Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಅಂತರ್ಜಾತಿ ಮದುವೆ ಆಗಿದ್ದಕ್ಕೆ ದ್ವೇಷದಿಂದ ದಲಿತ ಕುಟುಂಬದ ಮೇಲೆ ಮಾರನಾಂತಿಕ ಹಲ್ಲೆ ಮಾಡಿದ ಮೇಲ್ಜಾತಿಯ ಪುಡಾರಿಗಳು 

 

ರೋಣ : ಮೇ 16..ಗದಗ ಜಿಲ್ಲೆ ರೋಣ ತಾಲೂಕು ಸವಡಿ ಗ್ರಾಮದ ನಿವಾಸಿಯಾದ ದಲಿತ ಸಮುದಾಯಕ್ಕೆ ಸೇರಿದ ಅಕ್ಷತಾ ಹುನಸಿಮರದ ಎಂಬ ಯುವತಿ ಮತ್ತು ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಮಂಜುನಾಥ್ ಈರಪ್ಪ ಕಟಗಿ ಎಂಬ ಯುವಕ ಇವರಿಬ್ಬರು 4 ವರ್ಷದ ಇಂದೇ ಪ್ರೀತಿಸಿ ಅಂತರ್ಜಾತಿ ವಿವಾಹ ಆಗಿರುತ್ತಾರೆ ಪ್ರೀತಿಸಿ ಮದುವೆ ಆದ ದಲಿತ ಸಮುದಾಯದ ಅಕ್ಷತಾ ಮತ್ತು ಮೇಲ್ಜಾತಿಯ ಸಮುದಾಯದ ಮಂಜುನಾಥ ಇವರು 2 ಮಕ್ಕಳೊಂದಿಗೆ ಅನ್ನೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ ಅಕ್ಷತಾಳ ಗಂಡ ಟ್ರ್ಯಾಕ್ಟರ್ ಡ್ರೈವರ್ ನಾಗಿ ಜೀವನ ಸಾಗಿಸುತ್ತಿರುತ್ತಾನೆ.

ದಿನಾಂಕ್ 12-5-2025.ಸೋಮುವಾರರಂದು ರಾತ್ರಿ 9.30 ಗಂಟೆ ಸುಮಾರಿಗೆ ದಲಿತ ಸಮುದಾಯಕ್ಕೆ ಸೇರಿದ ಅಕ್ಷತಾಳ ಗಂಡ ಮಂಜುನಾಥ್ ಡ ಸ ಹಡಗಲಿ ಮಾರ್ಗವಾಗಿ ಗದಗದಿಂದ ಸವಡಿ ಗ್ರಾಮದತ್ತ ಟ್ರ್ಯಾಕ್ಟರ್ ತುಗೊಂಡು ಬರುತ್ತಿರುತ್ತಾನೆ ಸವಡಿ ಸಮೀಪದ ಕಿನಾಲ ಹತ್ತಿರ ಎದುರಿಗೆ ಬುಲೋರೋ ವಾಹನದಲ್ಲಿ ಸಂಧಿಗವಾಡ ಗ್ರಾಮದ ಮೇಲ್ಜಾತಿಯ ಗಾಣಿಗ ಸಮುದಾಯಕ್ಕೆ ಸೇರಿದ ಬಲಾಡ್ಯ ವ್ಯಕ್ತಿಗಳು ರಾಜುಗೌಡ ಪಾಟೀಲ್ ಮತ್ತು ಆತನ ಸಹಚರರು ಪರ್ವಾತಗೌಡ ಸೇರಿದಂತೆ 5 ಜನ ಸೇರಿಕೊಂಡು ಮಂಜುನಾಥನ್ನು ತಡೆದು ಕ್ಸುಲಕ ಕಾರಣಕ್ಕೆ ಹೆಡಲೈಟ್ ಡಿಂಪೆಲ್ ಕೊಡುತ್ತಿಲ್ಲವೆಂದು ದಲಿತ ಮಹಿಳೆಯನ್ನು ಮದುವೆಯಾದ ಮಂಜುನಾಥನ್ನು ರಾಜುಗೌಡ ಮತ್ತು ಪರ್ಥಗೌಡ ಸೇರಿಕೊಂಡು ಹಲ್ಲೆ ಮಾಡಿ ಹೋಗಿರುತ್ತಾರೆ

