ ಯೋಜನೆಗೂ ಹಾಲಪ್ಪ ಆಚಾರ್ ಗೂ ಸಂಬಂಧ ಇಲ್ಲ: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ 

satyadarshana

ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ ಶಾಸಕ ಬಸನಗೌಡ ಪಾಟೀಲ ಯತ್ನಾಳ

satyadarshana

ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ

satyadarshana

Leave a Comment