ಗಜೇಂದ್ರಗಡ
ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪರಿಕಲ್ಪನೆಯನ್ನು ಅವಲೋಕಿಸಿದಾಗ ಅದು ತೀರ ಇತ್ತೀಚಿನದಾಗಿದೆ ಮಾನವರೆಲ್ಲರಿಗು ಸಮಾನವಾಗಿ ಅನ್ವಯವಾಗುವ ಹಕ್ಕುಗಳನ್ನೇ ಮಾನವ ಹಕ್ಕುಗಳು ಎಂದು ಸರಳವಾಗಿ ಅರ್ಥೈಸಬಹುದಾಗಿದೆ
17ನೇ ಶತಮಾನದ ವೇಳೆಗೆ ಮೊದಲ ಬಾರಿಗೆ ಮಾನವ ಹಕ್ಕುಗಳ ಕುರಿತು ಚಿಂತನೆ ಆರಂಭಗೊಂಡಿದ್ದಾದರೂ 1950ರ ದಶಕದಿಂದ ಈಚೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಂದೋಲನವಾಗಿ ರೂಪಗೊಳ್ಳಲು ಸಾಧ್ಯವಾಯಿತು. 1948 ಡಿಸೆಂಬರ್ 10ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾನವ ಹಕ್ಕುಗಳ ವಿಶ್ವಘೋಷಣೆ ಮಾಡಲಾಯಿತು ಎಂದು ವಿಶ್ವ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೋದ ರಾಜ್ಯಧ್ಯಕ್ಷರಾದ ಗಣೇಶ್ ಆರ್ ಗುಗಲೊತ್ತರ್ ಹೇಳಿದರು
ನಗರದ ವಿಶ್ವ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಬ್ಯೂರೋದ ಕಚೇರಿಯಲ್ಲಿ ವಿಶ್ವಮಾನವ ಹಕ್ಕುಗಳು ಮತ್ತು ಬೃಹಚಾರ ವಿರೋಧಿ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು
ಅಲ್ಲದೆ ಇಂದು ದೇಶದ ಬಹುತೇಕ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ ಭ್ರಷ್ಟಾಚಾರದ ದೆಸೆಯಿಂದ ಇಲಾಖೆಗಳು ಗಬ್ಬು ನಾರುತಿವೆ ಭ್ರಷ್ಟಾಚಾರದ ನಿಯಂತ್ರಣಕ್ಕಾಗಿಯೆ ನಮ್ಮ ಬ್ಯೂರೋ ಟೋಂಕ ಕಟ್ಟಿ ನಿಂತಿದೆ ದೇಶವನ್ನು ಭ್ರಷ್ಟಾಚಾರ ಮುಕ್ತ ಮಾಡುವತ ನಾವೆಲ್ಲ ಶ್ರಮಿಸೋಣ ಭ್ರಷ್ಟಾಚಾರ ನಿಯಂತ್ರಣಕ್ಕೆ ಮನ ಪರಿವರ್ತನೆ ಯೊಂದೇ ಬ್ರಹ್ಮಾಸ್ತ್ರವಾಗಿದೆ ಎಲ್ಲ ಇಲಾಖೆಯ ಅಧಿಕಾರಿಗಳ ಮನಪರಿವರ್ತಿಸಿಕೊಳ್ಳಬೇಕಿದೆ ಎಂದರೆ ಅಲ್ಲದೆ ತಾವು ಅಧಿಕಾರ ವಹಿಸಿಕೊಂಡು ನೆರವಹಿಸಿದ ಕಾರ್ಯ ವೈಖರಿಯನ್ನು ಸಿಂಹವುಲೋಕನದೊಂದಿಗೆ ತಿಳಿಸಿದರು
ವಿಶ್ವಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಬ್ಯೂರೋದ ರಾಜ್ಯ ಪ್ರತಿನಿಧಿ ಡಾ. ಬಿಕೆ ಮಾದಿ ಮಾತನಾಡುತ್ತಾ ಮಾನವ ಹಕ್ಕುಗಳು ನಿಸರ್ಗದತ್ತ ವಾದವುಗಳಾಗಿದ್ದು ಸರ್ವರಿಗೂ ಸಮಾನವಾಗಿ ಸಾರ್ವತ್ರಿಕವಾಗಿ ಅನ್ವಯಗೊಂಡವುಗಳಾಗಿವೆ. ಅವುಗಳನ್ನು ಯಾವ ಕಾರಣಕ್ಕೂ ಮಾರ್ಪಡಿಸುವುದಾಗಲಿ ಸಾಧ್ಯವಿಲ್ಲ ತಾಯಿಯ ಗರ್ಭದಲ್ಲಿರುವಾಗಲೇ ವ್ಯಕ್ತಿಯ ಪಡೆದ ಹಕ್ಕುಗಳಾಗಿವೆ. ಆದ್ದರಿಂದಲೇ ಇವುಗಳನ್ನು ದೈವದತ್ತ ಅಥವಾ ನಿಸರ್ಗದತವಾದವುಗಳೆಂದು ಕರೆಯುತ್ತೇವೆ ಎಂದು ವಿಶೇಷ ಉಪನ್ಯಾಸದಲ್ಲಿ ಹೇಳಿದರು
ಮುಖ್ಯ ಅತಿಥಿಗಳಾದ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಡಾಕ್ಟರ್ ಶಿವಾನಂದ ಗಟ್ಟಿ ಬಾಗಲಕೋಟೆ ಜಿಲ್ಲಾಧ್ಯಕ್ಷರು ಸೇರಿದಂತೆ ಕುಷ್ಟಗಿ ಯಲಬುರ್ಗಾ ಹುನಗುಂದ ತಾಲೂಕು ಅಧ್ಯಕ್ಷರು ವೇದಿಕೆ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳು ತಾಲೂಕು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು
