Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಹಗಲು-ರಾತ್ರಿ ನಿತ್ಯ ನೂರಾರು ಟ್ರಿಪ್ ಮರಂ ಸಾಗಣೆ ಕಣ್ಣು ಮುಚ್ಚಿ ಕುಂತ ಅಧಿಕಾರಿಗಳು. ?

ಗಜೇಂದ್ರಗಡ: ತಾಲೂಕಿನ ಗ್ರಾಮದ ಬೊಮ್ಮಸಾಗರ ಸುತ್ತಮುತ್ತಲಿನ ಸಾಗುವಳಿ ಭೂಮಿಯಲ್ಲಿ ಹಗಲು-ರಾತ್ರಿ ನಿತ್ಯ ನೂರಾರು ಟ್ರಿಪ್ ಮರಂ ಸಾಗಣೆ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ ಹೇಳಿದರೆ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ ಇವರೇ ಇದರಲ್ಲಿ ಶಾಮೀಲಾಗಿದ್ದಾರೆ. ಅಕ್ರಮ ಮರಂ ಸಾಗಣೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು

ಬೊಮ್ಮಾಸಾಗರ  ಭಾಗದಲ್ಲಿ ಅಕ್ರಮ ಮರಂ ಸಾಗಣೆ ಮಾಡುತ್ತಿರುವ ಮಾಹಿತಿ ಬಂದಿದೆ. ಜಮೀನು ಮಾಲೀಕರು ಮತ್ತು ಮರಂ ಸಾಗಣೆದಾರರ ವಿರುದ್ಧ ದೂರು ದಾಖಲಿಸಲಾಗುವುದು. ಪರವಾನಗಿ ಇಲ್ಲದೇ ಮರಂ ಸಾಗಣೆ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

ಕ್ರಮವಿಲ್ಲ: ಅಕ್ರಮ ಮರಂ ಸಾಗಣೆ ಮಾಡುತ್ತಿರುವ ಕುರಿತು ಕೆಲವರು, ಮಾಹಿತಿ, ದೂರು ನೀಡುತ್ತಾರೆ. ದೂರಿನ ಹಿನ್ನೆಲೆಯಲ್ಲಿ ತಕ್ಷಣ ಸ್ಥಳ ಪರಿಶೀಲನೆ, ದಾಳಿ ನಡೆಸುವ ಅಧಿಕಾರಿಗಳು, ನೆಪಕ್ಕೆ 5 ರಿಂದ 10 ಸಾವಿರ ರೂ. ದಂಡ ವಿಧಿಸಿ ವಾಹನಗಳನ್ನು ಬಿಡುತ್ತಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ಮರಂ ಸಾಗಣೆ ದಂಧೆ ಮಾಡುತ್ತಿರುವ ಗುತ್ತಿಗೆದಾರರು, ಅಧಿಕಾರಿಗಳು ವಿಧಿಸುವ ಐದು-ಹತ್ತು ಸಾವಿರ ರೂ. ದಂಡಕ್ಕೆ ಕಿಮ್ಮತ್ತು ಕೊಡುತ್ತಿಲ್ಲ.

ಸರಕಾರಿ ಜಮೀನು, ಅರಣ್ಯ ಪ್ರದೇಶ, ಪಟ್ಟಾ ಲ್ಯಾಂಡ್, ಕೃಷಿ ಸಾಗುವಳಿ ಜಮೀನಿನಲ್ಲಿ ಪರವಾನಗಿ ಇಲ್ಲದೆ ಅಕ್ರಮ ಮರಂ ಸಾಗಣೆ ಮಾಡಲಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಲಾಗಬೇಕಾದ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪ ಕೆಲವರಿಂದ ವ್ಯಕ್ತವಾಗಿದೆ.

Related posts

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ನಿಮಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು- ಜಿಲ್ಲಾಧಿಕಾರಿ ನಲಿನ್ ಅತುಲ್

satyadarshana

ಕರ್ನಾಟಕ ಈ ಬಾರಿ ಯಾರಿಗೆ ಅಧಿಕಾರ..?

satyadarshana

ಬಾಬಾ ಸಾಹೇಬರ ಕಳೆದುಕೊಂಡ ಭಾರತ ಅನಾಥವಾಗಿದೆ: ಮಂಜು ಬುರುಡಿ

satyadarshana

Leave a Comment