Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಗದಗ : ( ಸತ್ಯ ದರ್ಶನ ) ಸೆಪ್ಟೆಂಬರ್ 8: 2022-23 ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರಿವು ಶೈಕ್ಷಣಿಕ ಸಾಲ ಯೋಜನೆ ( ಹೊಸತು) , ಅರಿವು ಶೈಕ್ಷಣಿಕ ಸಾಲ ಯೋಜನೆ ( ನವೀಕರಣ) ಹಾಗೂ ಶೈಕ್ಷಣಿಕ ಸಾಲ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆರ್ಥಿಕ ನೆರವು ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಅಕ್ಟೋಬರ್ 20ರೊಳಗಾಗಿ ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್‍ಲೈನ್‍ನಲ್ಲಿ ಸಲ್ಲಿಸಬಹುದಾಗಿದೆ.
       ಹೆಚ್ಚಿನ ಮಾಹಿತಿಗಾಗಿ ನಿಗಮದ http://www.dbcdc.karnataka.gov.in ವೆಬ್‍ಸೈಟ್‍ನಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ.
ನಿಗಮದ ಸಹಾಯವಾಣಿ ಸಂಖ್ಯೆ: 08372-232327 ಹಾಗೂ 080-22374832, ಆನ್‍ಲೈನ ಮುಖಾಂತರ ಸಲ್ಲಿಸಲಾದ ಅರ್ಜಿಯನ್ನು ನಿಗದಿತ ದಾಖಲಾತಿಗಳೊಂದಿಗೆ ಲಗತ್ತಿಸಿ, ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರೂ.ನಂ: 202, 2ನೇ ಮಹಡಿ, ಜಿಲ್ಲಾ ಆಡಳಿತ ಭವನ, ಗದಗ ಜಿಲ್ಲೆಯನ್ನು ಸಂಪರ್ಕಿಸಿ ಅಕ್ಟೋಬರ್ 20 ರೊಳಗೆ ಸಲ್ಲಿಸಬಹುದಾಗಿದೆ.    ‎

Related posts

ದೊಡ್ಡಮೇಟಿಯವರ ಸ್ಮಾರಕ ನಿರ್ಮಿಸಲು ಕರ್ನಾಟಕ ಅಭಿವೃದ್ಧಿ ವೇದಿಕೆಯ ತಾಲೂಕಾ ಘಟಕದ ವತಿಯಿಂದ ಆಗ್ರಹ.

satyadarshana

ಜಿ ಎಸ್ ಪಾಟೀಲ್ ಸಚಿವ ಸ್ಥಾನ ನೀಡಲು ಒತ್ತಾಯ.

satyadarshana

ನಗರದ ಸರಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಜ್ಯ ಪಥ ಸಂಚಲನಕ್ಕೆ ಆಯ್ಕೆ

satyadarshana

Leave a Comment