Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಕೆರೆ ತುಂಬುವ ಯೋಜನೆಗೂ ಹಾಲಪ್ಪ ಆಚಾರ್ ಗೂ ಸಂಬಂಧ ಇಲ್ಲ: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ 

    ಓಟಿನ ರಾಜಕಾರಣಕ್ಕಾಗಿ ಹಾಲಪ್ಪ ಸುಳ್ಳು                 ಹೇಳುತ್ತಿದ್ದಾನೆ

ಯಲಬುರ್ಗಾ : ಕೊಪ್ಪಳ ಏತ ನೀರಾವರಿ ಯೋಜನೆ ಭಾಗವಾದ ಕೆರೆ ತುಂಬುವ ಯೋಜನೆ ಅನುಮೋದನೆಗೊಂಡಿದ್ದು. ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ. ಹೊರತು ಇದರಲ್ಲಿ ಸಚಿವ ಹಾಲಪ್ಪ ಆಚಾರ್ ಪಾತ್ರ ಇಲ್ಲ. ಕೇವಲ ಓಟಿನ ರಾಜಕಾರಣಕ್ಕಾಗಿ ಜನರ ಮುಂದೆ ಸುಳ್ಳು ಭಾಷಣ ಮಾಡುತ್ತಿದ್ದಾನೆ ಎಂದು. ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು

 ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ. ವಿವಿಧ ಸಾಮಾಜಿಕ ಜಾಲತಾಣ ಕಾರ್ಯಕರ್ತರ ನೇಮಕಾತಿ ಪತ್ರ ಹಾಗೂ ಬೈಕ್ ರ‍್ಯಾಲಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುನಗುಂದ. ಕುಷ್ಟಗಿ. ಯಲಬುರ್ಗಾ. ರೋಣ. ಬಾದಾಮಿ. ತಾಲೂಕುಗಳಿಗೆ ಒಟ್ಟು 78 ಕೆರೆಗಳಿಗೆ ಆಲಮಟ್ಟಿ, ನದಿಯಿಂದ ಕೆರೆಗಳಿಗೆ ನೀರು ತುಂಬುವ ಯೋಚನೆಗೆ ಅವರ ಸರ್ಕಾರದಲ್ಲಿ ಅನುಮೋದನೆ ನೀಡಲಾಗಿತ್ತು. ಸಿದ್ದರಾಮಯ್ಯ ಸರ್ಕಾರ. ಬಿದ್ದ ನಂತರ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರ ಬಂತು. ಆ ಸಂದರ್ಭದಲ್ಲಿ. ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀರಾವರಿ ಸಚಿವರು ಇದ್ರು ನಾನು ಈ ಯೋಜನೆಗೆ ಅನುದಾನ ಹಿಡಿಸುವ ಮೂಲಕ ಅನುಮೋದನೆ ಮಾಡಿಸಿದ್ದೇವೆ. ಹಾಲಪ್ಪ. ಕೇವಲ ಓಟಿನ ರಾಜಕಾರಣಕ್ಕಾಗಿ. ಜನರ ಮುಂದೆ ದಿಕ್ಕು ತಪ್ಪಿಸುತ್ತಿದ್ದಾನೆ. ಹಿಂದೆ ನನ್ನ ಹೋರಾಟ ನೀರಾವರಿಗಾಗಿ ಈ ಕ್ಷೇತ್ರದ ರೈತರ ಹೊಲಗಳಿಗೆ ನೀರು ತರುತ್ತೇನೆ. ಕೋರ್ಟ್ ನಲ್ಲಿ ನ್ಯಾಯದೀಕರಣ ಇದ್ದರೂ ಜನರ ಮುಂದೆ ಸುಳ್ಳು ಹೇಳಿ ಭಾಷಣ ಮಾಡಿದನು. ನಾನು ಸಿದ್ದರಾಮಯ್ಯ ಅವರು ಕೂಡಿಕೊಂಡು ಕೋರ್ಟಿನಲ್ಲಿ ನ್ಯಾಯಾಧಿಕರಣ ಇರೋದ್ರಿಂದ. ಈ ಭಾಗಕ್ಕೆ ನೀರಾವರಿ ಮಾಡೋದಿಕ್ಕೆ ಬರುವುದಿಲ್ಲ ಕುಡಿಯೋ ನೀರಿಗಾಗಿ. ಕೆರೆ ತುಂಬ ಸುವುದಕ್ಕೆ ಮಾತ್ರ. ನಾಯಕರಣದಲ್ಲಿ ಅವಕಾಶ ಇದ್ದ ಕಾರಣ ಕೆರೆ ತುಂಬಿಸುವುದಕ್ಕೆ ಆದರೂ ಆಗಲಿ ಅಂತ ನಾನು ನಮ್ಮ ತಾಲೂಕಿನ 26 ಕೆರೆಗಳಿಗೆ ನೀರು ತರುವ ಕೆಲಸ ಮಾಡಿದ್ದೇನೆ. ಹಾಲಪ್ಪ ಓಟಿಗಾಗಿ ಕೇವಲ 60 70 ರೂ ಬೆಲೆ ಬಾಳುವ ಸೀರೆಗಳನ್ನು ಜಲ ಯಜ್ಞ ಎಂದು ಹೆಸರು ಹಾಕಿಸಿ ವಿತರಣೆ ಮಾಡುತ್ತಿದ್ದಾನೆ ಕ್ಷೇತ್ರದಲ್ಲಿ ಸೀರೆ ವಿತರಣೆ ಮಾಡಿದರೆ ಓಟು ಹಾಕುತ್ತಾರೆ ಎನ್ನುವ ಭ್ರಮೆ ಆಲಪ್ಪನಿಗೆ ಇದೆ. ಮತದಾರರು ಪ್ರಜ್ಞಾವಂತರಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಒಳ್ಳೆಯ ಜನಪರ ಅಭಿವೃದ್ಧಿ ಮಾಡುವಂತಹ ವ್ಯಕ್ತಿಗೆ ಮತ ನೀಡುವ ಮೂಲಕ ತಾಲೂಕನ್ನು ಅಭಿವೃದ್ಧಿ ಮಾಡಿ ಎಂದರು

