Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಕೊಪ್ಪಳ :ಅಕ್ಟೋಬರ್ 25  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ 101 ಆರೋಪಿಗಳು ಅಸ್ಪೃಶ್ಯತೆ ಮಾಡಿ ಮತ್ತು ದಲಿತರ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿದ ಪ್ರಕರಣಗಳಿಗೆ ಸಂಬಂದಿಸಿಂತೆ ಅಪರಾಧ ಸಾಬೀತಾಗಿದೆ ಎಂದು ಕೊಪ್ಪಳ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಗುರುವಾರದಂದು 101 ಅಪರಾಧಿಗಳಲ್ಲಿ 98 ಅಪರಾಧಿಗಳಿಗೆ ಎಸ್ಸಿ, ಎಸ್ಟಿ ಪ್ರಕರಣ ಅನ್ವಯವಾಗುವ ಕಾರಣ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ದಂಡ ಮತ್ತು 03 ಅಪರಾಧಿಗಳು ಎಸ್ಸಿ, ಎಸ್ಟಿ ಜನಾಂಗದವರು ಇರುವ ಕಾರಣದಿಂದ 05 ವರ್ಷ ಜೈಲು ಶಿಕ್ಷೆ ಮತ್ತು ರೂ. 2000 ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯ ಮರಕುಂಬಿ ಗ್ರಾಮದಲ್ಲಿ ದಿ: 28-08-2014 ರಂದು ಬೆಳಿಗ್ಗೆ ಗಂಗಾವತಿ ಶಿವೆ ಚಿತ್ರಮಂದಿರದಲ್ಲಿ ಪವರ್ ಸಿನಿಮಾ ನೋಡಲು ಮರಕುಂಬಿ ಗ್ರಾಮದ ಸವರ್ಣಿಯವರ ಪೈಕಿ ಆರೋಪಿ ನಂ-01 ಮಂಜುನಾಥ ಹಾಗೂ ಇತರರು ಕೂಡಿಕೊಂಡು ಹೋಗಿ ಚಿತ್ರಮಂದಿರದಲ್ಲಿ ಟಿಕೆಟ್ ಪಡೆಯುತ್ತಿರುವಾಗ ಯಾರೋ ವ್ಯಕ್ತಿಗಳ ಸಂಗಡ ಜಗಳ ಮಾಡಿಕೊಂಡಿದ್ದರ ಹಿನ್ನಲೆಯಲ್ಲಿ ಚಿತ್ರ ಮಂದಿರದಲ್ಲಿ ಪಿರ್ಯಾದಿದಾರದ ಭೀಮೇಶ ತಂದೆ ಹನಮಂತಪ್ಪ ದೊಡ್ಡಮನಿ ರವರೇ ಹೇಳಿ ಬಡಿಸಿದ್ದಾರೆ ಅಂತಾ ತಪ್ಪು ತಿಳಿದುಕೊಂಡು ಅಪರಾಧಿ ನಂ.1 ಮಂಜುನಾಥ ಈತನು ಊರಲ್ಲಿ ಬಂದು ಸುವರ್ಣಿಯವರಿಗೆ ತಿಳಿಸಿದ್ದರಿಂದ 116 ಅಪರಾಧಿಗಳು ಅಕ್ರಮ ಕೂಟ ರಚಿಸಿಕೊಂಡು ಬಂದು ಕೈಗಳಲ್ಲಿ ಇಟ್ಟಂಗಿ, ಕಲ್ಲು, ಬಡಿಗೆಗಳನ್ನು ಹಿಡಿದುಕೊಂಡು ಮರಕುಂಬಿ ಗ್ರಾಮದ ಹರಿಜನ ಕೇರಿಯಲ್ಲಿರುವ ದಲಿತರಿಗೆ ಹೊಡೆ ಬಡೆ ಮಾಡಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದು ಇರುತ್ತದೆ. ದಿನಾಂಕ: 23-07-2015 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 244/2015, ಕಲಂ: 143, 147, 148, 323, 354, 504, 436, 427, ಸವಾ 149 ಭಾ.ದಂ.ಸಂ. & ಕಲಂ: 3[1][10][11], 3[2][iv] ಕಾಯ್ದೆ ಅಡಿಯಲ್ಲಿ ಅಂದಿನ ಡಿವೈಎಸ್ಪಿ ವಿನ್ಸೆಂಟ್ ಶಾಂತಕುಮಾರ ಇವರು ತನಿಖೆ ಮಾಡಿ ತನಿಖೆಯಲ್ಲಿ ಆರೋಪಗಳು ಸಾಭಿತಾಗಿದ್ದರಿಂದ ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಗಂಗಾವತಿ ಗ್ರಾಮೀಣ ಪೋಲಿಸ್ ಠಾಣೆಯ ಗುನ್ನೆ ನಂ: 244/2014ರ ಪ್ರಕರಣದಲ್ಲಿ 101 ಅಪರಾಧಿಗಳ ಮೇಲಿರುವ ಆರೋಪವು ಸಾಬೀತಾಗಿದೆ ಎಂದು 2024ರ ಅಕ್ಟೋಬರ್ 24ರಂದು ಕೊಪ್ಪಳದ ಗೌರವಾನ್ವಿತ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು 101 ಅಪರಾಧಿಗಳಲ್ಲಿ 98 ಅಪರಾಧಿಗಳಿಗೆ ಎಸ್ಸಿ, ಎಸ್.ಟಿ ಪ್ರಕರಣ ಅನ್ವಯವಾಗುವ ಕಾರಣ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ದಂಡ ಮತ್ತು ಇನ್ನುಳಿದ 03 ಅಪರಾಧಿಗಳಿಗೆ ಎಸ್ಸಿ,ಎಸ್ಟಿ ಜನಾಂಗದವಿರುವ ಕಾರಣ 05 ವರ್ಷ ಜೈಲು ಶಿಕ್ಷೆ ಮತ್ತು ರೂ. 2000 ದಂಡವನ್ನು ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಂ.ಎ.ಪಾಟೀಲ್, ನಾಗರಾಜ ಆಚಾರ್, ಸವಿತಾ ಸಿಂಗ್ಲಿ, ಅಂಬಣ್ಣ ಟಿ ಹಾಗೂ ಬಂಡಿ ಅಪರ್ಣಾ ಎಂ ಅವರು ಪ್ರಕರಣ ನಡೆಸಿರುತ್ತಾರೆ ಎಂದು ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

 

Related posts

ಮಹಾಯೋಗಿ ವೇಮನರ ತತ್ವ ಸಿದ್ದಾಂತಗಳನ್ನು ಎಲ್ಲರು ಅಳವಡಿಸಿಕೊಂಡು ಜಾಗೃತ ಸಮಾಜ ನಿರ್ಮಿಸೋಣ :ಎಚ್ ಕೆ ಪಾಟೀಲ

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.26.04.2023

satyadarshana

ಬಸವರಾಜ್ ರಾಯರೆಡ್ಡಿಗೆ. ಮತದಾರರಿಂದ ಕುರಿ ಕಾಣಿಕೆ

satyadarshana

Leave a Comment