Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಬಿಸಿ ಬಿಸಿ ಸುದ್ದಿರಾಜ್ಯ

ಸಮಾಜಕ್ಕೆ ಉತ್ತಮ ಸಂದೇಶವನ್ನು‌ ಸಾರಿ ಹೋದ ಬೀಬಿಫಾತೀಮ ಹಾಗೂ ಹಸನ ಮತ್ತು ಹುಸೇನರ ತ್ಯಾಗ  ನಮ್ಮೆಲ್ಲರಿಗೆ ದಾರಿ ದೀಪ : 

 

ಮೊಹರಂ ಸಂಭ್ರಮದ ಹಬ್ಬವಲ್ಲ  ಆತ್ಮಾವಲೋಕನದ ಮೆರವಣಿಗೆ  :  ಸಮಾಜಕ್ಕೆ ಉತ್ತಮ ಸಂದೇಶವನ್ನು‌ ಸಾರಿ ಹೋದ ಬೀಬಿಫಾತೀಮ ಹಾಗೂ ಹಸನ ಮತ್ತು ಹುಸೇನರ ತ್ಯಾಗ  ನಮ್ಮೆಲ್ಲರಿಗೆ ದಾರಿ ದೀಪ :  

ಮೊಹರಂ ಹಬ್ಬ ಬಂತು  ಅಂದರೆ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ಸಡಗರ ಮತ್ತು ದುಃಖದಿಂದ ಆಚರಿಸುವ ಹಬ್ಬ‌ವೆಂದರೆ ಅದುವೇ ಮೊಹರಂ ಹಬ್ಬವಾಗಿದೆ. ನಾವು ಮೊಹರಂ ಹಬ್ಬ ಅಂದರೆ ಕೇವಲ ಐದು ದಿನ ಒಂದು‌ ಮಸೀದಿ ಪ್ರತಿಷ್ಠಾನಗೊಂಡ ಅಲೆಯ ದೇವರನ್ನು ಸಕ್ಕರೆ ಮತ್ತು ಬ್ಯಾಟಿ ಹಾಕಿ, ನಾಡಿಗಳನ್ನು ಕೈಯಲ್ಲಿ ಕಟ್ಟಿಕೊಂಡು, ಹುಲಿಯ ವೇಷವನ್ನು ಹಾಕಿ ಗ್ರಾಮದ ತುಂಬೆಲ್ಲ ಹೆಜ್ಜೆಗಳನ್ನು ಹಾಕುವುದು ಸಹಜವಾಗಿ  ನಮ್ಮ‌ ಕಣ್ಣು ಮುಂದೆ ಕಂಡು ಬರುತ್ತದೆ.  ಮೊಹರಂ ಹಬ್ಬದಲ್ಲಿ‌ ನಾವುಗಳು ಈ ಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ಮುಖ್ಯವಾಗಿದೆ.

ಹಿಂದಿನ ಕಾಲದಲ್ಲಿಯೇ ಪ್ರಮಾಣಿಕ, ನಿಷ್ಠೆ‌ ಮತ್ತು ಒಳ್ಳೆಯ ತತ್ವಗಳನ್ನು ಅಳವಡಿಸಿಕೊಂಡು ಸದಾ ಜೀವನದಲ್ಲಿ ಇನ್ನೊಬ್ಬರಿಗೆ ಧರ್ಮದ ಬೋಧನೆ ಮತ್ತು ಒಳ್ಳೆಯ ದಾರಿಯಲ್ಲಿ ನಡೆಯುವುದನ್ನು ತಿಳಿಸಿಕೊಟ್ಟ ಹಜರತ್ ಬೀಬಿಫಾತೀಮ ಮತ್ತು ಅವರ ಮಕ್ಕಳಾದ ಹಸನ್ ನತ್ತು ಹುಸೇನ ಅವರನ್ನೇ ಈ ಸಮಾಜವು ಕ್ರೂರವಾಗಿ ನಡೆದುಕೊಂಡು ಒಣಗಿದ ಬಾರಿ ಗಿಡಿದ ತಪ್ಲವನ್ನು ಸೇವಿಸುವಂತೆ ಮಾಡಿದೆ ಅಂದರೆ ಸದ್ಯ ನಾವು ಕೂಡ‌ ಈ ೨೧ನೇ ಶತಮಾನದಲ್ಲಿ ಯಾವ ರೀತಿಯಾಗಿ ಬದುಕನ್ನು ಸಾಗಿಸಬೇಕು‌ ಮತ್ತ ನಾವು‌ ಈ ಸಮಾಜದಲ್ಲಿ ಯಾವ ರೀತಿಯಲ್ಲಿ‌ ಸೇವೆಯನ್ನು‌ ಸಲ್ಲಿಸಬೇಕು ಎಂಬುವುದನ್ನು  ನಾವು ಈ ಮೊಹರಂ ಹಬ್ಬದಿಂದ  ಇತ್ತೀಚಿನ ಯುವ ಪೀಳಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪ್ರಸಂಗ ಇಂದು‌ ನಮ್ಮಲ್ಲರಿಗೂ ಎದುರಾಗಿದೆ.‌ ಮಾನವ ಹುಟ್ಟಿದ  ಕೇವಲ ತನ್ನ ‌ಸ್ವಾರ್ಥದ ಇಚ್ಛೆಗಳನ್ನು‌ ಪೂರೈಸಿಕೊಂಡು ಹೋಗುವುದಕ್ಕೆ ಅಲ್ಲ, ಈ ಭೂಮಿಯ ಮೇಲೆ ಜನ್ಮ ತಾಳಿದ ಪ್ರತಿಯೊಬ್ಬ‌‌ ಮನುಷ್ಯ ಯಾವುದಾದರೂ ಒಂದು‌ ಉತ್ತಮ ಮತ್ತು ನಿಸ್ವಾರ್ಥ ಮನೋಭಾವದಿಂದ ಈ‌ ಸಮಾಜಕ್ಕೆ‌ಮತ್ತು‌ ಸಮುದಾಯಕ್ಕೆ  ಕೊಟ್ಟು  ಹೋಗಬೇಕು ವಿನಹ ಮತ್ತೊಬ್ಬರಿಗೆ ಅನ್ಯಾಯ ಮಾಡಿ ಬದುಕುವದನ್ನು‌ ಮಾಡಬಾರದು. ಹಿಂದೆ ನಮ್ಮ ಪೂರ್ವಜರು ನಡೆದುಕೊಂಡು ಬಂದ ಹಾದಿಯನ್ನು ನಾವು ಸ್ವಲ್ಪ‌ ಮಟ್ಟಿಗಾದರೂ ಪಾಲಿಸಲು ಮುಂದಾಗಬೇಕು. ಇತ್ತೀಚಿಗೆ ಮನುಷ್ಯನು ದಿನನಿತ್ಯ ಜೀವನ ಜಂಜಾಟದಲ್ಲಿ ತಂತ್ರಜ್ಞಾನದ ಯುಗದಲ್ಲಿ ಹಬ್ಬ‌ ಹರಿದಿನಗಳನ್ನು‌ ಕಣ್ಮುರೆಗೊಳ್ಳಿಸುತ್ತಿದ್ದೇವೆ.‌ ಹೀಗಾಗಿ ನಮ್ಮ ಪರಂಪರೆಯ, ಆಚರಣೆ, ಧರ್ಮ ಜಾಗೃತಿ‌‌‌ ಸೇರಿದಂತೆ ಹತ್ತು ಹಲವಾರು ಜನಪದ ಸೊಗಡು ಕಣ್ಮರೆಯಾಗುತ್ತಿವೆ.‌ ಯುವಕರು ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಪ್ರಾಮುಖ್ಯತೆ ಹೊಂದಿರುವ ಹಬ್ಬಗಳನ್ನು ಆಚರಿಸಲು ಮುಂದಾಗಬೇಕಿದೆ.‌

ಹೌದು ಇವತ್ತು ನಾವು ಆತ್ಮಾವಲೋಕನ‌ ಮಾಡಿಕೊಳ್ಳುವ ಹಬ್ಬ ಅದುವೇ ಮೊಹರಂ :

ರಂಜಾನ್ ನಂತರ ಮುಸ್ಲಿಂ ಧರ್ಮದಲ್ಲಿ ಮೊಹರಂ ಎರಡನೇ ಪವಿತ್ರ ತಿಂಗಳು . ಇಸ್ಲಾಮಿಕ್ ಕ್ಯಾಲೆಂಡರ್ ಮೊಹರಂ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಇದು ಇಸ್ಲಾಮಿಕ್ ಕ್ಯಾಲೆಂಡರ್ ವರ್ಷದ ಮೊದಲ ತಿಂಗಳು.ಮೊಹರಂನ 10ನೇ ದಿನ ಅಥವಾ 10ನೇ ದಿನವನ್ನು ಯೌಮ್-ಎ- ಅಶುರಾ ಎಂದು ಕರೆಯಲಾಗುತ್ತದೆ . ಈ ದಿನ ಶೋಕ ದಿನ. ಈ ದಿನ ಮುಸ್ಲಿಂ ಸಮುದಾಯ ಶೋಕಿಸುತ್ತದೆ.

