ಹಾವೇರಿ : ಕುರಿ ಕಳ್ಳತನಕ್ಕೆ ಬಂದ ಖತರ್ನಾಕ್ ಕಳ್ಳರು ಕುರಿ ಮಾಲೀಕನನ್ನೇ ಕೊಂದಿರುವ ಭಯಾನಕ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ . ವೆಂಕಟೇಶ್ ರಂಗಪ್ಪ ಮುತ್ತೂರ ( 50 ) ಕೊಲೆಯಾದ ದುರ್ದೈವಿ . ನಿನ್ನೆ ಸಂಜೆ ಹಾವೇರಿಯಲ್ಲಿ ಮಳೆ ಸುರಿದಿತ್ತು . ಮಳೆ ಹಿನ್ನೆಲೆಯಲ್ಲಿ ಕುರಿಯನ್ನ ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ಅರಿತ ಕಳ್ಳರು , ಪಾರಂಗೆ ನುಗ್ಗಿದ್ದಾರೆ . ಈ ವೇಳೆ ಕಳ್ಳರನ್ನ ತಡೆಯಲು ಮಾಲೀಕ ವೆಂಕಟೇಶ್ ಬಂದಿದ್ದಾರೆ .
ಆಗ ವೆಂಕಟೇಶ್ ಮೇಲೆ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ . ಅಲ್ಲದೇ ಬರೋಬ್ಬರಿ 40 ಕಾರಿಗಳನ್ನ ಕದ್ದುಕೊಂಡು ಎಸ್ಕೆಪ್ ಆಗಿದ್ದಾರೆ . ಅಂದ್ದಾಗೆ ಈ ರೀತಿಯ ಕುರಿ ಕಳ್ಳತನ ರಾಣೇಬೆನ್ನೂರು ತಾಲೂಕಿನಲ್ಲಿ ಇದು ಆರನೇ ಕೇಸ್ ಆಗಿದೆ . ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .
