Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ-ಯುವತಿ ಸ್ಥಳದಲ್ಲೇ ಸಾವು.ರೈಲಿನಿಂದ ಯುವಕ-ಯುವತಿ ಬಿದ್ದಿರೋ ಶಂಕೆ ಕಂಡು ಬಂದಿದೆ

 

ವಿಜಯನಗರ: ಚಲಿಸುವ ರೈಲಿನಿಂದ ಬಿದ್ದು ಯುವಕ- ಯುವತಿ ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿತ್ತು. ಇವರಿಬ್ಬರೂ ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲಿನಿಂದ ಬಿದ್ದಿರೋ ಶಂಕೆ ವ್ಯಕ್ತವಾಗಿತ್ತು.

50 ಅಡಿ ದೂರದಲ್ಲಿ ಯುವತಿ ಹಾಗೂ ಯುವಕನ ಶವ ಪತ್ತೆಯಾಗಿತ್ತು. ಮೃತರಿಬ್ಬರೂ ಗಂಡ-ಹೆಂಡತಿಯಾಗಿದ್ದು, ಮುಕೇಶ (30) ಮತ್ತು ಭಗವತಿ (25 ವರ್ಷ) ಎಂದು ಗುರುತಿಸಲಾಗಿದೆ. ಮುಕೇಶ, ಟೈಲ್ಸ್ ಕೆಲಸ ಮಾಡುತ್ತಿದ್ದ ಕಾರ್ಮಿಕ.

ಮೃತರಿಬ್ಬರು ಅಜ್ಮೀರ್ ದ ನಿವಾಸಿಗಳು. ದಂಪತಿ ಟೈಲ್ಸ್ ಕೆಲಸಕ್ಕಾಗಿ ಅಜ್ಮೀರದಿಂದ ಬೆಂಗಳೂರಿಗೆ, ಹುಬ್ಬಳ್ಳಿ ಮಾರ್ಗವಾಗಿ ತೆರಳುಚವ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮೃತ ಯುವಕನ ಸಹೋದರ ತಿಳಿಸಿದ್ದಾರೆ. ಬಾಗಿಲು ಬಳಿ ಕುಳಿತಿದ್ದ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಬಳ್ಳಾರಿಯ ರೈಲ್ವೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Related posts

ಕ್ಷುಲ್ಲಕ ಕಾರಣಕ್ಕೆ ಗಲಾಟೆ, ವ್ಯಕ್ತಿ ಮೇಲೆ ಹಲ್ಯೆ.

satyadarshana

ಸರ್ಕಾರಿ ಸಾವಲತ್ತುಗಳನ್ನು ಸಕಾಲದಲ್ಲಿ ಪಡೆದು ಮಹಿಳೆಯರು ಸಭಲರಾಗಿ-ಹಾಲಪ್ಪ ಆಚಾರ್.

satyadarshana

ಅರ್ಜಿ ಆಹ್ವಾನ

satyadarshana

Leave a Comment