ಸುದ್ದಿಮೂಲ ಸತ್ಯದರ್ಶನ
ಬೆಂಗಳೂರು: ಅಕ್ಟೋಬರ್ 7 ರಿಂದ 15ರವರೆಗೆ ದಸರಾ ಸಂಭ್ರಮ ಮೇಳೈಸಲಿದೆ. ಕೊರೊನಾ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೊಸ ಮಾರ್ಗ ಸೂಚಿಯನ್ನ ಪ್ರಕಟ ಮಾಡಿದೆ.
ಭಾರತದ ಮೈಸೂರಿನಲ್ಲಿ, ಮೈಸೂರು ದಸರಾ ಸಮಯದಲ್ಲಿ ವಿಜಯದಶಮಿ ಆನೆ ಮೆರವಣಿಗೆಯನ್ನು ಜಂಬೋ ಸವಾರಿ ಎಂದು ಕರೆಯಲಾಗುತ್ತದೆ (ಬ್ರಿಟಿಷರು ಮೈಸೂರು ರಾಜ್ಯವನ್ನು ನಿಯಂತ್ರಿಸಿದಾಗ). ಈ ಮೆರವಣಿಗೆಯ ಮೂಲ ಹೆಸರು ಜಂಬಿ ಸವಾರಿ (“ಶಮಿ (ಬನ್ನಿ) ಮರಕ್ಕೆ ಹೋಗುವುದು”). ಈಗ ಚಾಮುಂಡೇಶ್ವರಿ ದೇವಿಯನ್ನು ಆನೆಯ ಮೇಲೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಆದರೆ “ಜಂಬೋ” ಹೆಸರು ಇನ್ನೂ ಹಾಗೇ ಇದೆ.
ಕೊರೊನಾ ಹಿನ್ನೆಲೆಯಲ್ಲಿ ಅತ್ಯಂತ ಸರಳ ಮತ್ತು ಭಕ್ತಿ ಪೂರ್ವಕವಾಗಿ ಹಬ್ಬ ಆಚರಿಸಬೇಕು ಜಿಲ್ಲಾಡಳಿತ ಕೆಲವು ನಿರ್ಬಂಧ ವಿಧಿಸುವ ಮುನ್ನ ವ್ಯಾಪಕವಾಗಿ ಜನರ ಮುಂದೆ ಪ್ರಚಾರ ಮಾಡಬೇಕು ಮೈಸೂರು ದಸರಾ ಹೊರತಾಗಿ ರಾಜ್ಯದ ಉಳಿದ ಕಡೆ ಒಮ್ಮೆಲೆ 400ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಸಾಮಾಜಿಕ ಅಂತರವನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು ಸಾಮಾಜಿಕ ಅಂತರವಿಲ್ಲದೇ ನಡೆಸಲಾಗುವ ಎಲ್ಲಾ ಕಾರ್ಯಕ್ರಮಗಳನ್ನ ನಿಷೇಧ ಮಾಡಲಾಗುತ್ತದೆ ಸರ್ಕಾರ ಹೊರಡಿಸಿರುವ ಕೊರೊನಾ ನಿಯಮನ್ನ ಕಡ್ಡಾಯವಾಗಿ ಪಾಲನೆ ಮಾಡಬೇಕು
ಹಬ್ಬ ಹರಿದಿನಗಳು ಸಾಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯಗಳು ಉಂಟಾಗಲು ಪೂರಕವಾಗಿರುವುದರಿಂದ ದಸರಾ ಹಬ್ಬವನ್ನು ಕೂಡ ಹಾಗೆಯೇ ಆಚರಿಸಬೇಕು. ಕಾನೂನಿಗೆ ಯಾವುದೇ ಭಂಗ ತರಬಾರದು
ಮೈಸೂರಿಗೆ ಪ್ರತ್ಯೇಕ ಮಾರ್ಗಸೂಚಿ..!
ಅರಮನೆಯ ಆವರಣದಲ್ಲಿ ನಡೆಸಲಾಗುವ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ಗಳನ್ನ ಕಡ್ಡಾಯವಾಗಿ ಬಳಸಬೇಕು
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಸೋಂಕು ಹರಡುವುದನ್ನ ತಡೆಗಟ್ಟಲು ಈ ವರ್ಷದ ಹಬ್ಬ ಆಚರಣೆಯನ್ನು ಮೈಸೂರಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ಅವಕಾಶ ಮಾಡಿಕೊಡಬೇಕು. ಈ ಸಮಾರಾಂಭಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ನಿಷೇಧಿಸಿದೆ.ವೀಕ್ಷಣೆಗೆ 500 ಮಂದಿ ಮೀರದಂತೆ ನೋಡಿಕೊಳ್ಳಬೇಕು
ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ರಾತ್ರಿ 7 ರಿಂದ 9 ರವರೆಗೆ ಅವಕಾಶ
ಐತಿಹಾಸಿಕ ಜಂಬೂ ಸವಾರಿ ದಿನ 500 ಮಂದಿಗೆ ಅವಕಾಶ ಪೊಲೀಸ್, ಕಲಾವಿದರು, ಮಾದ್ಯಮದವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ
