ಗಜೇಂದ್ರಗಡ :ಮಹಾತ್ಮಾ ಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ‘’ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನವನ್ನು ಯಶಸ್ವಿಗೊಳಿಸಿ ಗ್ರಾಮ ಸಭೆ ನಡೆಸಲು ನೋಡಲ್ ಅಧಿಕಾರಿಗಳ ನೇಮಕ, ದಿನಾಂಕವನ್ನು ಪ್ರಕಟಿಸಲಾಗಿದೆ. ಈ ಗ್ರಾಮಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬೇಡಿಕೆಗಳನ್ನು ಸಲ್ಲಿಸಬೇಕು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಬಸವರಾಜ ಬಡಿಗೇರ್ ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಮಾತನಾಡಿದ ಅವರು, ಗಜೇಂದ್ರಗಡ ತಾಲೂಕು ಪಂಚಾಯತಿ ವ್ಯಾಪ್ತಿಯ 13 ಗ್ರಾಮ ಪಂಚಾಯತಿಗಳ ರೈತರು ಹಾಗೂ ಕೂಲಿಕಾರರು ಗ್ರಾಮ ಪಂಚಾಯತಿ ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಲ್ಲಿ ಕಾಮಗಾರಿಗಳ ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ ಎಂದರು.
ಸಪ್ಟಂಬರ್ ತಿಂಗಳ ವೈಯಕ್ತಿಕ ಕಾಮಗಾರಿಗಳ ವಿತರಾಣಾ ಅಭಿಯಾನದ ಜೊತೆಗೆ ಅನುಷ್ಠಾನ ಇಲಾಖೆಗಳಿಂದ ರೈತರಿಂದ ಬೇಡಿಕೆಗಳನ್ನು ಸಂಗ್ರಹಿಸಲಾಗಿದೆ. ಅ.2 ರಿಂದ ವಿಶೇಷ ಗ್ರಾಮ ಸಭೆ ನಡೆಸಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಬೇಡಿಕೆ ಪಟ್ಟಿಗೆ, ಮನೆ ಮನೆ ಭೇಟಿ, ವೈಯಕ್ತಿಕ ಕಾಮಗಾರಿಗಳ ಮಾಹಿತಿಯೂಳ್ಳ ಕರಪತ್ರ ಹಂಚಿಕೆ ಮಾಡಿ ಬೇಡಿಕೆ ಸಂಗ್ರಹಿಸಲಾಗುತ್ತಿದೆ. ಈ ಎಲ್ಲಾ ಬೇಡಿಕೆಗಳ ಅರ್ಜಿಗಳನ್ನು ಒಳಗೊಂಡು ವಾರ್ಡ್ ಸಭೆ ನಂತರ ಗ್ರಾಮ ಸಭೆ ನಡೆಸಲು ದಿನಾಂಕ ಪ್ರಕಟಿಸಿ ಆದೇಶಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲಿ ನಡೆಯುವ ಗ್ರಾಮ ಸಭೆಗೆ ಸ್ವಸಹಾಯ ಸಂಘಗಳ ಸದಸ್ಯರು, ರೈತರು, ಸಾರ್ವಜನಿಕರು, ಕೂಲಿಕಾರ್ಮಿಕರು ಎಲ್ಲರನ್ನು ಆಹ್ವಾನಿಸಿ ಸಭೆ ನಡೆಸಲು ಸೂಚಿಸಿದರು.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬೇಡಿಕೆ ಸಲ್ಲಿಸಿ:
ರೈತರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವ ಬದಲು ತಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮಗೆ ಬೇಕಿರುವ ಕಾಮಗಾರಿಗೆ ಆನ್ಲೈನ್ ನಲ್ಲೆ ಅರ್ಜಿ ಸಲ್ಲಿಸಸಬಹುದು. ಇದು ನವೆಂಬರ್ 5 ಕೊನೆಯ ದಿನ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನ ಆರಂಭವಾಗಿದ್ದು, ತಾಲೂಕಿನ 13 ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು, ಕೂಲಿಕಾರರು ತಮ್ಮ ಜಮೀನುಗಳಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಗ್ರಾ.ಪಂಗೆ ಅರ್ಜಿ ಸಲ್ಲಿಸಬಹುದು.
ರೈತರಿಂದ ರೈತರಿಗಾಗಿ ಕ್ರಿಯಾಯೋಜನೆ:
ಗಜೇಂದ್ರಗಡ ತಾಲೂಕು ಕೃಷಿ ಪ್ರಧಾನವಾಗಿ ಹೆಚ್ಚು ನೀರಾವರಿ ಹೊಂದಿದೆ. ಹಿನ್ನಲೆಯಲ್ಲಿ ನರೇಗಾ ಯೋಜನೆಯ ಮಾರ್ಗಸೂಚಿಯಂತೆ ತೋಟಗಾರಿಕೆ, ಕೃಷಿ ರೇಷ್ಮೆ, ಅರಣ್ಯ ಇಲಾಖೆ ಸಿಗುವ ಸೌಲಭ್ಯಗಳನ್ನು ಪಡೆಯಲು ರೈತರು ಕೂಡಲೇ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ರೈತರಿಂದ ಸಂಗ್ರಹವಾದ ಸ್ವೀಕೃತವಾದ ಬೇಡಿಕೆ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಆಧ್ಯತವಾರು ವಿಂಗಡಿಸಿ ಕಾಮಗಾರಿಗಳ ಗುಚ್ಛ ತಯಾರಿಸುವುದು.
