ಕೊಪ್ಪಳ: ಮಾರ್ಚ್ 10: ಕವಿಗಳು ಜನರಿಗೆ ಮುಟ್ಟುವ ರೀತಿ ಕಾವ್ಯ ಬರೆಯಬೇಕು. ಕವಿಗಳಾದವರಿಗೆ ಲೋಕಾವಲೋಕನ ದೃಷ್ಟಿ ಇರಬೇಕು ಎಂದು ಹಿರಿಯ ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅವರು ಹೇಳಿದರು.
ಕೊಪ್ಪಳ ರಜತ ಮಹೋತ್ಸವ-2023ರ ಹಿನ್ನೆಲೆಯಲ್ಲಿ ಮಾರ್ಚ 10ರಂದು ನಗರದ ಸಾಹಿತ್ಯ ಭವನದ ತಿರುಳ್ಗನ್ನಡ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಎಷ್ಟು ಕವಿತೆಗಳು ಜಗದ ಕಣ್ಣು ತೆರೆಯಲು; ಒಂದಾದರು ಸಾಕು’ ಎಂದು ಹೇಳಿದ ಹಿರಿಯ ಕವಿ ಚೆನ್ನವೀರ ಕಣವಿ ಅವರ ಪದ್ಯದ ಸಾಲುಗಳನ್ನು ಪ್ರಸ್ತಾಪಿಸಿದ ಅವರು, ಕವಿತೆಗಳ ಸಂಖ್ಯೆಗಿAತ ಸತ್ವ ಮುಖ್ಯ. ಸತತ ಅಧ್ಯಯನ ಇದ್ದಲ್ಲಿ ಮತ್ತು ಪ್ರತಿಭೆ ಇದ್ದರೆ ಕಾವ್ಯ ಸೃಷ್ಟಿ ಸಾಧ್ಯ ಎಂದು ಕವಿಗಳಿಗೆ ಸಲಹೆ ಮಾಡಿದರು.
ಲೀಸ್ ಪಾಟೀಉರ್ದು ಕಾವ್ಯ ವಾಚನವನ್ನು ಜನ ಸಾಮಾನ್ಯರು ಕೇಳಿ ಪ್ರತಿಕ್ರಿಯಿಸುವ ಪರಿಯನ್ನು ಗಮನಿಸಿದರೆ ಕನ್ನಡದಲ್ಲಿ ಇನ್ನು ಇದು ಬಂದಿಲ್ಲ ಅನಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಚಾರ್ಯರಾಧ ಡಾ.ಶರಣಬಸಪ್ಪ ಕೋಲ್ಕಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿಗಳಾದ ಅಲ್ಲವುದ್ದೀನ್ ಯಮ್ಮಿ, ಮಾಲಾ ಬಡಿಗೇರ, ಲಕ್ಷಿö್ಮದೇವಿ ಪತ್ತಾರ, ಶ್ರೀದೇವಿ ಕೃಷ್ಣಪ್ಪ, ಅಮೃತಾಬಾಯಿ, ಯಶೋಧಾ ಎಂ.ಎನ್, ಪಡಸಾಲೆ ವನಮಾಲೆ, ಮನ್ನಾಪೂರ ಅನ್ನಪೂರ್ಣ, ಬಿ.ವಿ.ರಶ್ಮಿ, ಮಂಜುಳಾ ಶ್ಯಾವಿ, ಲಕ್ಷಿö್ಮ, ಗಿರಿಜಾ ಚಿನಿವಾಲ್, ಲಲಿತಾ ಭಾವಿಕಟ್ಟಿ, ಶ್ರೀನಿವಾಸ ಚಿತ್ರಗಾರ, ಬಿಜಲಿ ಈರಪ್ಪ
, ಶ್ರೀನಿವಾಸ ಅಂಗಡಿ, ಲಿಂಗಾರೆಡ್ಡಿ ಆಲೂರು, ಶೇಖಬಾಬು ಶಿವಪೂರ, ಹನುಮಂತಪ್ಪ ಉಪ್ಪಾರ, ನವಲಹಳ್ಳಿ ಮೌನೇಶ, ಅಮರೇಗೌಡ ಜಾಲಿಹಾಳ, ಚನ್ನಬಸಪ್ಪ ಆಸ್ಪಲ್ಲಿ, ಅಶೋಕ ಹೊಸಮನಿ, ನಾಗೇಶ ನಾಯಕ, ಗಂಗಾಧರ ಅವಟೇರ್, ಶರಣಪ್ಪ ಕೊಪ್ಪದ, ವೀರಣ್ಣ ಕರಮುಡಿ, ಕೆ.ಬಿ.ಬ್ಯಾಳಿ, ಅಕ್ಬರ್ ಕಾಲಿಮಿರ್ಚಿ, ವಿಮಲಾ ಇನಾಮಾದಾರ್, ಸಿದ್ದಲಿಂಗಪ್ಪ ಕೋಟ್ನಿಕಲ್, ಈಶ್ವರ ಹತ್ತಿ, ಶಿವಕುಮಾರ ಮಾಲಿಪಾಟೀಲ, ಶರಣಪ್ಪ ನಿಡಶೇಶಿ, ಹನುಮೇಶ ಗುಮಗೇರಾ, ನಟರಾಜ ಸೋನಾರ, ಚಂದಪ್ಪ ಹಕ್ಕಿ, ಮನೋಹರ್ ಬೋಂದಡೆ, ಎಸ್.ವಿ.ಡಾಣಿ, ರಾಘವೇಂದ್ರ ದಂಡಿನ್, ವಾಣಿಶ್ರೀ ಪಾಟೀಲ, ಕೋಮಲಾ ಕುದರಿಮೋತಿ, ನಾಗರಾಜ ಹಿರಾ, ನಾಗಪುಷ್ಪಾಲತಾ ಕೆ, ದೇವೇಂದ್ರಪ್ಪ ಜಾಜಿ, ಸುರೇಶ ಕಂಬಳಿ, ಮಹೇಶ ಬಳ್ಳಾರಿ, ಪವನಕುಮಾರ ಗಂಡೂರ ಹಾಗೂ ಶಿವನಗೌಡ ಪೊಲ ಅವರು ಪದ್ಯ ವಾಚನ ಮಾಡಿದರು.
