Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

“ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ”  

ಸತ್ಯದರ್ಶನ

  ಗದಗ: ಜೀವನದಲ್ಲಿ ಅನೇಕ ಸಮಸ್ಯೆಗಳು ತಾಂಡವಾಡುತ್ತವೆ ಸಮಸ್ಯೆಗಳನ್ನು ಅನುಭವಿಸುವುದು ಕೂಡಾ ಅಪರಾಧವೇ ಪ್ರತಿ ಸಮಸ್ಯೆಯನ್ನು ಎದುರಿಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯವೆಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಸರೋಜಿನ ಅಕ್ಕನವರು ಹೇಳಿದರು.

   ಗಜೇಂದ್ರಗಡ ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಆಝಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ಕಾನೂನು ಅರಿವು-ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

   ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶರಾದ ರಾಮಕಾಂತ ಚವ್ಹಾಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಪ್ರತಿಯೊಬ್ಬರು ಕಾನೂನಿನ ಅರಿವನ್ನು ಹೊಂದಿ ನೆರವು ಪಡೆದು ಸಮರ್ಥವಾಗಿ ಬದುಕಲು ಅಣಿಗೊಳ್ಳಬೇಕೆಂದು ಕರೆ ನೀಡಿದರು.

   ಕಾರ್ಯಕ್ರಮದಲ್ಲಿ ಕಾನೂನು ಅರಿವು-ನೆರವು ಕುರಿತು ಎಸ್ ಬಿ ಹಿಡಕಿಮಠ, ಎಂ ಎಸ್ ಹಡಪದ, ಬಿ ಎಮ್ ಕುಂಬಾರ, ಬಿ ಎಸ್ ರಂಗನಗೌಡ್ರು ಉಪನ್ಯಾಸ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ: ಶಾಸಕರು, ಜಿಲ್ಲಾಧಿಕಾರಿಗಳಿಂದ ಪುಷ್ಪನಮನ

satyadarshana

ಕೊಪ್ಪಳ ಜಿಲ್ಲೆ ಮುದ್ಲಾಪುರ ಗ್ರಾಮಸ್ಥರು ನಮ್ಮ ಬವಣೆ ಕೇಳುವವರು ಯಾರು ಇಲ್ಲ

satyadarshana

ನರೇಗಾ ಉದ್ಯೋಗ ವಾಹಿನಿ ರಥ ಯಾತ್ರೆಗೆ ಚಾಲನೆ.

satyadarshana

Leave a Comment