ಇಸ್ಲಾಂ ಧರ್ಮದಲ್ಲಿ ಅತಿದೊಡ್ಡ ಹಬ್ಬ ಈದ್ ಎಂದು ಹೇಳಲಾಗಿದೆ ಎಂದು ನಿಮಗೆ ತಿಳಿದಿದೆ, ಅದರ ನಂತರ ಎರಡನೇ ದೊಡ್ಡ ಹಬ್ಬ ಮೊಹರಂ ಆಗಿದೆ, ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ,ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ಜನವರಿ ಮೊದಲ ತಿಂಗಳು, ಹಾಗೆಯೇ ಇದು ಇಸ್ಲಾಂ ಧರ್ಮದ ಧರಿಸುವ ತಿಂಗಳು. ಇದು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ, ಕುರಾನ್‌ನಲ್ಲಿ ಇದನ್ನು ‘ಗಮ್ ತಿಂಗಳು ಎಂದು ಕರೆಯಲಾಗುತ್ತದೆ, ಅದರ ನಂತರ ರಂಜಾನ್‌ನ ಎರಡನೇ ತಿಂಗಳು ಇರುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್ ಅನ್ನು ಹಿಜ್ರಿ ಕ್ಯಾಲೆಂಡರ್ ಎಂದೂ ಕರೆಯುತ್ತಾರೆ,

ಮೊಹರಂ ಕೊನೆಯ ದಿನ 2023

ಇದರ ಮೊದಲ ತಿಂಗಳು ಮೊಹರಂ ಆಗಿದೆ, ಇದು ರಂಜಾನ್ ತಿಂಗಳ ನಂತರ ಎರಡನೇ ಪವಿತ್ರ ಮತ್ತು ದೊಡ್ಡದು ಎಂದು ಹೇಳಲಾಗುತ್ತದೆ. ನಂಬಿಕೆಗಳ ಪ್ರಕಾರ, ಇಸ್ಲಾಮಿಕ್ ವರ್ಷವು 622  ನಲ್ಲಿ ಪ್ರಾರಂಭವಾಯಿತು. ಮತ್ತು ಇಂದಿಗೂ ಇಸ್ಲಾಂ ಧರ್ಮದಲ್ಲಿ ಜನರು ತಮ್ಮ ಕ್ಯಾಲೆಂಡರ್ ಪ್ರಕಾರ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಜಿ ಅವರ ಹುತಾತ್ಮತೆಯನ್ನು (ಸಾವು) ಹೊಂದಿದ್ದು ಈ ತಿಂಗಳಲ್ಲಿಯೇ ಮುಹರಮ್ ಅನ್ನು ಶೋಕಾಚರಣೆಯ ತಿಂಗಳು ಎಂದೂ ಕರೆಯುತ್ತಾರೆ. ಮತ್ತು ಅದೇ ಶೋಕಾರ್ಥವಾಗಿ, ಇಂದಿಗೂ ಇಸ್ಲಾಂ ಧರ್ಮದ ಜನರು ಈ ದಿನದಂದು ಇಡೀ ನಗರದಲ್ಲಿ ಮೆರವಣಿಗೆಗಳು ಮತ್ತು ತಾಜಿಯಾಗಳನ್ನು ನಡೆಸುತ್ತಾರೆ. ಮತ್ತು ಈ ದಿನ ನಮ್ಮ ಇಮಾಮ್ ಹುಸೇನ್ ಜೀ ಹುತಾತ್ಮರಾದರು ಮತ್ತು ಅದಕ್ಕಾಗಿಯೇ ಅವರು ಸ್ವತಃ ಹೊಡೆದು ದುಃಖಿಸುತ್ತಾರೆ ಎಂಬ ಸಂದೇಶವನ್ನು ನೀಡಿ.

