Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ರೋಣ ಮತಕ್ಷೇತ್ರದ ಚುನಾವಣೆಯ ಸತ್ಯದರ್ಶನ.

 

ರೋಣ : ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳ, ಪ್ರಜಾಪ್ರಭುತ್ವವು ಜೀವಂತವಾಗಿರಲು ಮತದಾರರು ಜಾಗೃತಿಯಿಂದ ತಪ್ಪದೇ ಮತದಾನ ಮಾಡಬೇಕು. ಈ ದಿಸೆಯಲ್ಲಿ 2023 ರ ಮೇ ನಲ್ಲಿ ಜರಗುವ ಚುನಾವಣೆಯ ಅನಾವರಣ ಪತ್ರಿಕಾ ಸಮೀಕ್ಷೆಯಿಂದ ಹೊರಬಂದಿರುವ ಸತ್ಯದರ್ಶನವಿದು.

ಎಂಬತ್ತರ ದಶಕದ ಉತ್ತರಾರ್ಥಾದಲ್ಲಿ ಮೌಲ್ಯಯುತ ರಾಜಕಾರಣ ಅದರೊಂದಿಗೆ ನಾಡಿನಲ್ಲಿ ಮೌಲ್ಯಾದರ್ಶಗಳು ನೆಲೆಗೊಂಡಿದ್ದ ಪ್ರತಿನಿಧಿಗಳ ಪರಂಪರೆಯೇ ಇತ್ತು. ನಂತರ ಕಾಲಘಟ್ಟದಲ್ಲಿ ಕೇವಲ ಅಧಿಕಾರ ಲಾಲಸೆಯಿಂದ ರಾಜಕೀಯಕ್ಕೆ ಬಂದವರನ್ನು ಕಾಣುತ್ತೇವೆ.

ಈ ಹಿನ್ನಲೆಯಲ್ಲಿ ಕೆಲ ಮೌಲ್ಯಯುತ ವ್ಯಕ್ತಿಗಳು ಹಿಂದಕ್ಕೆ ಸರಿದಿರುವುದನ್ನು ದೇಶದ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಜ್ಯರಾಜಕಾರಣದಲ್ಲೂ ಇದ್ದು ಇದಕ್ಕೆ ನಮ್ಮ ರೋಣ ಮತಕ್ಷೇತ್ರವು ಹೊರತಾಗಿಲ್ಲ.

1989 ರಿಂದ ಬಂದಿರುವ ಚುನಾವಣೆಗಳೆಲ್ಲವೂ ಮೌಲ್ಯಯುತ ಚುನಾವಣೆಗಳಾಗಿರದೇ ಹಣ, ಹೆಂಡಗಳ ಹೊಳೆಯನ್ನೆ ಹರಿಸಿದ ವಿಪರ್ಯಾಸದ ಸ್ಥಿತಿ ಹೇಳತೀರದು. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ದೊಡ್ಡಮೇಟಿ ಮನೆತನದ ಹಿರಿಯ ಕುಡಿ ಜ್ಞಾನದೇವ ದೊಡ್ಡಮೇಟಿ ಈ ಅವಧಿಯ ಚುನಾವಣೆಯಲ್ಲಿ ಸೋಲುಣ್ಣುವ ಮೂಲಕ ರಾಜಕಾರಣದಿಂದಲೇ ಹಿಂದಕ್ಕೆ ಸರಿದ ಸಂದರ್ಭದಲ್ಲಿ,

ಕಾಂಗ್ರೆಸನಿಂದ ಜಿ.ಎಸ್. ಪಾಟೀಲ ರೋಣ ಮತಕ್ಷೇತ್ರವನ್ನು ಪ್ರತಿನಿಧಿಸಿದ್ದು ನಿರಂತರವಾಗಿ ಚುನಾವಣೆಗೆ ಕಾಂಗ್ರೆಸ ಅಭ್ಯರ್ಥಿಯಾಗಿ ಕಾಣಿಸಿಕೊಂಡಿರುವ ಇವರು ಕ್ಷೇತ್ರದ ಜನತೆಯಿಂದ ಸಾವಿರ ಕೆರೆಗಳ ಸರದಾರ ಅಭಿವೃದ್ಧಿಯ ಹರಿಕಾರ ಎಂದು ಕರೆಯಿಸಿಕೊಂಡಿರುವ ಪಾಟೀಲರು.