 ಕೊಪ್ಪಳ ಏತ ನೀರಾವರಿ ಯೋಜನೆ. ಅದರ ಭಾಗವಾದ ಕೆರೆ ತುಂಬ ಯೋಜನೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 78 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು ನಂತರ ಮೈತ್ರಿ ಸರ್ಕಾರದಲ್ಲಿ ಅದಕ್ಕೆ ಅನುದಾನ ಬಿಡುಗಡೆ ಮಾಡುವ ಮೂಲಕ ನಮ್ಮ ಸರ್ಕಾರ ನಾನು ನಮ್ಮ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಾಡಲಾಗಿದೆ. ಹಾಲಪ್ಪ ಓಟಿನ ನ ರಾಜಕಾರಣಕ್ಕಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾನೆ. ಆತನಿಗೆ ಯಾವುದೇ ಕಾನೂನು ನೀರಾವರಿ ಬಗ್ಗೆ ಗೊತ್ತಿಲ್ಲ ಅಂಥವರ ಬಗ್ಗೆ ನಾನು ಮಾತನಾಡುವುದಿಲ್ಲ

ಬಸವರಾಜ್ ರಾಯರೆಡ್ಡಿ ಮಾಜಿ ಶಿಕ್ಷಣ ಸಚಿವ

Related posts

ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಮಾಜ ಸುಧಾರಣೆ ಸಾಧ್ಯ ಪ್ರತಿಯೊಬ್ಬರ ಜೀವನದಲ್ಲಿ ಗುರಿ ಮತ್ತು ಗುರು ಅನಿವಾರ್ಯ: ಸಚಿವ ಸಿ.ಸಿ.ಪಾಟೀಲ

satyadarshana

ಸಂಪಾದಕರ ಸಂಘದ ಕೊಪ್ಪಳ ಘಟಕಕ್ಕೆ ನೂತನ ಸಾರಥಿಗಳು ಅಧ್ಯಕ್ಷರಾಗಿ ಶ್ರೀನಿವಾಸ, ಕಾರ್ಯದರ್ಶೀಯಾಗಿ ಖಲೀಲ್ ಉಡೇವು ಆಯ್ಕೆ

satyadarshana

ಅತೀವೃಷ್ಠಿಯಿಂದ ಗದಗ ಜಿಲ್ಲೆಯಲ್ಲಿ ಅಂದಾಜು 811.26 ಕೋಟಿ ಹಾನಿ.

satyadarshana

Leave a Comment