ಇಮಾಮ್ ಹುಸೇನ್ ಹುತಾತ್ಮರಾದ ಇಸ್ಲಾಂ ಧರ್ಮದ ಶಿಯಾ ಮುಸಲ್ಮಾನರ ಸ್ಮರಣಾರ್ಥ ಎಲ್ಲರೂ ಕಪ್ಪು ಬಟ್ಟೆ ಧರಿಸಿ ಬೀದಿಗಿಳಿದು ಮೆರವಣಿಗೆ ನಡೆಸಿ ಸಂದೇಶ ಸಾರುತ್ತಾ ಇಸ್ಲಾಂ ಧರ್ಮದ ಮಾನವೀಯತೆ ಕಾಪಾಡುವ ಭರದಲ್ಲಿ ನಮ್ಮ ಹುಸೇನ್ ತ್ಯಾಗ ಮಾಡಿದ್ದರು. ಮತ್ತು ಅದಕ್ಕಾಗಿಯೇ ಇಂದು ಅಶುರಾ ದಿನ, ಅಂದರೆ ಶೋಕಾಚರಣೆಯ ದಿನ ಮತ್ತು ಅವನ ನೆನಪಿಗಾಗಿ, ತಾಜಿಯಾವನ್ನು ಸಹ ಹೊರತೆಗೆಯಲಾಗುತ್ತದೆ, ಇಸ್ಲಾಂ ಧರ್ಮವಾಗಿರುವ ಪ್ರಪಂಚದ ಎಲ್ಲಾ ದೇಶಗಳಲ್ಲಿ ಈ ಹಬ್ಬವನ್ನು ಪ್ರಪಂಚದ ಎಲ್ಲಾ ದೇಶಗಳಲ್ಲಿ ಆಚರಿಸಲಾಗುತ್ತದೆ. ಮತ್ತು ಅದೇ ಸಂಪ್ರದಾಯದ ಪ್ರಕಾರ ಒಟ್ಟಿಗೆ ಆಚರಿಸಲಾಗುತ್ತದೆ

ಮೊಹರಂ ಹಬ್ಬದ ಇತಿಹಾಸ :

ಈ ಕಥೆಯು ಕ್ರಿ.ಪೂ. 622 ರ ಹಿಂದಿನದು, ಮೊಹರಂ ತಿಂಗಳ ಮೊದಲ ದಿನದಂದು, ಪ್ರವಾದಿ ಮುಹಮ್ಮದ್ ಮತ್ತು ಅವರ ಸಹಚರರು ಮೆಕ್ಕಾ ಮಸೀದಿಯಿಂದ ಮದೀನಾಕ್ಕೆ ಹೋಗಲು ಒತ್ತಾಯಿಸಲಾಯಿತು. ಈ ದಿನಗಳಲ್ಲಿ ಹಜರತ್ ಇಮಾಮ್ ಹುಸೇನ್ ಜಿ ಅವರು ಇಸ್ಲಾಂ ಧರ್ಮವನ್ನು ರಕ್ಷಿಸುವ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅವನು ತನ್ನ ತ್ಯಾಗವನ್ನು ನೀಡಿದಾಗ, ಆ ದಿನವು ಮೊಹರಂ ತಿಂಗಳ 10 ನೇ ದಿನವಾಗಿತ್ತು. ಇದನ್ನು ಇಂದಿಗೂ ಮುಸ್ಲಿಂ ಜನರು ಶೋಕ ಎಂದು ಆಚರಿಸುತ್ತಾರೆ. ಅಂದಿನಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ.

2023 ರಲ್ಲಿ ಮೊಹರಂ ಯಾವಾಗ?

ಈ ಬಾರಿ ಮೊಹರಂ ಹಬ್ಬ 2023ರಲ್ಲಿ ಶನಿವಾರ, ಜುಲೈ 29 ರಂದು ಆಚರಿಸಲಾಗುತ್ತದೆ.

