Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿ

‘ಪಂಜಾಬ್​ನಲ್ಲಿ ಹೊಸ ಇತಿಹಾಸ ಸೃಷ್ಟಿ’ಸಿದ್ದಾರಂತೆ ರಾಹುಲ್ ಗಾಂಧಿ..!

ಸುದ್ದಿಮೂಲ ಸತ್ಯದರ್ಶನ
ನವದೆಹಲಿ: ಚರಣ್​ಜಿತ್​ ಸಿಂಗ್​ ಚನ್ನಿ ಅವರನ್ನು ಪಂಜಾಬ್ ಮುಖ್ಯಮಂತ್ರಿ ಮಾಡುವ ಮೂಲಕ ರಾಹುಲ್ ಗಾಂಧಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್​ ಘಟಕ ಬಣ್ಣಿಸಿದೆ.
ಈ ಬಗ್ಗೆ ಮಾತನಾಡಿರುವ ಪಂಜಾಬ್​​ ಪ್ರದೇಶ ಕಾಂಗ್ರೆಸ್​​​ ಅಧ್ಯಕ್ಷ ನವಜೋತ್​​​ ಸಿಧು, ಈ ಬಗ್ಗೆ ನನಗೆ ಹೆಮ್ಮೆ ಇದೆ. ಒಳ್ಳೆಯ ವ್ಯಕ್ತಿ ಪಂಜಾಬ್ ಮುಖ್ಯಮಂತ್ರಿ ಆಗಿದ್ದಾರೆ ಅನ್ನೋ ಸಂತೋಷವು ಇದೆ. ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸಲು ಚರಣ್​​ಜಿತ್​​​​ ಉತ್ತಮ ಆಯ್ಕೆ ಎಂದು ನವಜೋತ್​ ಸಿಧು ಹೊಗಳಿದ್ದಾರೆ.
ಚರಣ್‌ಜಿತ್‌ ಸಿಂಗ್‌ ಚನ್ನಿಗೆ ಮೀಟು ಸಂಕಷ್ಟ..!
ಇನ್ನು, ಚರಣ್‌ಜಿತ್‌ ಸಿಂಗ್‌ ಚನ್ನಿ ಪಂಜಾಬ್​​​ ಸಿಎಂ ಆದ ಬೆನ್ನಲ್ಲೇ ಹೊಸ ತಲೆನೋವು ಶುರುವಾಗಿದೆ.. ಪಟ್ಟಕ್ಕೇರುತ್ತಿದ್ದಂತೆ ಕೂಡಲೇ ಅವರ ರಾಜಿನಾಮೆ ಪಡೆಯುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ. ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿರುವ ರೇಖಾ ಶರ್ಮಾ, 2018 ರಲ್ಲಿ ಮೀಟೂ ಚಳವಳಿಯ ಸಮಯದಲ್ಲಿ ಚರಣಜಿತ್ ಸಿಂಗ್ ಚನ್ನಿ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿತ್ತು.
ಆ ಸಮಯದಲ್ಲೇ ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ರಾಜ್ಯ ಮಹಿಳಾ ಆಯೋಗದ ಆಧ್ಯಕ್ಷರು ಸ್ವತಃ ಧರಣಿ ಕುಳಿತಿದ್ದರು. ಆದರೆ ಏನೂ ಆಗಲಿಲ್ಲ, ಎಂದು ರೇಖಾ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related posts

ಕರ್ನಾಟಕ ದಲಿತ ಸಂಘರ್ಷ ಸಮಿತಿ ಗಜೇಂದ್ರಗಡ ತಾಲೂಕು ಸಮಿತಿ ಯಿಂದ ಆಹಾರ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಕುರಿತು ಮನವಿ

satyadarshana

ಗ್ರಾಮಾಭಿವೃದ್ಧಿ, ಸ್ವಾಯತ್ತತೆ ರೂಪಿಸುವ ಮೂಲಕ ಗ್ರಾಮೀಣ ಸಬಲೀಕರಣಕ್ಕೆ ಉತ್ತೇಜನ- ಸಿಇಓ ವರ್ಣಿತ್ ನೇಗಿ

satyadarshana

ನರೇಗಲ್:‌ ಪದವಿ ಕೋರ್ಸುಗಳಿಗೆ ಪ್ರವೇಶ ಆರಂಭ ಭರದಿಂದ ಸಾಗಿದ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿಸಿಎ ಪ್ರವೇಶಗಳು

satyadarshana

Leave a Comment