Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಚೈತನ್ಯ ಕ್ರೀಡಾ ಸಂಸ್ಥೆಯ ಸೇವೆ ಅನನ್ಯ: ಮಿಥುನ ಪಾಟೀಲ ಅಭಿಮತ: 

ಚೈತನ್ಯ ಕ್ರೀಡಾ ಸಂಸ್ಥೆಯ ಸೇವೆ ಅನನ್ಯ: ಮಿಥುನ ಪಾಟೀಲ ಅಭಿಮತ:

ನರೇಗಲ್ಲ

ಪ್ರತಿಯೊಬ್ಬ ಕ್ರೀಡಾಪಟುವಿನಲ್ಲೂ ಕ್ರೀಡಾ ಮನೋಭಾವ ಮುಖ್ಯ ವಾಗಿದ್ದು, ನೀವು ಸ್ಪರ್ಧಿಸುವ ಪ್ರತಿ ಪಂದ್ಯದಲ್ಲೂ ಪ್ರತಿಭೆ ಹೆಚ್ಚು ಹೆಚ್ಚು ಹೊರಹೊಮ್ಮಿದಲ್ಲಿ ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ, ಶ್ರಮದ ಪ್ರತಿಫಲವೇ ಸಾಧನೆಯಾಗಿದೆ ಎಂದು ಯವ ಮುಖಂಡ ಮಿಥುನ ಪಾಟೀಲ ಹೇಳಿದರು.

ಕರ್ನಾಟಕ ಅಟ್ಯಾ ಪಟ್ಯಾ ಅಸೋಸಿಯೇಷನ್ ಹಾಗೂ ಸ್ಥಳೀಯ ಚೈತನ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಚೈತನ್ಯ ಕ್ರೀಡಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ೩೨ನೇ ರಾಜ್ಯ ಮಟ್ಟದ ಅಟ್ಯಾಪಟ್ಯಾ ಚಾಂಪಿಯನ್ ಶಿಪ್ ೨೦೨೪ರ ಸಮಾರೋಪ ಸಮಾರಂಭ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು.