ಇಸ್ಲಾಮಿಕ್ ಧರ್ಮದ ಮೊದಲ ಪವಿತ್ರ ತಿಂಗಳು ಮೊಹರಂ ಜುಲೈನಿಂದ ಪ್ರಾರಂಭವಾಗಿದೆ

ಮೊಹರಂನ ಪ್ರಾಮುಖ್ಯತೆ

ಅಶುರಾ ಮೊಹರಂನ ಪ್ರಾಮುಖ್ಯತೆಯನ್ನು ಇತರ ಇಸ್ಲಾಮಿಕ್ ಪದ್ಧತಿಗಳಿಂದ ಬಹಳ ವಿಭಿನ್ನವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಶೋಕದ ತಿಂಗಳು. ಹಾಗಾಗಿ ಈ ಮಾಸದಲ್ಲಿ ಹಬ್ಬವಿಲ್ಲ. ಅಶುರಾ ದಿನದಂದು, ಇಮಾಮ್ ಹುಸೇನ್ ಅವರ ಹುತಾತ್ಮರ ನೆನಪಿಗಾಗಿ, ಭಾರತ ಸೇರಿದಂತೆ ಪ್ರಪಂಚದಾದ್ಯಂತದ ಶಿಯಾ ಮುಸ್ಲಿಮರು ಕಪ್ಪು ಬಟ್ಟೆಗಳನ್ನು ಧರಿಸಿ ಮೆರವಣಿಗೆಗಳನ್ನು ನಡೆಸಿ ಜನರಿಗೆ ತಮ್ಮ ಸಂದೇಶವನ್ನು ತಲುಪಿಸುತ್ತಾರೆ. ಇಸ್ಲಾಂ ಮತ್ತು ಮಾನವೀಯತೆಗಾಗಿ ಹುಸೇನ್ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನವನ್ನು ಅಶುರಾ ಅಂದರೆ ಶೋಕದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಅವರ ತ್ಯಾಗವನ್ನು ನೆನಪಿಸಿಕೊಳ್ಳಲಾಗುತ್ತದೆ ಮತ್ತು ತಾಜಿಯಾವನ್ನು ಹೊರತೆಗೆಯಲಾಗುತ್ತದೆ.

ಮೊಹರಂ ಏಕೆ ಆಚರಿಸಲಾಗುತ್ತದೆ?

ಮೊಹರಂ ಹಬ್ಬ ಹಿಂದೂ ಹಾಗೂ ಮುಸ್ಲಿಮರ ಭಾವೈಕ್ಯತೆಯನ್ನು ಸೂಚಿಸುವ ಹಬ್ಬ. ಈ ಹಬ್ಬದಲ್ಲಿ ಹಿಂದೂಗಳು ಕೂಡ ಪ್ರಮುಖ ಪಾತ್ರ ವಹಿಸುತ್ತಾರೆ. ಮೊಹರಂನ 10 ನೇ ದಿನವನ್ನು ಅಶುರಾ(Ashura) ಎಂದು ಕರೆಯುತ್ತಾರೆ. ಇದು ಮುಸ್ಲಿಮರಿಗೆ ಮಹತ್ವದ ದಿನವಾಗಿದೆ. ಸುನ್ನಿ ಮತ್ತು ಶಿಯಾ ಮುಸ್ಲಿಮರು ಮೊಹರಂ ಅನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅನೇಕ ಸುನ್ನಿ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ನ ಹೊಸ ವರ್ಷದ ಆರಂಭವಾಗಿದೆ. ಶಾಂತಿಯ ಪ್ರತಿಬಿಂಬವಾಗಿದೆ. ಆದ್ರೆ ಇಸ್ಲಾಂನ ಶಿಯಾವನ್ನು ಅನುಸರಿಸುವ ಮುಸ್ಲಿಮರಿಗೆ, ಈ ತಿಂಗಳು ಇಸ್ಲಾಮಿಕ್ ಇತಿಹಾಸದಲ್ಲಿ ದುಃಖದ, ಪಶ್ಚಾತಾಪದ ದಿನವಾಗಿದೆ.

ಶಿಯಾ ಮುಸ್ಲಿಮರಿಗೆ, ಮೊಹರಂ ತಿಂಗಳು, ಪ್ರವಾದಿ ಮೊಹಮ್ಮದ್ ಪೈಗಂಬರ್ರ ಮೊಮ್ಮಗ ಹುಸೇನ್ ಇಬ್ನ್ ಅಲಿಯ ಸಾವನ್ನು ನೆನಪಿಸುತ್ತದೆ. ಖಲೀಫಾ ಯಜಿದ್ನಿಂದ ಕ್ರಿಸ್ತಶಕ 680 ರಲ್ಲಿ ಆಶುರಾ ದಿನದಂದು ಕರುಬಲಾ ಎಂಬ ಮರುಭೂಮಿಯಲ್ಲಿ ನಡೆದ ತುಮುಲ ಯುದ್ಧದಲ್ಲಿ ಹುಸೇನ್ ನನ್ನು ಕೊಲ್ಲಲಾಯಿತು. ಹೀಗಾಗಿ ಅನೇಕ ಶಿಯಾಗಳು ಈ ತಿಂಗಳ ಪ್ರವಾದಿಯ ಕುಟುಂಬದ ಶೌರ್ಯವನ್ನು ನೆನಪಿಸಿಕೊಂಡು ದುಃಖಿಸುತ್ತಾರೆ.