ಹಲ್ಲೆಗೆ ಒಳಗಾದ ಅಕ್ಷತಳ ಗಂಡ ಮಂಜುನಾಥ ಮತ್ತು ಸಂಬಂದಿತ್ತರರು ಸೇರಿಕೊಂಡು ಮರಣಾಂತಿಕಾ ಹಲ್ಲೆ ಮಾಡಿದ ರಾಜುಗೌಡ ಮತ್ತು ಪರ್ತಗೌಡ ಅವರ ತಂಡದ ವಿರುದ್ಧ ರೋಣ ಪೊಲೀಸ್ ಠಾಣೆಗೆ ದೂರುಕೊಡಲು ಹೊರಟಿರುತ್ತಾರೆ ಹೋರಟ ಸಮಯದಲ್ಲಿ ಸಂಧಿಗವಾದ ಗ್ರಾಮಸ್ಥರು ಮತ್ತು ಸವಡಿ ಗ್ರಾಮಸ್ಥರು ಅಕ್ಷತಾ ಮತ್ತು ಮಂಜುನಾಥನನ್ನು ತಡೆದು ದೂರು ಕೊಡುವುವದು ಬೇಡ ಹಿರಿಯರ ಸಮ್ಮುಖದಲ್ಲಿ ಹೇಳಿ ಮುಗಿಸೋಣ ದೂರು ಕೊಡಬೇಡಿ ಎಂದು ತಡೆದಿರುತ್ತಾರೆ

ಬಳಿಕ ದಿನಾಂಕ 14-5-2025 ಬುಧವಾರರಂದು ಹಿರಿಯರ ಸಮ್ಮುಖದಲ್ಲಿ ಬಗೆಹರುಸುವುದಾಗಿ ಅಕ್ಷತಾ ಮತ್ತು ಅಕ್ಷತನ ಗಂಡನಾದ ಮಂಜುನಾಥ್ ಹಾಗೂ ಅಕ್ಷತನ ಅಣ್ಣನಾದ ಮಂಜುನಾಥ ಮಲ್ಲಪ್ಪ ಹುನಸಿಮರದ ಮತ್ತು ಮಂಜುನಾತನ ಗೆಳೆಯರಾದ ಅನ್ವರಸಾಬ ಬಾಬುಸಾಹೇಬ ನದಾಫ್ ಚಿಕ್ಕಮನ್ನೂರು ಗ್ರಾಮದಲ್ಲಿ ಇರುವ ರಾಜುಗೌಡ ಪಾಟೀಲ್ ಪೆಟ್ರೋಲ್ ಪಂಪ್ ಗೆ ಮದ್ಯಾನ 12.30 ಸುಮಾರಿಗೆ ಕರೆಸಿ ರಾಜುಗೌಡ ಪಾಟೀಲ್.ತಿಪ್ಪನಗೌಡ ಹುಲ್ಲೂರು.ವೀರನಗೌಡ ಬಂಗ್ಲಿ.ಪುಲಿಕೇಶಗೌಡ ಬಂಗ್ಲಿ.ಗೌಡಪ್ಪಗೌಡ ಪಾಟೀಲ.ಕೃಷ್ಣಾನಗೌಡ.ರಾಮನಗೌಡ ಪಾಟೀಲ್. ಮಲ್ಲಪ್ಪ ಟಕೆದ ಮೇಲ್ಜಾತಿಗೆ ಸೇರಿದ ಇವರೆಲ್ಲರೂ ಕೂಡಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಜಾತಿನಿಂದನೆ ಮಾಡುವದರೊಂದಿಗೆ ಅಕ್ಷತಾ.ಮಂಜುನಾಥ.ಅಕ್ಷತನ ಅಣ್ಣನಾದ ಮಂಜುನಾಥ ಅನ್ವರಸಾಬ ಈ ನಾಲ್ಕು ಜನರನ್ನು ಪೆಟ್ರೋಲ್ ಪಂಪಿನಲ್ಲಿ ಮನಬಂದಂತೆ ತಳಿಸಿ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.