ಇತ್ತೀಚಿನ ದಿನಮಾನಗಳಲ್ಲಿ ಯುವ ಜನಾಂಗಕ್ಕೆ ಕ್ರೀಡೆಯಲ್ಲಿ ಅತಿಹೆಚ್ಚು ಸ್ಥಾನಮಾನ ದೊರೆಯುತ್ತಿದ್ದು, ಅದರಲ್ಲೂ ಗ್ರಾಮೀಣ ಕ್ರೀಡೆಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ, ಅದರಲ್ಲೂ ನರೇಗಲ್ಲಿನ ಚೈತನ್ಯ ಕ್ರೀಡಾ ಸಂಸ್ಥೆಯು ರಾಜ್ಯಮಟ್ಟದ ಅಟ್ಯಾ ಪಟ್ಯಾ ಕ್ರೀಡೆ ನಡೆಸಲು ತನ್ನ ಜವಾಬ್ದಾರಿಯುತ ಸೇವೆಯ ಮುಖಾಂತರ ಗ್ರಾಮೀಣ ಕ್ರೀಡಾಪಟುಗಳಿಗೆ ಹೊಸದೊಂದು ಕ್ರಾಂತಿ ಮಾಡಲು ಹೊರಟಿರುವುದು ಬಹಳ ಸಂತೋಷದ ವಿಷಯ ಆ ಕ್ರೀಡಾ ಸಂಸ್ಥೆಯ ಸೇವೆ ಯಾವತ್ತು ಮರೆಯಲಾರದು ಇದೇ ತರಹ ಎಲ್ಲರೂ ದೇಸಿಯ ಕ್ರೀಡೆಗಳಿಗೆ ಕ್ರೀಡೆಗಳಿಗೆ ಒತ್ತು ಕೊಡುವ ಕೆಲಸವನ್ನು ಮಾಡಬೇಕು ಇಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕ್ರೀಡಾ ಕೂಟದಲ್ಲಿ ಆಯೂಜಕರು ಸೂವ್ಯವಸ್ತಿತವಾಗಿ ವ್ಯವಸ್ತೆಯನ್ನು ಕಲ್ಪಿಸಿದ್ದು, ನಿಜಕ್ಕೂ ಸಂತಸದ ಸಂಗತಿ ಈ ವ್ಯವಸ್ತೆಯನ್ನು ನೋಡಿದಾಗ ಇದೊಂದ ರಾಷ್ಟಿçÃಯ ಕ್ರೀಡಾ ಕೂಟಕ್ಕೆ ಸಮನಾಗಿದೆ, ಇಂತಹ ಕ್ರೀಡಾ ಕೂಟದ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದು ಅವರು ಕರೆನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಅಟ್ಯಾಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್ ಸಿ ಲಮಾಣಿ ಮಾತನಾಡಿ ನರೇಗಲ್ಲಿನ ಚೈತನ್ಯ ಕ್ರೀಡಾ ಸಂಸ್ಥೆಯವರು ರಾಜ್ಯ ಮಟ್ಟದ ಅಟ್ಯಾ ಪಟ್ಯಾ ಕ್ರೀಡಾ ಕೂಟವನ್ನು ಅತ್ಯಂತ ಅಚ್ಚು ಕಟ್ಟಾಗಿ ಆಯೋಜಿಸಿದ್ದು ನಮಗೆ ನಿಜಕ್ಕೂ ಸಂತಸದ ಸಂಗತಿ, ವ್ಯವಸ್ತಿತವಾದ ಮೈದಾನ ನಿರ್ಮಿಸಿ ಕ್ರೀಡಾ ಪಟುಗಳ ಕ್ರೀಡೆಗೆ ಅನುವು ಮಾಡಿದ್ದಾರೆ, ಇಲ್ಲಿನ ಊಟ ಹಾಗೂ ವಸತಿಯ ವ್ಯವಸ್ತೆ ನಿಜಕ್ಕೂ ಖುಷಿತಂದಿದೆ, ಮೈದಾನದ ಸುತ್ತಲೂ ಬ್ಯಾರಿಕ್ಯಾಡ ನಿರ್ಮಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿದ್ದು, ಈ ಆಯೋಜಕರಿಗೆ ೨೦೨೫-೨೬ ನೇ ಸಾಲಿನಲ್ಲಿ ಜರುಗುವ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಸಬ್ ಜ್ಯೂನಿಯರ್ ಅಥವಾ ಜೂನಿಯರ್ ಅಥಿವಾ ಸೀನಿಯರ್ ಕ್ರೀಡೆಗಳಲ್ಲಿ ಒಂದನ್ನು ನರೇಗಲ್ಲಿನ ಚೈತನ್ಯ ಕ್ರೀಡಾ ಸಂಸ್ಥೆಯ ಅಡಿಯಲಿಯೇ ಜರುಗಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರವಿ ದಂಡೀನ, ಪ ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಪಿಎಸ್‌ಐ ಐಶ್ವರ್ಯ ನಾಗರಾಳ, ಮುತ್ತಪ್ಪ ಮೂಲ್ಕಿ, ಸಂತೋಷ ಹನುಮಸಾಗರ, ಸದ್ದಾಂ ನಶೇಖಾನ, ಶೆಖಪ್ಪ ಕೆಂಗಾರ್ರ, ಶೇಖಪ್ಪ ಜುಟ್ಲ ಹಾಗೂ ಗಣ್ಯಮಾನ್ಯರು ವಿಜೇತ ತಂಡಗಳಿಗೆ ಪಾರಿತೋಷಕ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ , ಜಿಲ್ಲಾ ಖಜಾನೆ ಇಲಾಖೆಯ ಸಹನಿರ್ದೆಶಕ ಎಸ್ ಎಚ್ ಬಾದನಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ ಕೊಟಗಿ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಪೋತರಾಜ ಮಣ್ಣೊಡ್ಡರ, ಅಲ್ಲಾಭಕ್ಷಿ ನದಾಫ, ಕಳಕನಗೌಡ ಪೊಲೀಸ್ಪಾಟೀಲ, ಡಾ ವಿ ಸಿ ಇಲ್ಲೂರ, ಶಿವಪುತ್ರಪ್ಪ ಕಡೆತೋಟದ, ಗದಗ ಜಿಲ್ಲಾ ಅಟ್ಯಾಪಟ್ಯಾ ಸಂಸ್ಥೆಯ ಕಾರ್ಯದರ್ಶಿ ಕೆ ಟಿ ನಡುಮನಿ, ಚೈತನ್ಯ ಕ್ರೀಡಾ ಸಂಸ್ಥೆಯ ಅಧ್ಯಕ್ಷ ನಿಂಗರಾಜ ಬೇವಿನಕಟ್ಟಿ, ಶೀಕ್ಷಕ ವಿ ಎ ಕುಂಬಾರ, ತಾಲೂಕಾ ದೈಹಿ ಶಿಕ್ಷಣಾಧಿಕಾರಿ ಆರ್ ಎಸ್ ನರೇಗಲ್ಲ, ಚೈತನ್ಯ ಕ್ರೀಡಾ ಸಂಸ್ಥೆಯ ಮುಖ್ಯ ತರಬೇತುದಾರ ಮಹಮ್ಮದರಫೀಕ್ ರೇವಡಿಗಾರ, ಸಂಸ್ಥೆಯ ಕಾರ್ಯದರ್ಶಿ ಸಂತೋಷ ಯಳಮಲಿ ಬಾಳಪ್ಪ ಕಳಕಣ್ಣವರ್ ಮಹಾಂತೇಶ್ ಹೊನ್ನವಾಡ್ ಸೇರಿದಂತೆ ಗಣ್ಯಮಾನ್ಯರು, ಐನೂರಕ್ಕೂ ಹೆಚ್ಚು ಕ್ರೀಡಾ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಕೊಪ್ಪಳ ಬೆಳ್ಳಿ ಹಬ್ಬದಲ್ಲಿ ಗಮನ ಸೆಳೆದ ಪ್ರವಾಸೋದ್ಯಮ ಇಲಾಖೆಯ ಪ್ರದರ್ಶನ ಮಳಿಗೆ

satyadarshana

ರಾಮಗಿರಿ ಗ್ರಾಮ ಪಂಚಾಯತ್‍ನಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ

satyadarshana

ಅಧಿಕ ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ಬೆಳೆಗೆ ಅಪಾರ ಪ್ರಮಾಣದ ಪರಿಹಾರ ವಿತರಣೆ

satyadarshana

Leave a Comment