ಇದನ್ನು ಹೇಗೆ ಆಚರಿಸಲಾಗುತ್ತದೆ?

ಅನೇಕ ಮುಸ್ಲಿಮರು ಆಶುರಾ ದಿನದಂದು ಉಪವಾಸವನ್ನು ಮಾಡುತ್ತಾರೆ, ಹಾಗೆಯೇ ಮೊಹರಂ ತಿಂಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಶಿಯಾ ಮುಸ್ಲಿಮರು ಸಹ ಶೋಕಾಚರಣೆಗಳಲ್ಲಿ ತೊಡಗುತ್ತಾರೆ. ಸಾರ್ವಜನಿಕ ಆಚರಣೆಗಳನ್ನು ಮಾಡುತ್ತಾರೆ, ಈ ವೇಳೆ ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರ ಕುಣಿತ, ಬೆಂಕಿಯಲ್ಲಿ ನಡೆದಾಡುವುದು ಸೇರಿದಂತೆ ಕೆಲವು ಆಚರಣೆಯನ್ನು ಮಾಡಲಾಗುತ್ತೆ.

ಏನಿದು ಯುದ್ಧ?

ಪ್ರವಾದಿ ಮೊಹಮ್ಮದ್ ಅವರ ಉಪದೇಶಗಳನ್ನು ಅವರ ಮೊಮ್ಮಕಳು ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಮೊಹಮ್ಮದ್ ತಮ್ಮ ಸಿದ್ಧಾಂತ, ಧರ್ಮ ಪಾಲನೆಯ ನಿಯಮಗಳನ್ನು ವಿಶ್ವದಾದ್ಯಂತ ವಿಸ್ತರಿಸುವಂತೆ ತಿಳಿಸಿರುತ್ತಾರೆ. ಮೊಹಮ್ಮದ್ ರ ನಂತರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ ನಾಲ್ಕನೇ ಖಲೀಫರಾಗುತ್ತಾರೆ. ಈ ದಂಪತಿಗೆ ಇಮಾಮ್ ಹಸನ್ ಮತ್ತು ಇಮಾಮ್ ಹುಸೇನ್ ಎಂಬ ಇಬ್ಬರು ಮಕ್ಕಳಿರುತ್ತಾರೆ. ಹಜರತ್ ಅಲಿ ಅವರ ಬಳಿಕ ಖಲೀಫ್ ಸ್ಥಾನಕ್ಕೆ ಇಮಾಮ್ ಹುಸೇನ್ ಬರಬೇಕಿತ್ತು. ಆದ್ರೆ ಅಲ್ಲಿಯ ಸರ್ದಾರನಾಗಿದ್ದ ಯಜೀದ್ ಎಂಬಾತ ತಾನೇ ಖಲೀಫ್ ಎಂದು ಘೋಷಿಸಿಕೊಂಡಿದ್ದನು. ಸರ್ವ ದುರ್ಗುಣಗಳ ಸಂಪನ್ನನಾಗಿದ್ದ ಯಜೀದ್, ಇಸ್ಲಾಂ ತತ್ವ ಸಿದ್ಧಾಂತಗಳನ್ನು ತನಗೆ ಅನೂಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು.

ಹೀಗಾಗಿ ಇಮಾಮ್ ಹುಸೇನ್ ಮತ್ತು ಇಮಾಮ್ ಹಸನ್ ಇಬ್ಬರು ಯಜೀದ್ ಆಡಳಿತವನ್ನು ವಿರೋಧಿಸಿದರು. ತನ್ನನ್ನು ವಿರೋಧಿಸಿದ ಇಮಾಮ್ ಹಸನ್ ಅವರ ಆಹಾರದಲ್ಲಿ ಯಜೀದ್ ವಿಷ ಬೆರೆಸುತ್ತಾನೆ. ವಿಷಾಹಾರ ಸೇವಿಸಿದ ಇಮಾಮ್ ಹಸನ್ ಮೃತಪಡುತ್ತಾರೆ. ಸೋದರನ ಸಾವಿನ ಬಳಿಕ ಇಮಾಮ್ ಹುಸೇನ್ಗೆ ಕೋಪವಿರುತ್ತದೆ. ಕೊನೆಗೆ ಇಮಾಮ್ ಹುಸೇನ್ ರನ್ನು ಸಂಧಾನಕ್ಕಾಗಿ ಯಜೀದ್ ಆಹ್ವಾನಿಸುತ್ತಾನೆ. ಯಜೀದ್ ಜೊತೆ ಸೇರದ ಇಮಾಮ್ ಹುಸೇನ್ ಇಸ್ಲಾಂ ಉಳಿಯುವಿಕೆಗಾಗಿ ಹೋರಾಟ ನಡೆಸುತ್ತಾರೆ. ಇದರಿಂದ ಕುಪಿತಗೊಂಡ ಯಜೀದ್ ಯುದ್ಧ ಸಾರುತ್ತಾನೆ. ಕೊನೆಗೆ ಇಮಾಮ್ ಹುಸೇನ್ ಯಜೀದ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರಬಲಾದದಲ್ಲಿ ಎದುರಾಗುವ ಯಜೀದ್ ಸೈನಿಕರು ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.

