Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ನ್ಯಾ. ಮಲ್ಲಿಕಾರ್ಜುನ ಗೌಡ ಮೇಲೆ ಕ್ರಮಕ್ಕೆ ಆಗ್ರಹ

ಸುದ್ದಿಮೂಲ ಸತ್ಯದರ್ಶನ

ಗದಗ .ರಾಯಚೂರಿನಲ್ಲಿ  ಜನೇವರಿ 26ರಂದು ನಡೆದ 73ನೇ ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೂಡಿ ವೇದಿಕೆ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮಲ್ಲಿಕಾರ್ಜುನ ಗೌಡ 73ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಪೂಜಾ ಸ್ಥಳದಿಂದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ  ವೇದಿಕೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.  ಮಾದರ ಚನ್ನಯ್ಯ ಸಮುದಾಯಭವನ ದಿಂದ ಸೂಡಿ  ಗ್ರಾಮಪಂಚಾಯಿತಿ ವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮುಂದಿನ ದಿನಮಾನಗಳಲ್ಲಿ ಈ ರೀತಿ ಆದರೆ ಅಂಥವರ ಮನೆಗೆ ಹೋಗಿ ತಕ್ಕ ಪಾಠ ಕಲಿಸುತ್ತೇವೆ. ಇನ್ನು ಮುಂಬರುವ ದಿನಗಳಲ್ಲಿ ದಲಿತರೆಲ್ಲ ಸೇರಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

Related posts

ಗದಗ ಜಿಲ್ಲೆ ಪಿ ಎಮ್ ಜಿ ಎಸ್ ವಾಯ್ ಜೋತುಬಿದ್ದ ಶನಿ ಎಂ .ಸ್ . ದಿವಟರ್

satyadarshana

ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಆಶಾಕಿರಣ ಎಸ್ ,ವಿ,ಸಂಕನೂರ್

satyadarshana

ಸಂಪಾದಕರ ಸಂಘದ ಕೊಪ್ಪಳ ಘಟಕಕ್ಕೆ ನೂತನ ಸಾರಥಿಗಳು ಅಧ್ಯಕ್ಷರಾಗಿ ಶ್ರೀನಿವಾಸ, ಕಾರ್ಯದರ್ಶೀಯಾಗಿ ಖಲೀಲ್ ಉಡೇವು ಆಯ್ಕೆ

satyadarshana