Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಕಲ್ಯಾಣ ಕರ್ನಾಟಕ ಯಾವುದೇ ರೀತಿ ಅಭಿವೃದ್ಧಿಯಾಗಿಲ್ಲ ಎಂದು. ಸಿದ್ದರಾಮಯ್ಯ

ಬೆಳಗಾವಿ ,ಡಿ.24-ಕಲ್ಯಾಣ ಕರ್ನಾಟಕ ಯಾವುದೇ ರೀತಿ ಅಭಿವೃದ್ಧಿಯಾಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಟೀಕಾಪ್ರಹಾರ ಮಾಡಿದರು. ನಿಯಮ 69ರಡಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಹೆಸರು ಬದಲಾಯಿಸಿದ್ದನ್ನು ಬಿಟ್ಟರೆ ಬೇರೆನೂ ಮಾಡಲಿಲ್ಲ. ಕಲ್ಯಾಣಕರ್ನಾಟಕವನ್ನು ಸರ್ಕಾರ ಮರೆತಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನು ಮಾತ್ರ ನೇಮಕ ಮಾಡಿರುವುದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸದಸ್ಯರ ನೇಮಕವಾಗಿಲ್ಲ.ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 3 ಸಾವಿರ ಕೋಟಿ ನೀಡುವುದಾಗಿ ಸಿಎಂ ಘೋಷಿಸಿದ್ದರು. ಆದರೆ ಈಗ 378 ಕೋಟಿ ಮಾತ್ರ ಬಿಡುಗಡೆಯಾಗಿದೆ. ಹೆಚ್ಚೆಂದರೆ ಇನ್ನೊಂದು 200 ಕೋಟಿ ಖರ್ಚಾಗಬಹುದು. ಈ ರೀತಿಯಾದರೆ ಅಭಿವೃದ್ಧಿ ಹೇಗಾಗುತ್ತದೆ ಎಂದರು.

ಸಂವಿಧಾನ 371 ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸರ್ಕಾರವಿದ್ದಾಗ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ಆದರೆ ಈ ಸರ್ಕಾರದಲ್ಲಿ ನೇಮಕಾತಿಯೇ ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ನಾವು ಅಭಿವೃದ್ಧಿಯ ವೈಫಲ್ಯದ ವಿಚಾರವನ್ನು ಪ್ರಸ್ತಾಪಿಸುತ್ತೇವೆ ಎಂಬ ಕಾರಣಕ್ಕಾಗಿಯೇ ಚರ್ಚೆ ಮಾಡಲು ಸಮಯ ಕೊಡುತ್ತಿಲ್ಲ. ಮತಾಂತರ ನಿಷೇಧ ವಿಧೇಯಕವನ್ನು ತಂದು ಜನರ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ ಎಂದು ಆರೋಪಿಸಿದರು.

 

 

Related posts

ಜನವರಿ 04 ರಂದು ಹೊಳ ಆಲೂರು ಗ್ರಾಮದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಿಗೆ ಪಾದಯಾತ್ರೆ..

satyadarshana

ಕನ್ನಡ ಜನಪದವು ವಾಣಿಜ್ಯೀಕರಣದತ್ತ ಸಾಗಲಿ : ಪ್ರೊ. ಚಂದ್ರಶೇಖರ ವಸ್ತ್ರದ

satyadarshana

ದೇವರ ಮನೆಯಲ್ಲೇ ದರೋಡೆ: ಜನಾರ್ದನ ರೆಡ್ಡಿ ಕ್ಷೇತ್ರದಲ್ಲಿ ಶಾಸಕರ ನಿಧಿಗೆ ಕನ್ನ

satyadarshana

Leave a Comment