ಕೊಪ್ಪಳ :ಮಾರ್ಚ್ 10: ಕೊಪ್ಪಳ ಜಿಲ್ಲಾ ರಜತ ಮಹೋತ್ಸವ ಅಂಗವಾಗಿ ಮಾರ್ಚ 10ರಂದು ಆಯೋಜಿಸಲಾಗಿದ್ದ ಕಲಾ ತಂಡಗಳ ಮೆರವಣಿಗೆಗೆ ಸಂಸದರಾದ ಕರಡಿ ಸಂಗಣ್ಣ ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.
ಬೆಳ್ಳಿ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ನಗರದ ತಾಲ್ಲೂಕು ಕ್ರೀಡಾಂಗಣಕ್ಕೆ ಕಲಾತಂಡದವರು ಬೆಳಗ್ಗೆ ಆಗಮಿಸಿದ್ದರು. ಮೆರವಣಿಗೆಗೆ ಚಾಲನೆ ಸಿಗುತ್ತಿದ್ದಂತೆ ಕಲಾ ತಂಡಗಳು ಸಾಲಾಗಿ ಹೊರಟವು.
ಮೆರವಣಿಗೆಯು ತಾಲ್ಲೂಕು ಕ್ರೀಡಾಂಗಣದಿAದ ಹೊರಟು ಸಾಲಾರ್‌ಜಂಗ್ ರಸ್ತೆ, ಗಡಿಯಾರ ಕಂಬ, ಜವಾಹರ ರೋಡ, ಅಶೋಕ ವೃತ್ತ, ಕೇಂದ್ರೀಯ ಬಸ್ ನಿಲ್ದಾಣದ ಮಾರ್ಗವಾಗಿ ಗದಗ ರಸ್ತೆಯ ಬನ್ನಿಕಟ್ಟಿವರೆಗೆ ಅದ್ದೂರಿಯಾಗಿ ಸಾಗಿತು.
ಮೆರವಣಿಗೆಯಲ್ಲಿ ನಿಂಗಪ್ಪ ಮಾಗಳಾದ, ಶಿವಪ್ಪ ಬೆಂಚಮಟ್ಟಿ, ಮಹಾಂತೇಶ ಕುಣಮಿಂಚಿ, ರೇವಣಪ್ಪ ಹಿರೇಕುರುಬರ ಅವರ ಮತ್ತು ಮಾರುತೇಶ್ವರ ಡೊಳ್ಳು ಕುಣಿತ ಮತ್ತು ಸಾಂಸ್ಕೃತಿಕ ಸಂಘದವರೊAದಿಗೆ ಡೊಳ್ಳು ಭಾರಿಸಿ ಸಂಸದರು ಮತ್ತು ಶಾಸಕರು ಗಮನ ಸೆಳೆದರು.
*ಹೆಜ್ಜೆ ಹಾಕಿದ ಕಲಾವಿದರು:* ದೊಡ್ಡ ಯಮನೂರಪ್ಪ ಮತ್ತು ದೇವಪ್ಪ ಕಟಬಿ ಅವರ ಕರಡಿ ಮಜಲು, ಮುತ್ತಪ್ಪ ಕಳಕಪ್ಪ ಭಜಂತ್ರಿ ಅವರ ಜಾಂಜಮೇಳ ಹಾಗೂ ಹಿರೇಮಣ್ಣಾಪೂರದ ಪುಟ್ಟರಾಜ ಸಂಗೀತ ಕಲಾ ಟ್ರಸ್ಟ್ ಅವರಿಂದ ಹೆಜ್ಜೆಮೇಳ ಜೋರಾಗಿತ್ತು.
*ಮಾರ್ದನಿಸಿದ ಹಲಗೆ ವಾದನ*: ಚೆನ್ನಪ್ಪ ಭಜಂತ್ರಿ ಯಮನೂರಪ್ಪ ಭಜಂತ್ರಿ ರಾಮಪ್ಪ ಭಜಂತ್ರಿ ಅವರ ಹಲಗೆ ವಾದನ, ನೀಲಪ್ಪ ಹರಿಜನ ಮತ್ತು ಬಸಪ್ಪ ಗಡಗಲದಿನ್ನಿ ಅವರ ಕಣಿ ಹಲಗೆ ವಾದನವು ಇದೆ ವೇಳೆ ಮಾರ್ಧನಿಸಿತು.
*ವಿಶೇಷ ಆಕರ್ಷಣೆ:* ಹನುಮಂತಪ್ಪ ಬಬ್ಬಲ್ ಯಮನೂರಪ್ಪ ಹುಳ್ಳಿ ಅವರು ಮೋಜಿನ ಗೊಂಬೆಯ ಮೂಲಕ ಮತ್ತು ಎಸೋಫ ಅವರು ಮರಗಾಲು ಹಾಕಿ, ಬಸವರಾಜ ವಿಭೂತಿ ಕಲ್ಯಾಣಂ ಅವರ ಹಗಲುವೇಷದಲ್ಲಿ ವಿಶೇಷ ಆಕರ್ಷಣೆಯಾಗಿದ್ದರು.
*ಗಮನ ಸೆಳೆದರು:*ವೀರಗಾಸೆಯೊಂದಿಗೆ ವೀರೇಶ ಮುಂಡಾಸದ ಮತ್ತು ಹೆಚ್ ಎಂ ವೀರಯ್ಯಸ್ವಾಮಿ ಅವರು, ನಂದಿಧ್ವಜ ಹಿಡಿದು ಶರಣಯ್ಯ ಅವರು, ವಸಂತ ಕೆ ಅವರು ಕಹಳೇ ಊದುತ್ತ, ಶಂಕರ ಜಗ್ಗಲಗಿ ಅವರು ಜಗ್ಗಲಗಿ ಭಾರಿಸುತ್ತ, ಪರಸಪ್ಪ ಲಮಾಣಿ ಮತ್ತು ಜಮುನಮ್ಮ ಪಮ್ಮಾರ ಅವರು ಲಂಬಾಣಿ ನೃತ್ಯದಲ್ಲಿ ಗಮನ ಸೆಳೆದರು.
*ಕೋಲಾಟದ ಕಳೆ:* ಅಂಬಣ್ಣ ವಡ್ಡರ, ಎನ್ ಕೊಂಗಪ್ಪ ಮತ್ತು ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘದಿAದ ನಡೆದ ಕೋಲಾಟ ಮೆರವಣಿಗೆಯ ಕಳೆ ಹೆಚ್ಚಿಸಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಎಸ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಉಪ ವಿಭಾಗಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ,
ನಗರಸಭೆ ಸದಸ್ಯರಾದ ಮಹೇಂದ್ರ ಛೋಪ್ರಾ, ಮುತ್ತುರಾಜ್ ಕುಷ್ಟಗಿ, ಸೇರಿದಂತೆ ಹಲವು ಗಣ್ಯರು, ಸಾಹಿತಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
