ನರೇಗಲ್ಲ : ಪ್ರಸ್ತುತ ಸಮಾಜದಲ್ಲಿ ಮನುಷ್ಯನ ಹತ್ತಿರ ಕೇವಲ ದುಡ್ಡು ಇದ್ದರೆ ಬೆಲೆ ಇದೆ ಎಂಬುವುದು ಕೆವಲ ಕಾಲ್ಪನಿಕವಾಗಿದೆ. ನಿಜವಾಗಿಯೂ ಪ್ರತಿಯೊಂದು ಸಮುದಾಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುಲು ಹಿರಿಯರು ಪ್ರಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಚಿತ್ರದುರ್ಗದ ಚಲವಾದಿ ಮಹಾಸಭಾ ಗುರುಪೀಠದ ಪೀಠಾಧಿಪತಿ ಬಸವನಾಗೀದೇವ ಸ್ವಾಮೀಜಿ ಹೇಳಿದರು.
ಪಟ್ಟಣದ ವಾರ್ಡ ನಂ. ೬ರ ಡಾ. ಬಿ.ಆರ್. ಅಂಬೇಡ್ಕರ ನಗರದ (ಚಲವಾದಿ) ಓಣಿಯಲ್ಲಿ ಮಂಗಳವಾರ ಜರುಗಿದ ಶ್ರೀ ಶಾಂತದುರ್ಗಾ ದೇವಿಯ ನೂತನ ದೇವಸ್ಥಾನ ಉದ್ಘಾಟನೆ
ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಆಶೀರ್ವಚನ ನೀಡಿದರು. 
ವಿದ್ಯೆ ಇಲ್ಲದಿದ್ದರೆ ಬೆಲೆ ಇಲ್ಲ ಎನ್ನುವಂತಹ ಪ್ರಸಂಗಗಳು ಇಂದು ಒದಗಿಬರುತ್ತೇವೆ. ಏಕೆಂದರೆ ಸಮುದಾಯದ ಯುವಕರು ಕೆವಲ ಹಣ ಗಳಿಕೆಯ ನೆಪದಲ್ಲಿ ದುಶ್ಚಟಗಳ ದಾಸರಾಗುತ್ತಿದ್ದಾರೆ. ಹಾದಿ ತಪ್ಪುತ್ತಿರುವ ಮಕ್ಕಳಿಗೆ ನೈತಿಕೆ ಶಿಕ್ಷಣವನ್ನು ಕಡ್ಡಯವಾಗಿ ಕಲಿಸಲು ಮುಂದಾಗಬೇಕು.ಅಂದಾಗ ದೇಶ ಮತ್ತು ಸಮುದಾಯಗಳು ಪ್ರಗತಿ ಎತ್ತ ಸಾಗಲು ಅನುಕೂಲವಾಗುತ್ತದೆ. ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಹೇಳಿದಂತೆ ಒಂದು ದೇವಸ್ಥಾನದ ಮುಂದೆ ಕೈಕಟ್ಟಿಕೊಂಡು ನಿಲ್ಲುವ ಬದಲಿಗೆ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ತೆರೆದು ನಿರಂತರವಾಗಿ ಅಧ್ಯಯನ ಮಾಡುವುದರಿಂದ ಮನುಷ್ಯನಲ್ಲಿ ಜ್ಞಾನದ ಶಕ್ತಿಯ ಜೊತೆಗೆ ಸಮಾಜದಲ್ಲಿ ಆ ವ್ಯಕ್ತಿಯ ಮೌಲ್ಯ ಕೂಡ ಹೆಚ್ಚಾಗುತ್ತದೆ ಎಂದರು.
ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಮತ್ತು ಪಟ್ಟಣ, ನಗರ ಪ್ರದೇಶಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದರ ಜತೆಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಭಕ್ತಿ ಎಂಬುವುದು ಮನುಷ್ಯನಲ್ಲಿ ಇದ್ದರೆ ಸಾಕು. ನಿತ್ಯ ಒಳ್ಳೇ ಮನಸ್ಸಿನಿಂದ ಪೂಜಿಸಿದರೆ, ದೇವರು ಒಲಿಯುತ್ತಾನೆ. ನಾವು ಒಳ್ಳೆಯತನ ರೂಢಿಸಿಕೊಂಡರೆ, ಇತರರಿಗೂ ಉತ್ತಮ. ನಮ್ಮಿಂದ ಒಳ್ಳೆತನ ರವಾನೆಯಾದರೆ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. 
ಪಟ್ಡಣದ ಚಲವಾದಿ ಓಣಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಇಲ್ಲಿ ಯಾವುದೇ ದೊಡ್ಡಕಾರ್ಯಕ್ರಮ ನಡೆದಿಲ್ಲ.ಇಂತಹ ಸ್ಥಿತಿಯಲ್ಲಿ ಈ ಚಲವಾದಿ ಸಮುದಾಯ ಎಲ್ಲರನ್ನೂ
ಒಗ್ಗೂಡಿಸಿಕೊಂಡು ಈ ಒಂದು ದೊಡ್ಡ ಮಟ್ಟದ ಸಮಾರಂಭವನ್ನು ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ದೇವಸ್ಥಾನಗಳು ಮನುಷ್ಯನ ಸಮೀಪದಲ್ಲಿರುವ ಆಸ್ತಿಗಳು ಆಗಿವೆ. ಮೂಢನಂಬಿಕೆಯಿಂದ ಹೊರಗೆ ಜ್ಞಾನ ಮತ್ತು ಆಧ್ಯಾತ್ಮಿಕದಿಂದ ಜೀವನ ಸಾಗಿಸಲು ಮುಂದಾಗಬೇಕು. ಚಲವಾದಿಯ ಅರ್ಥ ಚಲ ಎಂದರೆ ಹಠದಿಂದ ಸಾಧಿಸುವ, ವಾದಿ ಎಂದರೆ ಆಗದ ಕಾರ್ಯವನ್ನು ಯಾವುದೇ ಹಂತದಲ್ಲಿಯಾದರು ಸಂಪೂರ್ಣವಾಗಿ ಯಶಸ್ಸಿನ ಹಾದಿಯನ್ನು ಕಂಡುಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಾರ್ಯವಾಗಿದೆ ಎಂದರು.
ಕಾಂಗ್ರೆಸ್ ಯುವ ಮುಂಖಡ ಸಂಗನಗೌಡ ಪಾಟೀಲ ಮಾತನಾಡಿ, ಶಿಕ್ಷಣ ಇಂದಿನ ಅನಿವಾರ್ಯ.ಅದು ಎಲ್ಲ ವರ್ಗದ ಜನರಿಗೂ ತಲುಪುವ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವಾರು ಸೌಲಭ್ಯಗಳನ್ನು ಒದಗಿಸುತ್ತದೆ. ಇದನ್ನು ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸುವುದಕ್ಕೆ ಶ್ರಮಿಸಬೇಕು. ತಂದೆ ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಮೌಲ್ಯಯುತ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರ ವ್ಯಕ್ತಿತ್ವ ರೂಪಿಸುವುದರೊಂದಿಗೆ ದೇಶದ ಆಸ್ತಿಯನ್ನಾಗಿಸುವ ಮಹತ್ತರ ಜವಾಬ್ದಾರಿ ತಗೆದುಕೊಳ್ಳಬೇಕು ಎಂದರು.