ಯಾವುದೇ ಬೇಡಿಗೆಗಳನ್ನು ಒಪ್ಪದ ಇಮಾಮ್ ಹುಸೇನ್ ಅವರಿಗೆ ಕುಡಿಯಲು ನೀರು ಸಹ ನೀಡಲ್ಲ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಕೂಡ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಕಣ್ಣೀರಿನ ಹಬ್ಬವಾಗುತ್ತದೆ. ಶೋಕಾಚರಣೆಯಾಗುತ್ತದೆ.

ಕರಬಲಾದತ್ತ ಪಯಣ:

ಕೊನೆಗೆ ಇಮಾಮ್ ಹುಸೇನ್ ಅವರು ಯಜೀದ್ ರಾಜ್ಯವನ್ನು ತೊರೆದು ತಮ್ಮ 72 ಅನುಯಾಯಿಗಳೊಂದಿಗೆ ಮೆಕ್ಕಾ-ಮದೀನಾದತ್ತ ಪ್ರಯಾಣ ಬೆಳೆಸುತ್ತಾರೆ. ಆದ್ರೆ ಒಂದು ವೇಳೆ ತಾವು ಮೆಕ್ಕಾಗೆ ತೆರಳಿದಾಗ ಯಜೀದ್ ನನ್ನನ್ನು ಕೊಲ್ಲಬಹುದು. ಪವಿತ್ರ ಸ್ಥಳದಲ್ಲಿ ರಕ್ತ ಹರಿಯುವುದು ಒಳಿತಲ್ಲ ಎಂದು ಅರಿತ ಇಮಾಮ್ ಹುಸೇನ್ ಅವರು ಕರಬಲಾದತ್ತ ಮಾರ್ಗ ಬದಲಿಸುತ್ತಾರೆ. ಕರಬಲಾದದಲ್ಲಿ ಎದುರಾಗುವ ಯಜೀದ್ ಸೈನಿಕರು ನಮ್ಮ ರಾಜ ಹೇಳಿದಂತೆ ಕೇಳಿದ್ರೆ ನಿನ್ನನ್ನು ಜೀವಂತವಾಗಿ ಬಿಡುತ್ತೇನೆ ಅಂತಾ ಹೇಳ್ತಾರೆ.

ಯಾವುದೇ ಪ್ರಲೋಭಣೆಗೆ ಒಳಗಾಗದ ಇಮಾಮ್ ಹುಸೇನ್ ಅವರಿಗೆ ಕುಡಿಯಲು ನೀರು ಸಹ ನೀಡಲ್ಲ. ದಾಹದಿಂದ ಬಳಲಿ ಇಮಾಮ್ ಹುಸೇನ್ ಅವರ 6 ತಿಂಗಳ ಮಗ ಕೂಡ ಸಾವನ್ನಪ್ಪುತ್ತಾನೆ. ಕೇವಲ 72 ಅನುಯಾಯಿಗಳನ್ನು ಹೊಂದಿದ್ದ ಇಮಾಮ್ ಹುಸೇನ್ ಸುದೀರ್ಘವಾಗಿ ಹೋರಾಟ ಮಾಡಿಕೊಂಡು ಬರುತ್ತಾರೆ. ಶತ್ರುಗಳು ಕುಡಿಯಲು ನೀರು ಕೊಡದೇ ಇದ್ದರೂ ಇಮಾಮ್ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇದರಿಂದ ಕುಪಿತಗೊಂಡ ಯಜೀದ್ ಸೈನಿಕರು ಕದನ ವಿರಾಮದಲ್ಲಿ ಇಮಾಮ್ ಹುಸೇನ್ ಡೇರಾದ ಬಳಿ ತೆರಳಿ ನಮಾಜ್ ಮಾಡುತ್ತಿದ್ದಾಗ ಶಿರಚ್ಛೇಧ ಮಾಡುತ್ತಾರೆ. ತಮ್ಮ ಜೀವನದ ಕೊನೆಯವರೆಗೂ ಇಮಾಮ್ ಹುಸೇನ್ ಇಸ್ಲಾಂ ಧರ್ಮದ ಉಳಿಯುವಿಕೆಗಾಗಿ ಹೋರಾಡಿದ್ದ ಧರ್ಮಗುರು.

