ರಾಜ್ಯ ಸರಕಾರ ಕಣ್ಣು ತೆರೆದಿದ್ದು ನಾವು ಎಚ್ಚರಿಕೆಯಿಂದ ನಾನು ಮಾದಿಗ
ಎಂದು ಹೆಸರು ನಮೋದಿಸಲು :ಮಂಜುನಾಥ್ ಬುರುಡಿ ಮತ್ತು ಅವರ ತಂಡ ಅನೇಕ ಹಳ್ಳಿಗಳಿಗೆ ಭೇಟಿ ನೀಡುವದರರೊಂದಿಗೆ ಕರಪತ್ರ ಕೊಡುವದರ ಮೂಲಕ ಮನವಿ
ಗಜೇಂದ್ರಗಡ. ಮೇ 5.6.7.ರಂದು ಜನಗಣತಿ ಪರಿಶಿಷ್ಟ ಜಾತಿ ರಾಜ್ಯ ಸರ್ಕಾರ ನಡೆಸುತ್ತಿದ್ದು ಆದ್ದರಿಂದ ಗಜೇಂದ್ರಗಡ ತಾಲೂಕಿನ ದಲಿತ ಮುಖಂಡರಿಂದ ಗಜೇಂದ್ರಗಡ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮ .ಮಾಟರಂಗಿ.ಗೋಗೇರಿ. ನಾಗರಸಕೊಪ್ಪ.ಚಿಲಝೇರಿ. ಹಾಲಕೆರೆ. ಬೆಚಮಟ್ಟಿ.ರಾಂಪೂರ. ವದೇಗೋಳ. ಹಿರೆಕೊಪ್ಪ. ವೀರಾಪೂರ.ಸೂಡಿ. ದ್ಯಾಮುಣಸಿ. ಬೆನಕಟ್ಟಿ.ಪುರ್ತಗೇರಿ.ನರೇಗಲ್ಲ ,ನಿಡಗುಂದಿ ಹಿರೇಅಳಗುಂಡಿ,ಚಿಕ್ಕಾಳಗುಂಡಿ.ಶಾಂತಗೇರಿ ಇನ್ನು ಅನೇಕ ಹಳ್ಳಿಗಳ ಮನೆಗೆ ಭೇಟಿ ನೀಡಿ ನಮ್ಮ ಮಾದಿಗ ಸಮಾಜದವರಿಗೆ ಸುಮಾರು 101 ಜಾತಿಗಳು ಎಸ್. ಸಿ ಪಟ್ಟಿಯಲ್ಲಿ ಬರುತ್ತಾರೆ ನಾವು ಸೌಲಭ್ಯದಿಂದ ವಂಚಿತರಾಗಿದ್ದೇವೆ ಸುಮಾರು 30 ವರ್ಷಗಳಿಂದ ಸತತವಾಗಿ ಚಳುವಳಿ ಮಾಡುವ ಮೂಲಕ ಸರಕಾರಗಳಿಗೆ ಎಚ್ಚರಿಕೆ ಕೊಟ್ಟಿದ್ದೇವೆ ಈಗ ಎಚ್.ಎ ನ್ ನಾಗಮೋಹನ್ ದಾಸ್ ಅವರ ಆಯೋಗ ಪರಿಶಿಷ್ಟ ಜಾತಿ ಜನಗಣತಿ ನಡೆಸುತ್ತಿದ್ದು, ನಾವು ಎಚ್ಚರಿಕೆಯಿಂದ ಕ್ರಮ ಸಂಖ್ಯೆ 61 ರಲ್ಲಿ ಕಡ್ಡಾಯವಾಗಿ ಮಾದಿಗ ಎಂದು ಬರಿಸುವುದರ ಮೂಲಕ ನಮ್ಮ ಹಕ್ಕು ನಾವು ಪಡೆಯಬೇಕಾಗಿದೆ 2012 ರಲ್ಲಿ ಬೆಳಗಾವ್ ಸುವರ್ಣಸೌಧದ ಮುಂದೆ ಪೊಲೀಸರು ಲಾಟಿಗೆ ಹಲವಾರು ನಮ್ಮ ಅಣ್ಣತಮ್ಮಂದಿರು ಕೈಕಾಲುಗಳನ್ನು ಮುರಿದುಕೊಂಡು ಇನ್ನು ಕೂಡ ಮನೆಯಲ್ಲಿ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ.