ಈ ಕ್ಷೇತ್ರದಲ್ಲಿ ಕುರುಬ ಜನಾಂಗದ ಮತಗಳೇ ನಿರ್ಣಾಯಕ ಹಂತದಲ್ಲಿರುವದರಿಂದ ಮಧ್ಯದಲ್ಲಿ ಕೆಲವರು ನಿಂತು ಓಟನ್ನು ಒಡೆಯಲಾರಂಭಿಸಿದ್ದು ಒಂದಡೆಯಾದರೆ, ಇನ್ನೊಂದೆಡೆ ಒಮ್ಮೆ ಒಬ್ಬವ್ಯಕ್ತಿ ಒಂದು ಪಕ್ಷ ನಿರಂತರವಾಗಿ ಆಯ್ಕೆಯಾಗದೇ ನಾನೊಮ್ಮೆ ನೀನೊಮ್ಮೆ ಎಂದು ಮಾತಾಡಿಕೊಂಡು ಬರುವಂತಿದೆ.

ಒಮ್ಮೆ ಕುರುಬ ಮತ ಸೆಳೆಯುವ ರವಿದಂಡಿನ ಪ್ರತಿನಿದಿಸಿ ಆಗೊಮ್ಮೆ, ಈಗೊಮ್ಮೆ ಅವರಿಗೊಮ್ಮೆ ಇವರಿಗೊಮ್ಮೆ ಗೆಲವು ತಂದುಕೊಟ್ಟಿರುವುದು ಮತಕ್ಷೇತ್ರದಲ್ಲಿನ ಇತಿಹಾಸವೆಂದೇ ಹೇಳಬೇಕು. ಈ ಬಾರಿ ಅಂತಹ ಕುರುಬ ಮತ ಸೆಳೆಯುಲು ಬಂದಿರುವ ಜೋಕರ್ ಆನೆಕಲ್ ದೊಡ್ಡಯ್ಯ.

ಈ ಬಾರಿಯ ಚುನಾವಣಿಯಲ್ಲಿ ಸಾವಿರ ಕೆರೆಗಳ ಸರ್ಧಾರ ಎನಿಸಿರುವ ಜಿ. ಎಸ್. ಪಾಟೀಲರಿಗೆ ಜೋಕರ್ ಸ್ಥನಾದ ಆನೇಕಲ್ ದೊಡ್ಡಯ್ಯ ವರವಾಗಿ ಪರಿಣಮಿಸಬಹುದು ಎಂದು ಪತ್ರಿಕೆ ನಡೆಸಿದ ಸಂದರ್ಶನದಿಂದ ತಿಳಿದು ಬಂದಿದೆ.

ಈ ಭಾಗದ ಜನರ ಮತ ಸೆಳೆಯಲು ಮೊದಲು ಜೆ.ಡಿ.ಎಸ್. ಎಂದು ಹೇಳಿಕೊಂಡು ಬಂದ ಆನೇಕಲ್ ದೊಡ್ಡಯ್ಯ ಈಗ ಆಮ್ ಆದ್ಮಿ ಎಂಬ ಕಸಬರಿಗೆ ಚಿಹ್ನೆ ಆಯ್ಕೆ ಮಾಡಿಕೊಂಡು ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಿ ಕೊನೆಗೆ ಚಿಹ್ನೆಯಂತೆ ಆಗುವ ಸಾಧ್ಯತೆ ಇದೆ ಎಂದು ಆಮ್ ಆದ್ಮಿ ಪಾರ್ಟಿಯಲ್ಲಿದ್ದು ಕೆಲದಿನ ದೊಡ್ಡಯ್ಯನೊಂದಿಗೆ ತಿರುಗಾಡಿ ದೊಡ್ಡ ನಿಷಾ ಅದಿ ನಡಿ ಎಂದು ತಿರಸ್ಕರಿಸಿದವರು ತಿಳಿಸಿದ್ದು ಚುನಾವಣೆಯ ಮುನ್ನವೇ ಫಲಿತಾಂಶದ ವರದಿಗೆ ಸಾಕ್ಷಿಯಾದಂತಿದೆ.

ಈ ಹಿಂದಿನ ಅವಧಿಯಲ್ಲಿ ಬಂಡಿಯಿಂದ ಅಂತಹ ಸುಧಾರಣೆಗಳೇನು ಕಂಡುಬಾರದೆ ಇರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಬಂಡಿ ತನ್ನ ಕೀಲ ಕಿತ್ತಿಸಿಕೊಂಡು ಒಂದು ಕಡೆ ಸ್ಥಿರವಾಗಿ ನಿಲ್ಲುವ ಸಾಧ್ಯತೆ ಇದೆ ಎನ್ನುವುದು ಮತದಾರರ ಅಭಿಪ್ರಾಯವಾಗಿದೆ.

