ಸುದ್ದಿ ಮೂಲ -ಸತ್ಯ ದರ್ಶನ.
ಗದಗ : ಸೂಡಿ ಗ್ರಾಮದ ಮಾದರ ಚನ್ನಯ್ಯ ಸಮುದಾಯ ಭವನದಲ್ಲಿ ಇಂದು ಡಾ. ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೋದ್ಯಮಿಗಳ ಸಂಘ (ಎಸ್ ಸಿ )ಇವರ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ಸ್ವ ಸಹಾಯ ಸಂಘ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗದಗ ಜಿಲ್ಲಾ ಡಿಎಸ್ಎಸ್ ಸಂಚಾಲಕ ಬಸವರಾಜ ಕಡಬಿನ ಮಹಿಳಾ ಸ್ವಸಹಾಯ ಸಂಘಗಳು ಮಹಿಳೆಯರ ಸಾವಲಂಬನೆ ಜೀವನ ನಡೆಸಲು ಅನುಕೂಲಕರವಾಗಿವೆ ಎಲ್ಲ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರ ಮಹಿಳೆಯರ ಜೀವನ ಉಜ್ವಲಗೊಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಸದುಪಯೋಗ ಪಡಿಸಿಕೊಂಡು ಬ್ಯಾಂಕ್ ಗಳ ಜೊತೆ ನಿರಂತರ ಸಂಪರ್ಕ ಮತ್ತು ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ತುಂಬಿ ಸರಿಯಾಗಿ ವ್ಯವಹರಿಸುವದರಿಂದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ರುದ್ರೇಶ್ ಜಿಲ್ಲಾ ಸಂಯೋಜಕರು ಹುಬ್ಬಳ್ಳಿ-ಧಾರವಾಡ ಹೇಳಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಂಜುನಾಥ.ಏನ್, ವೆಂಕಟೇಶ್ ಎಂ, ಕುಮಾರಿ ದೀಪ್ತಿ ಚಿತ್ರದುರ್ಗ, ಎಸ್. ಎಸ್. ಭಾಸಗಿ, ಮಾಂತೇಶ ಗದಗ, ಸಮುದಾಯದ ಮುಖಂಡರಾದ ಯಮನಪ್ಪ ಹಾಲಿನವರ, ಶಿವಲಿಂಗಪ್ಪ ಕಡಬಿನವರ,ಬಸವರಾಜ ಕಡಬಿನವರ, ಶಿವಾನಂದ ಪಿ ಲಂಕೇಶ್, ಸಮುದಾಯದ ಯುವ ಮುಖಂಡರಾದ ನಾಗರಾಜ ಕಡುಬಿನವರ, ಮಂಜುನಾಥ ಮಾದರ, ರಮೇಶ್ ಕಡಬಿನವರ, ಬಾಳಪ್ಪ ದೊಡ್ಡಮನಿ,ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೊದ್ಯಮಿ ಸಂಘ ಸೂಡಿ ಅಧ್ಯಕ್ಷರು ಪ್ರವೀಣ್ ತೆಗ್ಗಿನಮನಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಹುಲಿಗೆವ್ವ ಕಡಬಿನವರ ವಹಿಸಿಕೊಡಿದ್ದರು ದಿವ್ಯ ಸಾನಿಧ್ಯವನ್ನು ಶಿವಶರಣ ಗದಿಗೆಪ್ಪಜ್ಜನವರು ವಹಿಸಿಕೊಂಡರೆ ನಿರೂಪಣೆ ಚಂದ್ರಶೇಖರ್ ತೆಗ್ಗಿನಮನಿ ನೆರವೇರಿಸಿದರು.
ವರದಿ. ಮಲ್ಲು ದೊಡ್ಡಮನಿ.
