Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಹಣದ ವಿಚಾರಕ್ಕೆ ತಂದೆಯಿಂದಲೇ ಮಗನ ಮೇಲೆ ಬರ್ಬರ ಹಲ್ಲೆ.

 

ಗಜೇಂದ್ರಗಡ : ( ಸತ್ಯ ದರ್ಶನ  ) ನ -17.ಗಜೇಂದ್ರಗಡ ಸಮೀಪದ ಸೂಡಿ ಗ್ರಾಮದಲ್ಲಿ ಬುಧವಾರ ರಾತ್ರಿ ತಂದೆಯೇ ಮಗನ ಮೇಲೆ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಜರುಗಿದೆ.

ಹೊಲದ ಮಾಲೀಕರ ಹತ್ತಿರ ತಾವು ಬೆಳೆದ ಮೆಕ್ಕೆಜೋಳದ ಪಟ್ಟಿಯ ದುಡ್ಡನ್ನು ಕೇಳಲು ತಂದೆ ಹೋದ ಸಂದರ್ಭದಲ್ಲಿ ಮಾಲೀಕ ನಿನ್ನ ಮಗ ಬಂದು ದುಡ್ಡು ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದಾರೆ. ಆದ್ದರಿಂದ ನನಗೆ ಕೇಳದೆ ನೀನೇಕೆ ಮಾಲೀಕರ ಬಳಿ ದುಡ್ಡು ತೆಗೆದುಕೊಂಡು ಬಂದಿದ್ದೀಯಾ ಎಂದು ತಂದೆ ಮಗನ ನಡುವೆ ಜಗಳವಾಗಿದೆ.

ಸಿಟ್ಟಿಗೆದ್ದಿದ್ದ ತಂದೆ ನಾಗಪ್ಪ ರಾತ್ರಿ 18ವರ್ಷ ವಯಸ್ಸಿನ ಅಣ್ಣಪ್ಪ ನಾಗಪ್ಪ ಹಾದಿಮನಿ ಮಲಗಿದ ಸಂದರ್ಭದಲ್ಲಿ ತಂದೆ ನಾಗಪ್ಪ ಕೊಡಲಿಯಿಂದ ಮಗನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿರುವ ಕುರಿತು ಸ್ವತಃ ತಾನೇ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ.

ಹಲ್ಲೆಗೆ ಒಳಗಾದ ಅಣ್ಣಪ್ಪ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Related posts

ಕೊಪ್ಪಳ ಜಿಲ್ಲಾ ರಜತ ಮಹೋತ್ಸವ: ಗಮನ ಸೆಳೆದ ಮೆರವಣಿಗೆ —

satyadarshana

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದವರಿಗೆ ಗಲ್ಗೇರಿಸಿ.

satyadarshana

ಮುಂಬೈ ಗೆಲುವಿನಿಂದ ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಔಟ್

satyadarshana

Leave a Comment