1989,1999 ಮತ್ತು 2013 ರಲ್ಲಿ ಜಿ.ಎಸ್. ಪಾಟೀಲರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಗೆಲವು ಸಾಧಿಸಿದ್ದು 2023ರ ಚುನಾವಣೆಯಲ್ಲಿ ಅವರ ಗೆಲವು ನಿಶ್ಚಿತ ಎಂಬ ವಿಚಾರವನ್ನು ಕ್ಷೇತ್ರದೆಲ್ಲಡೆ ಮತದಾರರು ಹೇಳುತ್ತಿದ್ದಾರೆ.

ಬಿ.ಜೆ.ಪಿ. ಜೆ.ಡಿ.ಎಸ್. ಆಮ್ ಆದ್ಮೀ ಪಕ್ಷದಿಂದ ಸಮರ್ಥ, ಸದೃಢ ಸಶಕ್ತ ಕಾರ್ಯಕರ್ತರನ್ನು ಜಿ. ಎಸ್. ಪಾಟೀಲರು ಸೆಳೆಯುವ ಮೂಲಕ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ.

ಜೆ.ಡಿ.ಎಸ್. ಪಕ್ಷವು ಅಲ್ಪ ಸಂಖ್ಯಾತರ ಮತ ಸೆಳೆದರೆ, ಆನೆಕಲ್ಲ ದೊಡ್ಡಯ್ಯ ಕುರುಬ ಜನಾಂಗದ ಮತ ಸೆಳೆದರೆ ರಾಷ್ಟ್ರೀಯ ಪಕ್ಷ ಬಿ.ಜೆ.ಪಿ. ಕಾಂಗ್ರೆಸ್ ಹಣಾ ಹಣಿ ಇದು.

ಈ ಜಿದ್ದಾ ಜಿದ್ದಿಯಲ್ಲಿ ಕಾಂಗ್ರೇಸ್ ಪಕ್ಷವನ್ನು ಪ್ರತಿನಿಧಿಸಿರುವ ಜಿ.ಎಸ್. ಪಾಟೀಲರ ಗೆಲವು ನಿಶ್ಷಿತ ಎಂಬುವುದು ಜನ ಮತ ಗಣನೆ.

ಒಟ್ಟಾರೆಯಾಗಿ ರಾಷ್ಟ್ರೀಯ ಪಕ್ಷಗಳಾದ ಹಾಲಿಶಾಸಕ ಕಳಕಪ್ಪ, ಮಾಜಿ ಶಾಸಕ ಪಾಟೀಲರ ಮಧ್ಯ ಜಿದ್ದಾ ಜಿದ್ದಿಯಲ್ಲಿ ಯಾರೇ ಗೆಲುವು ಸಾಧಿಸಿದರೂ ಅತಿ ಕಡಿಮೆ ಅಂತರದಲ್ಲಿ ಗೆಲ್ಲುವರೆಂಬುವುದು ಖಚಿತ ಕಾದು ನೋಡಬೇಕಿದೆ. ಮೇ 10 ಕ್ಕೆ ಮತದಾರನು ತನ್ನ ಅಮೂಲ್ಯಮತವನ್ನು ಮೌಲ್ಯಕರಿಸುವ ಮೂಲಕ ಒಬ್ಬರನ್ನು ಆಯ್ಕೆ ಮಾಡುವುದು ಖಚಿತ ಕ್ಷೇತ್ರದಲ್ಲಿ ಮತದಾನ ಉಚಿತ ಪಾಟೀಲರ ಗೆಲುವು ನಿಶ್ಷಿತ. ಎಂಬುವುದೇ ಮತದಾರನ ನಿಲುವಾಗಿದೆ.

Related posts

ಗ್ರಾಮೀಣ ಪ್ರದೇಶದ ಅಂಗಡಿಗಳಿಗೆ ಅಕ್ರಮ ಮದ್ಯ ಸಾಗಾಣಿಕೆ : ಸಂಪರ್ಕಕ್ಕೆ ಸಿಗದ ಅಬಕಾರಿ ನಿರೀಕ್ಷಿಕರು

satyadarshana

ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023 ಸಲಹೆ ದೂರುಗಳಿಗಾಗಿ ಸಹಾಯವಾಣಿ

satyadarshana

ಮಹಾರಾಷ್ಟ್ರ ಬಿಕ್ಕಟ್ಟು ‘ಸುಪ್ರೀಂ’ಗೆ: ಭಿನ್ನರಿಗೆ ಶಿವಸೇನಾ ಬೆದರಿಕೆ

satyadarshana

Leave a Comment