Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಬೆಂಗಳೂರಿನ 9 ಕಡೆಗಳಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ.

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ಹಲವು ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಇಂದು ಬೆಂಗಳೂರಿನ 9 ಕಡೆಗಳಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಎಸ್​ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಹಾಗೂ ಇನ್ನಿತರ ಜಾಗಗಳ ಮೇಲೆ ದಾಳಿ ನಡೆದಿದ್ದು, ಕಡತಗಳ ಪರಿಶೀಲನೆಯನ್ನು ನಡೆಯುತ್ತಿದೆ.

ಮಧ್ಯವರ್ತಿಗಳು/ಏಜೆಂಟರು/ ಭ್ರಷ್ಟ/ಅಕ್ರಮ ವಿಧಾನಗಳಿಂದ ಸಾರ್ವಜನಿಕ ಸೇವಕರ ಮೇಲೆ ಪ್ರಭಾವ ಬೀರುವ/ತಮ್ಮ ವೈಯಕ್ತಿಕ ಪ್ರಭಾವದ ಮೂಲಕ ಬೆಂಗಳೂರಿನ ಚಟುವಟಿಕೆಗಳಲ್ಲಿ ಅವ್ಯವಹಾರಗಳು ಮತ್ತು ಇತರ ಅಕ್ರಮಗಳಲ್ಲಿ ತೊಡಗಿರುವ ಶಂಕಿತರಿಗೆ ಸಂಬಂಧಿಸಿದಂತೆ 9 ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದ ಮದ್ಯವರ್ತಿಗಳ ನಿವಾಸದ ಮೇಲೆಯೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಗೊಳಗಾದ ಅಧಿಕಾರಿಗಳ ಮಾಹಿತಿ

1) ರಾಘು ಬಿ.ಎನ್, ಚಾಮರಾಜಪೇಟೆ

2) ಮೋಹನ್, ಮನೋರಾಯನಪಾಳ್ಯ, ಆರ್ ಟಿ ನಗರ

3) ಮನೋಜ್, ದೊಮ್ಮಲೂರು

4) ಮುನಿರತ್ನ, ಮಲ್ಲತಹಳ್ಳಿ

5) ತೇಜು ಅಲಿಯಾಸ್​ ತೇಜಸ್ವಿ, ಆರ್ ಆರ್ ನಗರ

6) ಅಶ್ವಥ್, ಮುದ್ದಿನಪಾಳ್ಯ, ಮಲ್ಲತಹಳ್ಳಿ

7) ರಾಮ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್

8) ಲಕ್ಷ್ಮಣ, ಚಾಮುಂಡೇಶ್ವರಿನಗರ ಬಿಡಿಎ ಲೇಔಟ್

9) ಚಿಕ್ಕಹನುಮಯ್ಯ, ಮುದ್ದಿನಪಾಳ್ಯ

Related posts

2024-25 ನೇ ಸಾಲಿನ ಬೆಳಗಾವಿ ವಿಬಾಗ ಮಟ್ಟದ ದಸರಾ ಕ್ರೀಡಾಕೂಟ

satyadarshana

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಮಾಜಿ ಸಚಿವ ಕಳಕಪ್ಪ ಬಂಡಿ

satyadarshana

ಕೈಗಾರಿಕೋದ್ಯಮಿಗಳ ಗಮನಕ್ಕೆ

satyadarshana

Leave a Comment