Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಕೆರೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಚ್. ಕೆ. ಪಾಟೀಲ ಅವರಿಂದ ಭೂಮಿ ಪೂಜೆ

 

ಗದಗ. ಅ.13: ಗದಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಶುಕ್ರವಾರ ವಿದ್ಯುಕ್ತ ಚಾಲನೆ ನೀಡಿದರು.

75 ಲಕ್ಷ ಅನುದಾನದಲ್ಲಿ ನಾಗಾವಿ ಗ್ರಾಮದ ಹಿರೇಕೇರಿ ಹಾಗೂ ಭೂಕೈಯ್ಯನ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಕಾಮಗಾರಿಯು ನಿಗದಿತ ಅವಧಿ ಒಳಗೆ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ನಂತರ ಸಚಿವರು ಮುಳಗುಂದದಲ್ಲಿನ ಅಬ್ಬಿಗೆರೆ ಕೆರೆ ಕಾಮಗಾರಿಗೆ 200 ಲಕ್ಷಗಳ ಅನುದಾನ ಒದಗಿಸಲಾಗಿದೆ, ಉತ್ತಮ ಕಾಮಗಾರಿ ಕೈಗೊಳ್ಳಲು ತಿಳಿಸಿದರು. ಕೆರೆ ಕಾಮಗಾರಿಯಿಂದ ನಗರದಲ್ಲಿನ ಕೆರೆ ಸುತ್ತಲಿನ ಪ್ರದೇಶ ಸುಂದರಮಯವಾಗಿ ಕಂಗೊಳಿಸುವಂತಾಗಬೇಕು ಒಂದು ತರದಲ್ಲಿ ಪ್ರವಾಸಿ ತಾಣದಂತೆ ಕಾಣಬೇಕೆಂದು ಹೇಳಿದರು.

ಕುರ್ತಕೋಟೆಯಲ್ಲಿ 65 ಲಕ್ಷ ಅನುದಾನದಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಚಿವರು, ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು ನಿಗದಿಪಡಿಸಿದ ಅವಧಿ ಒಳಗೆ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ತಿಳಿಸಿದರು.

ಅಂತೂರ-ಬೆಂತೂರು ಗ್ರಾಮದಲ್ಲಿರುವ ಕೆರೆಯು ಸುಂದರ ತಾಣದಲ್ಲಿದೆ ಇದನ್ನು ಇನ್ನಷ್ಟು ಸುಂದರ ಗೊಳಿಸಲು 100 ಲಕ್ಷ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ. ಕಾಮಗಾರಿಯು ಮುಂಬರುವ ಸಂಕ್ರಮಣ ದೊಳಗಾಗಿ ಪೂರ್ಣಗೊಳಿಸುವಂತೆ ಹಾಜರಿದ್ದ ಅಧಿಕಾರಿಗಳಿಗೆ ಸಚಿವ ಎಚ್. ಕೆ. ಪಾಟೀಲ ಅವರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗದಗ-ಬೆಟಗೇರೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಸೇರಿದಂತೆ ನಾಗಾವಿ, ಮುಳುಗುಂದ, ಕುರ್ತಕೋಟಿ, ಅಂತೂರ್ ಬೆಂತೂರ್ ಗ್ರಾಮದ ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಹಾಜರಿದ್ದರು

 

Related posts

ನರೇಗಾ ಕೂಲಿ ಏಪ್ರಿಲ್ 1 ರಿಂದ 370 ರೂಪಾಯಿಗೆ ಹೆಚ್ಚಳ* *ಏಪ್ರಿಲ್ ನಲ್ಲಿ ಜಿಲ್ಲೆಯಾದ್ಯಂತ ನರೇಗಾ ಕೆಲಸ ಪ್ರಾರಂಭ : ಭರತ್ ಎಸ್

satyadarshana

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾನೂನಿನ ಅರಿವು ಹಾಗೂ ಮನಸ್ಥಿತಿ ಬದಲಾವಣೆ ಅಗತ್ಯ :ಜಿಲ್ಲಾ ನ್ಯಾ. ಬಸವರಾಜ

satyadarshana

ಹಿಂದೂ ದೇವಸ್ಥಾನ ತೆರವುಗೊಳಿಸುವದನ್ನು ವಿರೋಧಿಸಿ ಭಜರಂಗ ದಳ ಪ್ರತಿಭಟನೆ.

satyadarshana

Leave a Comment