Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆಗೆ ಸಚಿವ ಎಚ್.ಕೆ.ಪಾಟೀಲ ಚಾಲನೆ.

ಗದಗ..17: ರಾಜ್ಯದ ಜನಸಾಮಾನ್ಯರ ಬದುಕು ಹಸನಾಗಬೇಕು, ಹಸಿವು ಮುಕ್ತವಾಗಬೇಕು, ನೆಮ್ಮದಿಯ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನ್ನಭಾಗ್ಯ ಯೋಜನೆ ಆಸರೆಯಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ನುಡಿದರು.

ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ರವಿವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದಿಂದ ಅನ್ನಭಾಗ್ಯ ಯೋಜನೆ ನೇರ ನಗದು ವರ್ಗಾವಣೆ ಸಮಾರಂಭಕ್ಕೆ ಚಾಲನೇ ನೀಡಿ ಅವರು ಮಾತನಾಡಿದರು.

ಹೇಳಿದ್ದನ್ನು ಸರಿಯಾಗಿ ಅನುಷ್ಠಾನ ಮಾಡುವ ಮೂಲಕ ನುಡಿದಂತಹ ಸರಕಾರ ನಡೆದಿದೆ. ರಾಜ್ಯದ ಜನಸಾಮಾನ್ಯರ ಹಸಿವು ನಿಗಿಸಿದ ಸಾರ್ಥಕ ಭಾವ ಮೂಡಿದೆ ಎಂದರು. ನಮ್ಮನ್ನು ನಂಬಿ ನಿವೇಲ್ಲರೂ ಆಶೀರ್ವದಿಸಿದ್ದಿರಿ ನಿಮ್ಮ ಆಶೀರ್ವಾದದ ಶಕ್ತಿಯಿಂದ ಇಂದು ನಿಮಗೆಲ್ಲ ಹತ್ತು ಕೆ.ಜಿ. ಅಕ್ಕಿ ನೀಡಲು ಸಾಧ್ಯವಾಗಿದೆ ಎಂದರು. ಸಧ್ಯ ಪ್ರತಿ ಪಡಿತರ ಕುಟುಂಬದ ಸದಸ್ಯರಿಗೆ ೫ ಕೆ.ಜಿ. ಅಕ್ಕಿ ಹಾಗೂ ೫ ಕೆ.ಜಿ.ಗೆ ತಗಲುಬಹುದಾದ ದುಡ್ಡನ್ನು ನೀಡಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆಗೆ ಜಿಲ್ಲೆಯಲ್ಲಿ ಸದ್ಯ ಬಿಪಿಎಲ್ ಹಾಗೂ ಎಎಪಿ ಒಟ್ಟಾರೆ ಅರ್ಹ ೧,೮೮,೮೩೩ ಪಡಿತರ ಚೀಟಿದಾರರಿದ್ದು ೬,೪೩,೪೨೩ ಫಲಾನುಭವಿಗಳಿಗೆ ೧೦,೩೬,೫೫,೧೨೦ ರೂ ನೇರ ನಗದು ಜಮೆ ಮಾಡಲು ಚಾಲನೇ ದೊರಕಿದೆ. ಇದೊಂದು ಕ್ರಾಂತಿಕಾರಕ ಕಾರ್ಯವಾಗಿದ್ದು ಹಸಿವು ಮುಕ್ತ ರಾಜ್ಯ ಮಾಡುವಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.

ಬೆಲೆ ಏರಿಕೆಯಿಂದ ಬೇಸತ್ತ ಜನಸಾಮಾನ್ಯರಿಗೆ ಆರ್ಥಿಕ ಆಧಾರ ನೀಡುವ ಗೃಹ ಲಕ್ಷ್ಮೀ ಯೋಜನೆಗೆ ನೋಂದಣಿ ಕಾರ್ಯಕ್ಕೆ ಜುಲೈ ೧೯ ರಂದು ಚಾಲನೇ ನೀಡಲಾಗುತ್ತಿದೆ. ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ೨೦೦೦ ರೂ. ನೆರವು ನೀಡುವ ಯೋಜನೆ ಇದಾಗಿದೆ. ಬಡವರ ಬದುಕು ಅಸಹನೀಯವಾಗಿರುವದನ್ನು ಮನಗಂಡು ಕುಟುಂಬದ ಆರ್ಥಿಕ ಪುನಶ್ಚೇತನಕ್ಕೆ ಸರಕಾರ ಮುಂದಾಗಿದೆ. ಅಗಸ್ಟ ೧೬, ೧೭ ರಂದು ಗೃಹ ಲಕ್ಷ್ಮೀ ಯೋಜನೆಯ ೨೦೦೦ ರೂ. ಆರ್ಥಿಕ ನೆರವು ಅರ್ಹರಿಗೆ ತಲುಪಲಿದೆ. ಈ ಮೊತ್ತದಿಂದ ಆರ್ಥಿಕ ಅಡಚಣೆ ನಿಗಿಸಲು ನೆರವು ನೀಡಿದಂತಾಗುತ್ತದೆ. ಈಗಾಗಲೇ ಶಕ್ತಿ ಯೋಜನೆ ಅಪಾರ ಜನಮನ್ನಣೆಗೆ ಪಾತ್ರವಾಗಿದ್ದು ಒಂದೇ ತಿಂಗಳಲ್ಲಿ ೧೭ ಕೋಟಿ ಮೊತ್ತದ ಪ್ರಯಾಣವನ್ನು ಮಹಿಳೆಯರು ಮಾಡಿದ್ದು ಖುಷಿ ತಂದಿದೆ ಎಂದರು.

ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ ಬಡವರ ಹಸಿವು ನಿಗಿಸುವ ಶ್ರೇಷ್ಠ ಯೋಜನೆ ಅನ್ನಭಾಗ್ಯ ರಾಜ್ಯದಲ್ಲಿ ೧.೩೬ ಕೋಟಿ ಬಿ.ಪಿ.ಎಲ್ ಪಡಿತರ ಕುಟುಂಬಗಳಿವೆ. ಸರ್ಕಾರದ ಪ್ರತಿ ಪೈಸೆ. ಅರ್ಹರಿಗೆ ತಲುಪಬೇಕು ಮತ್ತು ಅದು ಸದುಪಯೋಗ ಆಗಬೇಕು. ಸರ್ಕಾರ ಅಥವಾ ಅಧಿಕಾರಿ ಉತ್ತಮ ಕೆಲಸ ಮಾಡಿದಾಗ ಅದನ್ನು ಮೆಚ್ಚಿ ಬೆನ್ನು ತಟ್ಟುವ ಕಾರ್ಯವಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅನ್ನಭಾಗ್ಯದ ಅನಿಸಿಕೆ: ಫಲಾನುಭವಿಗಳಾದ ಯಾಕೂಬ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ ಮನೆಯ ಪ್ರತಿ ಸದಸ್ಯರಿಗೆ ೫ ಕೆ.ಜಿ. ಅಕ್ಕಿಯ ಮೊತ್ತ ೧೭೦ ರೂಗಳಂತೆ ನಮಗೆ ೬೮೦ ರೂ. ಪ್ರತಿ ತಿಂಗಳು ಸಿಗಲಿದೆ ಇದರಿಂದ ನಾವು ಅಕ್ಕಿ, ಬೆಳೆ, ಸಕ್ಕರೆಯಂತಹ ಪಧಾರ್ಥಗಳನ್ನು ಖರೀದಿಸಲು ತುಂಬಾ ಸಹಕಾರಿಯಾಗಲಿದೆ. ಈ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವರಾದ ಎಚ್.ಕೆ.ಪಾಟೀಲ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂದರು. ಇನ್ನೊರ್ವ ಫಲಾನುಭವಿ ಶರಣಮ್ಮ ಲಿಗಾಡಿ ಮಾತನಾಡಿ ಸಿ.ಎಮ್. ಸಿದ್ಧರಾಮಯ್ಯನವರು ನೀಡುವ ಅನ್ನಭಾಗ್ಯದ ಧನಭಾಗ್ಯದ ಹಣವು ಕುಟುಂಬಕ್ಕೆ ಅತ್ಯಂತ ಅನುಕೂಲಕರವಾಗಿದೆ. ನೆಮ್ಮದಿಯ ಜೀವನ ನಡೆಸಲು ಸಹಾಯ ಮಾಡಿದ ಸರ್ಕಾರಕ್ಕೆ ಕೃತಜ್ಞೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರಾದ ಜಿ.ಎಸ್.ಪಾಟೀಲ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ, ಜಿಲ್ಲಾ ಪೋಲಿಸ್ ಅಧೀಕ್ಷಕರ ಬಿ.ಎಸ್.ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಎಲ್.ಡಿ.ಚಂದಾವರಿ ಹಾಜರಿದ್ದರು. ಆಹಾರ ಇಲಾಖೆ ಉಪನಿರ್ದೇಶಕ ಗಂಗಪ್ಪ ಎಂ. ಅವರು ಅತಿಥಿಗಳನ್ನು ಸ್ವಾಗತಿಸಿದರು. ಜಿಲ್ಲಾ ಖಜಾನೆ ಉಪನಿರ್ದೇಕ ಹರಿನಾಥಬಾಬು ವಿ ವಂದಿಸಿದರು. ಬಾಬಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

Related posts

ಸಹಕಾರ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ ಅವರಿಂದ ಪ್ರಗತಿ ಪರಿಶೀಲನಾ ಸಭೆ

satyadarshana

ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿನೀಯ : ಅಕ್ಷಯ ಪಾಟೀಲ

satyadarshana

ಶಿಕ್ಷಣದಲ್ಲಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಿ.

satyadarshana

Leave a Comment