ಅಂತರ್ಜಾತಿ ವಿವಾಹ ಆಗಿದ್ದಕ್ಕೆ ದ್ವೇಷದಿಂದ ಹಲ್ಲೆ ಮಾಡಿರುವ ಎಂಟು ಜನ ವಿರುದ್ಧ ಸಧ್ಯ ರೋಣ ಪೊಲೀಸ್ ಠಾಣಾದಲ್ಲಿ ಎಸ್ಸಿ ಎಸ್ಟಿ ಪ್ರಕರಣ ದಾಖಲಾಗಿದೆ.ಸದ್ಯ 8 ಜನ ಆರೋಪಿ ಪಕಿ 4 ಜನರನ್ನು ಪೊಲೀಸ್ ವಶಪಡೆಸಿಕೊಂಡಿದೆ ಇನ್ನುಳಿದ ಆರೋಪಿಗಳನ್ನು ವಶಕ್ಕೆ ಪಡೆಯಲು ಪೊಲೀಸ ಇಲಾಖೆ ಕಾರ್ಯಾಚರಣೆ ನಡೆಸಿದೆ. ಇನ್ನುಳಿದ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ಮಾಡಿದವರಿಗೆ ಕಾನೂನು ರುಚಿ ತೋರಿಸಬೇಕೆಂದು ರೋಣ ತಾಲೂಕು ಮಟ್ಟದ ದಲಿತ ಮುಖಂಡರ ಒತ್ತಾಯವಾಗಿದೆ

ನಂತರ ನಮ್ಮ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಅಕ್ಷತಾ ಕಟಗಿ ಈ ಘಟನೆ ಉದ್ದೇಶ ಪೂರ್ವಕವಾಗಿ ಆಗಿರುವ ಘಟನೆ ದಲಿತ ಸಮುದಾಯದವಳು ನಾನು ಅಂತರ್ಜಾತಿ ವಿವಾಹ ಆಗಿದ್ದಕ್ಕೆ ನಮ್ಮ ಗಾಣಿಗ ಸಮುದಾಯಕ್ಕೆ ಅವಮಾನ ಆಗಿದೆ ಎಂದು ಈ ಎಂಟು ಜನರು ನನ್ನ ಕುಟುಂಬದ ಮೇಲೆ ದ್ವೇಷ ಸಾದಿಸುತ್ತಿದ್ದಾರೆ ಗಾಣಿಗ ಸಮುದಾಯಕ್ಕೆ ಸೇರಿದ ಮಂಜುನಾಥ ಮತ್ತು ದಲಿತ ಸಮುದಾಯದವಳಾದ ನಾನು ಪ್ರೀತಿಸಿ ಮದುವೆ ಆಗಿರುವದರಿಂದ ಉದ್ದೇಶಪೂರ್ವಕವಾಗಿ ನನ್ನ ಕುಟುಂಬ ದವರ ಮೇಲೆ ಮತ್ತು ನನ್ನ ಗಂಡನಮೇಲೆ ದ್ವೇಷದ ಹಗೆ ಸಾದಿಸುತ್ತಿದ್ದಾರೆ ಈ 8 ಜನರಿಂದ ನನಗೆ ಮತ್ತು ನನ್ನ ಕುಟುಂಬದಬರಿಗೆ ಜೀವ ಬೆದರಿಕೆ ಇರುವದರೊಂದಿಗೆ ನಮ್ಮ ನಮ್ಮ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಆದಷ್ಟು ಬೇಗ ಮರಣಾಂತಿಕಾ ಹಲ್ಲೆ ಆರೋಪಿಗಳನ್ನು ಬಂದಿಸಬೇಕು ಎಂದ ಅಕ್ಷತಾ ಕಟಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮೇಲ್ಜಾತಿಯ ಬಲಾಢ್ಯ ವ್ಯಕ್ತಿಗಳ ಅಟ್ಟಹಾಸ ಇನ್ನೂ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾಯ್ದು ನೋಡೋಣ, ಸದ್ಯ ರೋಣ ಠಾಣೆಯ ಪೊಲೀಸರು 4 ಆರೋಪಿಗಳನ್ನು ಬಂದಿಸಿದ್ದು, ಇನ್ನೂ ಉಳಿದ 4ಜನ ಆರೋಪಿಗಳನ್ನು ಶೀಘ್ರವಾಗಿ ಬಂದಿಸಬೇಕೆಂದು ರೋಣ ತಾಲೂಕಿನ ದ ಸo ಸ ಮುಖಂಡರು ಆಗ್ರಹಿಸಿದ್ದಾರೆ.

