ಶಿರಹಟ್ಟಿ ೧೮ : ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಅವಧಿಯೊಳಗೆ ಕಾಮಗಾರಿಯನ್ನು ಮುಗಿಸಬೇಕು ಗುತ್ತಿಗೆದಾರರಿಗೆ ಸೂಚಿಸುವದರ ಜೊತೆಗೆ ಸ್ಥಳೀಯ ಜನ ಪ್ರತಿನಿಧಿಗಳ ಸಹಕಾರ ಅತ್ಯ ಅವಶ್ಯವಾಗಿದೆ ಎಂದು ಕಾನೂನು ನ್ಯಾಯ, ಮಾನವ ಹಕ್ಕುಗಳು, ಪ್ರವಾಸೋದ್ಯಮ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ. ಪಾಟೀಲ ಹೇಳಿದರು. 
ಅವರು ಶನಿವಾರ ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ಜಾಗೆಯಲ್ಲಿ ಸುಮಾರು ೧೯೬೮೦ ಲಕ್ಷ ರೂಗಳ ವೆಚ್ಚದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಕೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅಂಬೇಡ್ಕರ ಭವನ ನಿರ್ಮಾಣಕ್ಕೆ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಪಟ್ಟಣದ ಮಧ್ಯಭಾಗದಲ್ಲಿ ಇದು
ನಿರ್ಮಾಣವಾಗುತ್ತಿರುವದರಿಂದ ಪಟ್ಟಣದ ಮುತ್ತಲಿನ ಹಾಗೂ ಸುತ್ತ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡುತ್ತಾ, ಶಿರಹಟ್ಟಿ ಹಾಗೂ ಲಕ್ಷೇಶ್ವರ ತಾಲೂಕಿನಲ್ಲಿ
ನಿರ್ಮಿತಿ ಕೇಂದ್ರದವರು ಭವನಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಆ ಎಲ್ಲ ಭವನಗಳಲ್ಲಿ ಪ್ರತಿಧ್ವನಿ ಮಾರ್ಧನಿಸುತ್ತದೆ. ಇದರಿಂದ ಇಲ್ಲಿ ಕಾರ್ಯಕ್ರಮ ಮಾಡುವವರಿಗೆ ತುಂಬಾ ತೊಂದರೆಯಾಗುತ್ತಿದೆ. ಈಗ ಇಲ್ಲಿ ಅಂಬೇಡ್ಕರ ಭವನ ನಿರ್ಮಾಣ ಮಾಡುತ್ತಿದ್ದಾರೆ. ಒಳ್ಳೆಯ ಆರ್ಕೆಡರ್ಗಳನ್ನು ಸಂಪರ್ಕಿಸಿ ಪ್ರತಿಧ್ವನಿ ಆಗದಂತೆ
ಭವನ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ಕೋರ್ಟ್ನ ಜಾಗೆಯನ್ನು ನಿಗದಿಪಡಿಸಿತ್ತು. ಆದರೆ ಇತ್ತೀಚೆಗೆ ಹೈಕೋರ್ಟ್ ಜಡ್ಜ್ ಬಂದು ಸಮರ್ಪಕ ರಸ್ತೆಯಿಲ್ಲ ಎಂದು ಹೇಳಿ ರದ್ದು ಮಾಡಿ ಹೋಗಿದ್ದಾರೆ. ಅದರ ಬಗ್ಗೆ ಹಾಗೂ ಶಿರಹಟ್ಟಿ ತಾಲೂಕಿಗೆ ಕೆಇಬಿ ಎಇಇ ಕಾರ್ಯಾಲಯ ಅವಶ್ಯಕವಾಗಿದ್ದು ಸಚಿವ ಹೆಚ್. ಕೆ. ಪಾಟೀಲ
ಅವುಗಳನ್ನು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಐ.ಜಿ ಸನದಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಪ.ಪಂ. ಅಧ್ಯಕ್ಷೆ ದೇವಕ್ಕ ಗುಡಿಮನಿ, ಶಾಕೀರ್ ಸನದಿ, ವಿ.ವಿ ಕಪ್ಪತ್ತನವರ, ಬಿಜೆಪಿ ನಗರ ಘಟಕ ಹುಮಾಯೂನ್ ಮಾಗಡಿ, ಪಟ್ಟಣ ಪಂಚಾಯತ್ ಸದಸ್ಯ ಸಂದೀಪ ಕಪ್ಪತ್ತನವರ, ಶಿರಾಜ ಬಳ್ಳಾರಿ, ತಿಪ್ಪಣ್ಣ ಕೊಂಚಿಗೇರಿ, ಪರಮೇಶ ಪರಬ್, ಹೊನ್ನಪ್ಪ ಶಿರಹಟ್ಟಿ, ಶರಣಪ್ಪ ಹರ್ಲಾಪೂರ, ಫಕ್ಕೀರೇಶ ಮ್ಯಾಟಣ್ಣವರ, ಚಂದ್ರಶೇಖರ ಹರಿಜನ, ಮುತ್ತರಾಜ ಭಾವಿಮನಿ, ಫಕ್ಕೀರೇಶ ನಡುವಿನಕೇರಿ, ಮೋಹನ್ ಗುತ್ತೆಮ್ಮನವರ, ರಾಮಣ್ಣ ಕಂಬಳಿ, ಯಲ್ಲಪ್ಪ ಇಂಗಳಗಿ, ಮಂಜುನಾಥ ಸೊಂಟನೂರ, ಪೂಜಾರ, ಶಶಿ ಪೂಜಾರ ಹಾಗೂ ಅನೇಕ ಕಾರ್ಯಕರ್ತರು ಇದ್ದರು.