2016ರಲ್ಲಿ ಹುಬ್ಬಳ್ಳಿ ಸಮಾವೇಶಕ್ಕೆ ಬರುವಾಗ ಬಸವಕಲ್ಯಾಣದ ನಮ್ಮ ಅಣ್ಣತಮ್ಮಂದಿರು ಎಂಟು ಜನ ಮರಣ ಹೊಂದಿದರು ಸಮುದಾಯಕೋಸ್ಕರ ಅದೆಷ್ಟೋ ಹೋರಾಟಗಾರರು ತಮ್ಮ ತಮ್ಮ ತನು ಮನ ತ್ಯಾಗ ಮಾಡಿದ್ದಾರೆ 30 ವರ್ಷಗಳ ಕಾಲ ಸರ್ಕಾರ ನಮ್ಮ ಸಮುದಾಯಕ್ಕೆ ವಂಚನೆ ಮಾಡುತ್ತಾ ಬಂದಿದ್ದೆ ಈಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಂದಿನ 2016 ಹುಬ್ಬಳಿ ಸಮಾವೇಶದಲ್ಲಿ ದುರ್ಮರಣ ಹೊಂದಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದರು ಮರಣ ಹೊಂದಿದ ಕುಟುಂಬಸ್ಥರಿಗೆ ಸೌಜನ್ಯಕ್ಕಾದರೂ ಭೇಟಿ ಮಾಡದಿರುವುದು ಖಂಡನೀಯ ಇನ್ನೂ ಅರೆಬೆತ್ತಲೆ ಮೆರವಣಿಗೆ ರಸ್ತೆ ರೊಕ್ ಚಳುವಳಿ ಬೃಹತ್ ಪ್ರತಿಭಟನೆ ಡಿಸಿ ಆಫೀಸ್ ಮುತ್ತಿಗೆ ಹಲವಾರು ಚಳುವಳಿ ಮಾಡಿದೆವು ಒಳಮೀಸಲಾಯಿತಿ ಜಾರಿಗಾಗಿ ಬಿ ಆರ್ ಭಾಸ್ಕರ ರವರು ಮತ್ತು ಅವರ ತಂಡ ಕ್ರಾಂತಿಕಾರಿ ಪಾದಯಾತ್ರೆ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಮಾರಕದಿಂದ ಬೆಂಗಳೂರು ಫ್ರೀಡಂ ಪಾರ್ಕ್ ನವರಿಗೆ ಪಾದಯಾತ್ರೆ ಮಾಡುವದರೊಂದಿಗೆ ಪ್ರಿಡಂ ಪಾರ್ಕಿನಲ್ಲಿ ದೊಡ್ಡ ಮಟ್ಟದ ಸಮಾವೇಶ ಮಾಡಿ ಪುನಃ ರಾಜ್ಯದ್ಯಂತ ಪ್ರತಿ ಜಿಲ್ಲೆ ಮತ್ತು ತಾಲೂಕು ಸೇರಿದಂತೆ ಹಳ್ಳಿಗಳಿಗೆ ಕ್ರಾಂತಿಕಾರಿ ರಥಯಾತ್ರೆ ಚಾಲನೆ ಇನ್ನು ಕೂಡ ನಿಂತಿಲ್ಲ ಈ ಮೂಲಕ ನಮ್ಮ ಎಚ್ಚರಿಕೆ ಕೊಡುತ್ತಾನೆ ಬರುತ್ತಿದ್ದೇವೆ ಆದ್ದರಿಂದ ಈಗ ಸರಕಾರ ಕಣ್ಣು ತೆರೆದಿದ್ದು ಜಾತಿಗಣತಿ ಮಾಡಿದ ನಂತರ ಜನ ಸಂಖ್ಯೆ ಅನುಗುಣವಾಗಿ ಒಳಮೀಸಲಾಯಿತಿ ಜಾರಿ ಮಾಡುವದಾಗಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಜಾತಿಗನತೆಗೆಂದು ಅಧಿಕಾರಿಗಳು ಬಂದಾಗ ಎಚ್ಚರಿಕೆಯಿಂದ ಕಾಲಂ ನಂಬರ್ 61 ರಲ್ಲಿ ಮಾದಿಗ ಎಂದು ನಮೋದಿಸಿ ಎಂದು ಮುಖಂಡ ಮಂಜುನಾಥ್ ಬುರುಡಿ ಮತ್ತು ಅವರ ತಂಡ ಜಾಗೃತ ಮೂಡಿಸಿ ಕರಪತ್ರ ಹಂಚುವ ಮೂಲಕ ನಮ್ಮ ಸಮಾಜ ಇನ್ನೂ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ ರಾಜಕೀಯ ಸ್ಥಾನಮಾನದಿಂದ ವಂಚಿತರಾಗಿದ್ದೇವೆ.
ಸರಕಾರಿ ಹುದ್ದೆಯಲ್ಲಿ ಕೂಡ ಹಿಂದುಳಿದಿದ್ದೇವೆ ಎಲ್ಲಾ ಹಕ್ಕುಗಳು ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮ ಮನೆಗೆ ಅಧಿಕಾರಿಗಳು ಬಂದಾಗ ಕರ್ನಾಟಕ ಆದಿ ಆಂಧ್ರ ಆಗಿ ದ್ರಾವಿಡ್ ಹರಿಜನ ಎಸ್ಸಿ ಮಾತಂಗ ಎಂದು ಬರಿಸಬಾರದು ನಾನು ಮಾದಿಗ ಎಂದು ನಿರ್ಭಯವಾಗಿ ಬರೆಸಿ ನಮ್ಮ ನ್ಯಾಯಯುತವಾದ ಹಕ್ಕನ್ನು ಪಡೆಯೋಣ ಎಂದು ಸಮಾಜಕ್ಕೆ ಸಂದೇಶ ಕೊಟ್ಟರು
ಇದೆ ಸಂದರ್ಭದಲ್ಲಿ ಬಸವರಾಜ ಕಡಿಬಿನ ,ಮಂಜುನಾಥ ಬುರಡಿ.ರವಿ ಮಾದರ. ಮಾರುತಿ ಹಾದಮನಿ.ರಮೇಶ ಕಡಿಬಿನ. ಕುಮಾರ ಸಣ್ಣಕ್ಕಿ.ಯಲ್ಲಪ್ಪ ಹಿರೇಮನಿ. ಅಯ್ಯಪ್ಪ ದಂಡಿನ.ಹನಮಂತ ಮಾದರ. ಶರಣು ದೊಡ್ಡಮನಿ. ಇನ್ನು ಅನೇಕರು ಉಪಸ್ಥಿತರಿದ್ದರು
ವರದಿ. ಅಂದಪ್ಪ ಮಾದರ
