Satya Darshana
ಬಿಸಿ ಬಿಸಿ ಸುದ್ದಿ
Other

ಸೂಡಿ ಗ್ರಾಮದಲ್ಲಿ ಡೆಂಗೆ ದಾಂಗುಡಿ ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯಿತಿ  

 

.     ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ              ನೀಡಿದರು. ಗ್ರಾಮದ ಅಭಿವೃದ್ಧಿಗೆ ಬಳಕೆ ಆಗುತ್ತಿಲ್ಲ                             ಎನ್ನುವುದು ಗ್ರಾಮಸ್ಥರ ಆತಂಕ?

ಗಜೇಂದ್ರಗಡ : ತಾಲೂಕಿನ ಸೂಡಿ ಗ್ರಾಮಗಳಲ್ಲಿ ಪ್ರತಿಯೊಂದು ವಾರ್ಡ್‌​ಗ​ಳಲ್ಲಿ ಚರಂಡಿ​ಗಳಲ್ಲಿನ ಗಲೀಜಿನಿಂದಾಗಿ ಸೊಳ್ಳೆ​ಗಳು ವಿಪ​ರೀ​ತ​ವಾ​ಗಿದ್ದು, ಇವು​ಗಳ ನಿಯಂತ್ರ​ಣಕ್ಕೆ ಗ್ರಾಮ ಪಂಚಾಯಿತಿ ಅಧಿ​ಕಾ​ರಿ​ಗಳು.

ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರು ಸಂಪೂರ್ಣ ನಿರ್ಲಕ್ಷ ಮಾಡಿದ್ದಾರೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್ ಮಷೀನ್ ಇಲ್ಲ. ಆರೋಗ್ಯ ಇಲಾಖೆ ಸಿಬ್ಬಂದಿಗಳ ಒತ್ತಾಯದ ಮೇರೆಗೆ. ಬೇರೆ ಗ್ರಾಮ ಪಂಚಾಯತಿಯ ಫಾಗಿಂಗ್. ಮಷೀನ್ ತಂದು ಒಂದು ಬಾರಿ ಮಾತ್ರ ಫಾಗಿಂಗ್ ಮಾಡಿದ್ದಾರೆ ಆರೋಗ್ಯ ಇಲಾಖೆ ಹೇಳುವ ಪ್ರಕಾರ ಎಲ್ಲಿ ಡೆಂಗ್ಯೂ ದೃಢ ಆಗಿರುತ್ತದೆ ಆ ಗ್ರಾಮದಲ್ಲಿ .6 ಬಾರಿ ಫಾಗಿಂಗ್ ಮಾಡಬೇಕು.1 ಸಲ ಫಾಗಿಂಗ್ ಮಾಡಿ ಗ್ರಾಮ ಪಂಚಾಯಿತಿ ಕಣ್ಮುಚ್ಚಿ ಕುಳಿತುಕೊಂಡಿದೆ.ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ. ಸ್ವಚ್ಛತೆ ಮಾಡುವ ಉದ್ದೇಶಕ್ಕೆ. ಸಾಕಷ್ಟು ಅನುದಾನ ನೀಡಿದರು.

ಗ್ರಾಮದ ಅಭಿವೃದ್ಧಿಗೆ ಬಳಕೆ ಆಗುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆತಂಕ ಗ್ರಾಮದ ಪ್ರಜ್ಞಾವಂತ ಯುವಕರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಗ್ರಾಮ ಪಂಚಾಯಿತಿಗೆ ಎಷ್ಟು ಅನುದಾನ ಬಿಡುಗಡೆ ಆಗಿದೆ. ಖರ್ಚು ವಿವರಗಳನ್ನು ಪಡೆಯುವ ಉದ್ದೇಶಕ್ಕಾಗಿ ಮಾಹಿತಿ ಹಕ್ಕು ಅಧಿನಿಯಮದಡಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ. ಕಳೆದ ಎರಡು ತಿಂಗಳು ಹಿಂದೆ. ಮಾಹಿತಿ ಕೇಳಿದರು. ಜಿಲ್ಲಾ ಪಂಚಾಯಿತಿ ಮಾಹಿತಿ ಕೊಡುವಂತೆ ಹೇಳಿದರು ಗ್ರಾಮ ಪಂಚಾಯತಿ ಇಲ್ಲಿವರೆಗೂ ಮಾಹಿತಿ ಕೊಡುವಲ್ಲಿ ಸಂಪೂರ್ಣ ವಿಫಲ ಆಗಿದೆ.

ಗಜೇಂದ್ರಗಡ ಪಟ್ಟಣದ. ಸಾರ್ವಜನಿಕ ಆಸ್ಪತ್ರೆಯಲ್ಲಿ. ಸೂಡಿ ಗ್ರಾಮದ ಸುಮಾರು ಜನಗಳಿಗೆ. ಡೆಂಗ್ಯೂ ಪ್ರಕರಣ ದಾಖಲಾದರೂ. ಆರೋಗ್ಯ ಇಲಾಖೆ ಕಾಳಜಿ ವಹಿಸಿದ್ದರು. ಗ್ರಾಮ ಪಂಚಾಯಿತಿ ಕಾಳಜಿ ತೋರುತ್ತಿಲ್ಲ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು.2021 ರಿಂದ 2024.25 ನೇ ಸಾಲಿನ ಸೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಎಲ್ಲಾ ಯೋಜನೆಯ ಖರ್ಚು ವೆಚ್ಚ. ಹಾಗೂ ಗ್ರಾಮ ಪಂಚಾಯಿತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ. ಇನ್ನಿತರ ಯೋಜನೆಯಲಿ ನಡೆದ ಕಾಮಗಾರಿಯನ್ನು ಬೇರೆ ಜಿಲ್ಲೆಗಳಿಂದ ಅಧಿಕಾರಿಗಳ ತಂಡ ರಚನೆ ಮಾಡಿ. ತನಿಖೆ ಮಾಡಿಸುವುದಕ್ಕೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆರೋಪ

Related posts

ಅಂಬೇಡ್ಕರ್ ಬಗ್ಗೆ ಸಂಸತ್ತಿನಲ್ಲಿ ಅವಹೇಳನಕಾರಿ ಹೇಳಿಕೆನಿಡಿದ, ಸಂವಿಧಾನಕ್ಕೆ ಅಪಚಾರ ಮಾಡಿದ ಗೃಹ ಸಚಿವ ಅಮಿತ್ ಶಾ ರಾಜಿನಾಮೆಗೆ ಚಂದ್ರು ರಾಠೋಡ ಆಗ್ರಹ.

satyadarshana

ಚರ್ಚೆ: ಅಖಂಡ ಕರ್ನಾಟಕದ ಅನಿವಾರ್ಯ, ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗು

cradmin

ನಾಡಿನ ಜನತೆಗೆ ಪೈಗಂಬರ್ ಜಯಂತಿ ಹಾಗೂ ವಾಲ್ಮೀಕಿ ಜಯಂತಿಯ ಶುಭಕೋರುವವರು ಜೆಡಿಎಸ್ ತಾಲೂಕು ಅಧ್ಯಕ್ಷರು ಮುಧೋಳ ( ಸಾಗರ್ )

satyadarshana

Leave a Comment