ಇಷ್ಟೆಲ್ಲ ಘಟನ ಆದರೂ ಕೂಡ ಈ ಎಸ್ಸಿ ಎಸ್ ಟಿ ಪ್ರಕರಣ ದಾಖಲಾದ 3 ದಿನ ಗತಿಸುತ್ತಾ ಬಂದರು ಕೂಡ 8 ಜನ ಆರೋಪಿ ಪಕಿ 4 ಜನ ಮಾತ್ರ ವಶಕ್ಕೆ ಪಡೆದುಕೊಂಡಿರುತ್ತಾರೆ ಇನ್ನುಳಿದ ಆರೋಪಿಗಳನ್ನು ಆರೋಪಿಗಳನ್ನು ವಶಪಡಿಸಿಕೊಳ್ಳಲು ವಿಳಂಬತೆಗೆ ಕಾರಣವೇನು ಸಾಹೇಬ್ರೆ ಎಂದು ಪ್ರಕರಣದ ತನಿಖಾ ಅಧಿಕಾರಿಗಾಳಿಗೆ ರೋಣ ತಾಲೂಕು ದಲಿತ ಮುಖಂಡರು ನರಗುಂದ DYSP ಗೆ ದೂರವಾಹಿನಿ ಮೂಲಕ ಕರೆ ಮಾಡಿ ಕೇಳಿದ್ರೆ ನಮ್ಮ ಕೆಲಸ ನಾವು ಮಾಡುತ್ತೆವೆ ನೀವು ನಮಗೆ ಕರೆ ಮಾಡಿ ಕೇಳುವ ಅವಶ್ಯಕತೆ ಇಲ್ಲವೆಂದು ದಲಿತ ಮುಖಂಡರಿಗೆ ಅವಮಾನಗೊಳಿಸಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡೆಸುವದರೊಂದಿಗೆ ಆದಷ್ಟು ಬೇಗ ಇನ್ನುಳಿದ ಆರೋಪಿಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಮಾರಣಾಂತಿಕ ಹಲ್ಲೆಗೊಳಗಾದ ದಲಿತ ಕುಟುಂಬಕ್ಕೆ ನ್ಯಾಕೋಡಿಸಬೇಕೆಂದು ನಮ್ಮ ಮಾಧ್ಯಮದೊಂದಿಗೆ ಅಭಿಪ್ರಾಯ ವ್ಯಕ್ತಪಡೆಸಿದ್ದಾರೆ .

Related posts

ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ..! ಕಲಬುರಗಿಯ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು..!

satyadarshana

ಸಫಾಯಿ ಕರ್ಮಚಾರಿಗಳಿಗೆ ಸರ್ಕಾರಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ

satyadarshana

ಡಾ. ಬಿ. ಆರ್. ಅಂಬೇಡ್ಕರ್ ರವರ ಚಿಂತನೆಗಳು ಮಾನವೀಯತೆ ಜೀವಾಳ – ಡಾ. ಮಾದಿ.

satyadarshana

Leave a Comment