ಗದಗ: R T O ಆಫೀಸ್ ಹತ್ತಿರ ಕರ್ನಾಟಕ ಗೃಹ ಮಂಡಳಿ ರಾತ್ರೋರಾತ್ರಿ ಅಕ್ರಮ ಮಣ್ಣು ಗಣಿಗಾರಿಕೆ ಹೇಳೋರಿಲ್ಲ ಕೇಳೋರಿಲ್ಲ ಇದರಲ್ಲಿ R T O ಅಧಿಕಾರಿಗಳು ಶಾಮಿಲ್ ಆಗಿದ್ದು ಹಾಗೂ ರಾತ್ರಿ ಪಾಳಿಯಲ್ಲಿ ಇರುವಂತಹ ಹೋಂ ಗಾರ್ಡ್ಸ್ ಗಳು ಮೊಹರಂ ಕಳ್ಳರಿಂದ ಹಣ ಪಡೆದುಕೊಂಡು ಸರಾಯಿ ಕುಡಿದುಕೊಂಡು ಸುಮ್ಮನೆ ಮಲಗು ಬಿಡುತ್ತಾರೆ .
ಸಾರ್ವಜನಿಕರು ಕೇಳಿದರೆ ಇದರ ಬಗ್ಗೆ ನಮಗೆ ಏನೂ ಮಾಹಿತಿ ಇಲ್ಲ ಎಂದು ಉಡಾಫೆ ಉತ್ತರ ಕೊಡುತ್ತಾರೆ ಹಾಗೂ ಕರ್ನಾಟಕ ಗ್ರಹ ಮಂಡಳಿಯ ಆಸ್ತಿಯಾಗಿದ್ದು ಸರ್ವೆ ನಂಬರ್ 179/..16.34. ಗುಂಟೆ ಜಮೀನಿದ್ದು ಅದರಲ್ಲಿ ಸುಮಾರು ಕೋಟ್ಯಂತರ ರೂಪಾಯಿಯ ಕೆಂಪು ಮಣ್ಣು ರಾತ್ರೋರಾತ್ರಿ ರಾಜ್ಯ ಹೆದ್ದಾರಿ ಹಾಗೂ ಲೇಔಟ್ ಗಳಿಗೆ ಸರಬರಾಜುವಾಗುತ್ತಿದ್ದು
ಈ ಕಳ್ಳ ಕದಮರಿಗೆ ಕರೆ ಮಾಡಿದರೆ ಪತ್ರಕರ್ತರಿಗೆ ಧಮ್ಕಿ ಹಾಕುತ್ತಿದ್ದು ಹಾಗೂ ಇದರ ಬಗ್ಗೆ ಯಾರು ಇದ್ದರೂ ಸಾರ್ವಜನಿಕರು ಮಾತಾಡಿದರೆ ಅವರಿಗೂ ಕೂಡ ಧಮ್ಕಿ ಹಾಕಿ ಜೀವ ಬೆದರಿಕೆ ಹಾಕುತ್ತಾ ಬಂದಿರುತ್ತಾರೆ ಈ ಬಗ್ಗೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳಿಗೂ ಅವರಿಗೆ ಕೂಡ ಜೀವ ಬೆದರಿಕೆ ಹಾಕುತ್ತಾ ಬಂದಿರುತ್ತಾರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವಂತಹ ದುಡ್ಡವನ್ನು ತಂತಿ ಬೇಲಿ ಹಾಕಿಸಿ ರಾತ್ರಿಗಸ್ತಿಗೆ ಸಿಬ್ಬಂದಿ ಯೋಜನೆ ಮಾಡಬೇಕೆಂದು ಕಳಸಾಪುರ ಹಾಗೂ ಮನಸಮುದ್ರ ಗ್ರಾಮಸ್ಥರು ಹಾಗೂ ಕಳಸಾಪುರ ಬಡಾವಣೆಯ ಗೃಹ ಮಂಡಳಿಯ ನಿವಾಸಿಗಳು ಅಗ್ರಹಿಸಿದ್ದು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಧರಣಿ ಕೂಡ ಬೇಕಾಗುತ್ತದೆ ಎಂದು ಗ್ರಹ ಮಂಡಳಿ ಸ್ಥಳೀಯ ಗ್ರಾಮಸ್ಥರು ನಿವಾಸಿಗಳು ಆಗ್ರಹಿಸಿದ್ದಾರೆ