ಮೊಹರಂ ತಿಂಗಳ 10ನೇ ದಿನದಂದು ಇಮಾಮ್ ಹುಸೇನ್ ವೀರಮರಣವನ್ನಪ್ಪುತ್ತಾರೆ. ಮೊಹರಂ ಆಚರಣೆ ಮೂಲತಃ ಶೋಕಸ್ಥಾಯಿಯಾಗಿದ್ದರೂ ಕಾಲಚಕ್ರದಲ್ಲಿ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗಪಡೆದು ರಂಜಿಸುತ್ತಿದೆ. ಇಮಾಮ್ ಹುಸೇನ್ ದುರಂತ ಸಾವಿನ ಸಂತಾಪ ಸೂಚಿಸುವ ಈ ಹಬ್ಬದಲ್ಲಿ ಹಸ್ತ ಸಂಕೇತಗಳನ್ನು ಬಳಸಲಾಗುತ್ತದೆ. ಹಿಂದೂ-ಮುಸ್ಲಿಮರು ಒಂದಾಗಿ ಭಾವೈಕ್ಯತೆಯಿಂದ ಮೊಹರಂ ಆಚರಣೆ ಮಾಡಲಾಗುತ್ತದೆ. ಆಲಾಯಿ ಕುಣಿತ, ಮೊಹರಂ ಪದಗಳು ಹಾಡುವುದು, ದೇವರು ಹಿಡಿಯುವುದು, ಬೆಂಕಿಯಲ್ಲಿ ನಡೆದಾಡುವುದು, ಹಿಂದೂಗಳೆಲ್ಲ ಸೇರಿ ನೈವೇದ್ಯ ನೀಡುತ್ತಾರೆ.

ಹಬ್ಬದ ಸಂದರ್ಭದಲ್ಲಿ ಪಿಂಜಾ ಅಥವಾ ದೇವರು ಹೊತ್ತವರಲ್ಲಿ ಭಯ, ಭಕ್ತಿ, ಹೇಳಿಕೆಗಳು, ರೈತರಿಗೆ ಭವಿಷ್ಯತ್ತಿನಲ್ಲಿ ಮಳೆ, ಬೆಳೆಯ ಬಗ್ಗೆ, ಸಂತಾನ ಪ್ರಾಪ್ತಿಯ ಬಗ್ಗೆ, ಮನೆತನಗಳ ಸಮಸ್ಯೆ ಪರಿಹಾರಗಳ ಬಗ್ಗೆ ಇನ್ನೂ ಮುಂತಾದ ಪ್ರಶ್ನೆಗಳನ್ನು ಭಕ್ತಾದಿಗಳು ಕೇಳುವ ಪದ್ಧತಿ ಉತ್ತರ ಕರ್ನಾಟಕದ ಗ್ರಾನಡೆದುಕೊಂ,ಡುಇನ್ನು ಜೀವಂತವಾಗಿದೆ.

ಸಿಕಂದರ ಎಂ.‌ಆರಿ ಪತ್ರಕರ್ತರು ಹಾಗೂ ಕಾನೂನು ವಿದ್ಯಾರ್ಥಿ

Related posts

ಯಲಬುರ್ಗಾ ತಾಲೂಕಿನಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಪವನ​ ವಿದ್ಯುತ್ ಯಂತ್ರಗಳ ಅಳವಡಿಕೆ 

satyadarshana

ಅನಾರೋಗ್ಯದಿಂದ ಕರ್ತವ್ಯನಿರತ ಬಿಎಸ್ಎಫ್ ಯೋಧ ನಿಧನ.

satyadarshana

ಅಂತರ್ ವಿಭಾಗೀಯ ವ್ಹಾಲಿಬಾಲ್ ಪಂದ್ಯಾವಳಿ

satyadarshana

Leave a Comment