ಗ್ರಾಮ ಸಭೆಗೆ ನೋಡಲ್ ಅಧಿಕಾರಿಗಳ ನೇಮಕ:
2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಗ್ರಾಮ ಸಭೆ ಆಯೋಜಿಸಿ ಆಯಾ ಗ್ರಾಮ ಪಂಚಾಯತಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶಿಸಿದೆ. ನೇಮಿಸಿದ ಅಧಿಕಾರಿಗಳು ವೇಳಾಪಟ್ಟಿಯಲ್ಲಿ ಸೂಚಿಸಿದ ದಿನಾಂಕದಂತೆ ಆಯಾ ಗ್ರಾಮ ಪಂಚಾಯತಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ ಬರುವ ವರ್ಷದ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸೂಚಿಸಸಲಾಗಿದೆ ಎಂದರು.
ಗ್ರಾಮಸಭೆ ದಿನಾಂಕ, ನೋಡಲ್ ಅಧಿಕಾರಿಗಳ ವಿವರ:
ಕ್ರ.ಸಂ ಗ್ರಾ.ಪಂ. ದಿನಾಂಕ ನೋಡಲ್ ಅಧಿಕಾರಿಗಳ
1 ಗೋಗೇರಿ, 29-10-2024 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ರೋಣ
2 ಗುಳಗುಳಿ 07-11-2024 ತಾಲೂಕಾ ಯೋಜನಾಧಿಕಾರಿಗಳು, ತಾಲೂಕ ಪಂಚಾಯತ, ಗಜೇಂದ್ರಗಡ.
3 ಹಾಳಕೇರಿ 05-11-2024 ಸಹಾಯಕ ನಿರ್ದೇಶಕರು (ಗ್ರಾ.ಉ) ತಾಲೂಕ ಪಂಚಾಯತ, ಗಜೇಂದ್ರಗಡ.
4 ಇಟಗಿ 06-11-2024 ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ ವಲಯ, ರೋಣ.
5 ಕುಂಟೋಜಿ 28-11-2024 ಸಹಾಯಕ ನಿರ್ದೇಶಕರು (ಗ್ರಾ.ಉ), ತಾಲೂಕ ಪಂಚಾಯತ, ಗಜೇಂದ್ರಗಡ.
6 ಲಕ್ಕಲಕಟ್ಟಿ 06-11-2024 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ರೋಣ
7 ಮಾರನಬಸರಿ 06-11-2024 ತಾಲೂಕಾ ಯೋಜನಾಧಿಕಾರಿಗಳು, ತಾಲೂಕ ಪಂಚಾಯತ, ಗಜೇಂದ್ರಗಡ.
8 ಮುಶಿಗೇರಿ 29-10-2024 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಲಾಖೆ, ರೋಣ
9 ನಿಡಗುಂದಿ 29-10-2024 ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ರೋಣ.
10 ರಾಜೂರು 30-10-2024 ಸಹಾಯಕ ನಿರ್ದೇಶಕರು (ಗ್ರಾ.ಉ) ತಾಲೂಕ ಪಂಚಾಯತ, ಗಜೇಂದ್ರಗಡ.
11 ರಾಂಪೂರು 28-10-2024 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಂ.ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ರೋಣ.
12 ಶಾಂತಗೇರಿ 23-10-2024 ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರೋಣ.
13 ಸೂಡಿ 30-10-2024 ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ರೋಣ.
ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ತಾಲೂಕಿನ 13 ಗ್ರಾಮ ಪಂಚಾಯತಿಗಳಲ್ಲಿ ವಾರ್ಡ್ ಸಭೆ, ಗ್ರಾಮ ಸಭೆ ನಡೆಸಲು ದಿನಾಂಕ ಮತ್ತು ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ಗ್ರಾಮ ಸಭೆಗೆ ರೈತರು, ಎನ್.ಆರ್.ಎಲ್.ಎಂ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು, ಕೂಲಿಕಾರರು, ಸಾರ್ವಜನಿಕರು ಭಾಗವಹಿಸಿ ನಿಮ್ಮ ಬೇಡಿಕೆಗಳನ್ನು ಸಲ್ಲಿಸಬಹುದು.
– ಬಸವರಾಜ ಬಡಿಗೇರ, ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ಗಜೇಂದ್ರಗಡ