ನೇತೃತ್ವ ವಹಿಸಿದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ಹಿರಿಯ ನ್ಯಾಯವಾದಿ ಕಳಕಪ್ಪ ಚವರಿ, ಪ.ಪಂ ಸದಸ್ಯ ಕುಮಾರಸ್ವಾಮಿ ಕೋರಧಾನ್ಯಮಠ, ಬಸವರಾಜ ವಂಕಲಕುಂಟಿ, ರೋಣ ತಾಲೂಕಾ ಚಲವಾದಿ ಸಮುದಾಯದ ಅಧ್ಯಕ್ಷ ಸಂಜೀವ ದೊಡ್ಡಮನಿ, ಯಲಬುರ್ಗಾ ತಾಲೂಕಾ ಕಾ.ನಿಪ ಅಧ್ಯಕ್ಷ ಶಿವಮೂರ್ತಿ ಇಟಗಿ, ಜಗದೀಶ ಮಲ್ಲಣ್ಣನವರ ಮಾತನಾಡಿದರು.
ನರೇಗಲ್ಲ ದರ್ಗಾದ ಹಜರತ್ ಮಂಜೂರ ಹುಸೇನ ಶಾವಲಿ ನೇತೃತ್ವ ವಹಿಸಿದ್ದರು. ಪ.ಪಂ ಸದಸ್ಯರಾದ ಮುತ್ತಪ್ಪ ನೂಲ್ಕಿ, ದಾವುದಲಿ ಕುದರಿ, ಮಲ್ಲಿಕಸಾಬ ರೋಣದ, ಈರಪ್ಪ ಜೋಗಿ, ಶ್ರೀಶೈಲಪ್ಪ ಬಂಡಿಹಾಳ, ವಿಜಯಲಕ್ಷ್ಮಿ ಚಲವಾದಿ, ಜ್ಯೋತಿ ಪಾಯಪ್ಪಗೌಡ್ರ, ಸುಮಿತ್ರಾ ಕಮಲಾಪೂರ, ಅಕ್ಕಮ್ಮ ಮಣ್ಣವಡ್ಡರ, ಕಾಂಗ್ರೆಸ್ ಮುಂಖಡರಾದ ನಿಂಗನಗೌಡ ಲಕ್ಕನಗೌಡ್ರ, ಅಲ್ಲಾಭಕ್ಷೆ ನದಾಫ, ಶೇಖಪ್ಪ ಕೆಂಗಾರ, ಪ.ಪಂ ಮುಖ್ಯಾಧಿಕಾರಿ ರಮೇಶ ಹೊಸಮನಿ ಸೇರಿಸಂತೆ ಇತರರಿದ್ದರು. ಶಿಕ್ಷಕ ಬಿ.ಬಿ. ಕುರಿ ನಿರ್ವಹಿಸಿದರು. ಈಶ್ವರ ಬೆಟಗೇರಿ ವಂದಿಸಿದರು.
ಫೋಟೋ ಶಿರ್ಷಿಕೆ ೨೧ನರೇಗಲ್ಲ೧ : ಶ್ರೀಶಾಂತ ದುರ್ಗಾ ದೇವಿಯ ದೇವಸ್ಥಾನ ಮತ್ತು ಕಳಸಾರೋಹಣವನ್ನು ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ ಚಿತ್ರದುರ್ಗದ ಚಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ, ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ, ನರೇಗಲ್ಲ ದರ್ಗಾದ ಹಜರತ್ ಮಂಜೂರ ಹುಸೇನ ಶಾವಲಿ ಉದ್ಘಾಟಿಸಿದರು.
ಫೋಟೋ ಶಿರ್ಷಿಕೆ ೨೧ನರೇಗಲ್ಲ೧ಎ : ಶ್ರೀ ಶಾಂತದುರ್ಗಾ ದೇವಿಯ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಸಮಾರಂಭದಲ್ಲಿ ಚಿತ್ರದುರ್ಗದ ಚಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ ಆಶೀರ್ಚನ ನೀಡಿದರು.
ಫೋಟೋ ಶಿರ್ಷಿಕೆ ೨೧ನರೇಗಲ್ಲ೧ಬಿ : ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಮಾತನಾಡಿದರು.
