Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ ಜಾಗೃತ ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ

ಗದಗ  ನವೆಂಬರ್ 3: ಕರ್ನಾಟಕ ಲೋಕಾಯುಕ್ತ ನಿಬಂಧಕರ ಆದೇಶದಂತೆ ಗದಗ ಜಿಲ್ಲೆಯಲ್ಲಿರುವ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಭ್ರಷ್ಟಾಚಾರ ನಿಯಂತ್ರಣ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮ ಕೈಗೊಳ್ಳಲಾಯಿತು. 

          ನವೆಂಬರ್ 2 ರಂದು ಗದಗ ಶಹರದ ಕೆ.ಎಚ್.ಪಾಟೀಲ ಸರ್ಕಲ್ ಹತ್ತಿರ ಇರುವ ಗೂಡ್ಸ ವಾಹನ ಚಾಲಕರು, ಮಾಲಕರು ಹಾಗೂ ಹಾಜರಿದ್ದ ಸಾರ್ವಜನಿಕರಿಗೆ “ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ” ಜಾಗೃತ ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸಪೆಕ್ಟರ್ ರವಿ ಪುರುಶೋತ್ತಮ್ ಅವರು ಗೂಡ್ಸ ವಾಹನ ಚಾಲಕರು, ಮಾಲಕರು ಹಾಗೂ ಸಾರ್ವಜನಿಕರಿಗೆ ಭ್ರಷ್ಟಾಚಾರ ವಿರುದ್ದದ ಜಾಗೃತಿಯನ್ನು ಮೂಡಿಸಿ ಕಾರ್ಯಕ್ರಮದ ಬಗ್ಗೆ ತಿಳುವಳಿಕೆ ನೀಡಿದರು. ಲೋಕಾಯುಕ್ತ ಗದಗ ಠಾಣೆಯ ಸಿಬ್ಬಂದಿ ಎಮ್.ಎಸ್.ಗಾರ್ಗಿ, ಸಿ.ಎಚ್.ಸಿ ರವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಎಚ್.ಬಿ.ಲಕ್ಕನಗೌಡ್ರ ಸಿ.ಎಚ್.ಸಿ, ಎಸ್.ಎಸ್.ಅಮರಶೆಟ್ಟಿ ಸಿಎಚ್‍ಸಿ, ಮುತರಡ್ಡಿ ಬಾರಡ್ಡಿ ಸಿಪಿಸಿ, ವಿ.ಬಿ.ಅರಿಶಿಣದ ಎಎಚ್‍ಸಿ, ಆರ್.ಎಮ್.ಹಳ್ಳಳ್ಳಿ ಎಪಿಸಿ ರವರು ಹಾಜರಿದ್ದರು.

 ಅದೇ ದಿವಸದಂದು ನರಗುಂದದ ರೋಟರ್ಯಾಕ್ಟ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ” ಜಾಗೃತ ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಪರ್ವತಗೌಡ ಕೆಂಚನಗೌಡ್ರ, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಎ.ಆರ್.ಕಲಾದಗಿ ಪೊಲೀಸ್ ಇನ್ಸಪೆಕ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿ ಸದರಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಶಂಕರ ಎಂ. ರಾಗಿ ಅವರು ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಭ್ರಷ್ಟಾಚಾರದ ವಿರುದ್ದ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೊಧಿಸಿದರು. ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಿಬ್ಬಂದಿ ಪಿ.ಎಚ್.ಗುಬ್ಬಿ ಸಿಎಚ್‍ಸಿ, ಎಸ್.ವಿ.ನೈನಾಪೂರ ಎಪಿಸಿ ರವರು ಹಾಜರಿದ್ದರು.

 ನರಗುಂದದ ಸರಕಾರಿ ಪದವಿ ಪೂರ್ವ ಕಾಲೇಜ್ ಹೈಸ್ಕೂಲ್‍ದಲ್ಲಿ ಅಭಿವೃದ್ದಿ ಹೊಂದಿದ ರಾಷ್ಟ್ರಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ ಜಾಗೃತ ಸಪ್ತಾಹದ ಅಂಗವಾಗಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಎಫ್.ಎಮ್.ಹಾಡಕರ, ಶಿಕ್ಷಕರು, ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದು, ಎಸ್.ಜಿ.ಮಣ್ಣೂರ ಮಠ ಶಿಕ್ಷಕರು ಸ್ವಾಗತಿಸಿದರು. ಎ.ಆರ್.ಕಲಾದಗಿ ಪೊಲೀಸ್ ಇನ್ಸಪೆಕ್ಟರ್ ಕ.ಲೋ ಗದಗ ರವರು ಕಾರ್ಯಕ್ರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಪೊಲೀಸ್ ಉಪಾಧೀಕ್ಷಕರಾದ ಶಂಕರ ಎಂ. ರಾಗಿ ಭ್ರಷ್ಟಾಚಾರ ವಿರುದ್ದ ಪ್ರತಿಜ್ಞಾ ವಿಧಿಯನ್ನು ಬೊಧಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರೀದೇವಿ ಬಿ ಹರಪನಹಳ್ಳಿ, ಉಪ ಪ್ರಾಚಾರ್ಯರು, ಲೋಕಾಯುಕ್ತ ಸಿಬ್ಬಂದಿ ಪಿ.ಎಚ್.ಗುಬ್ಬಿ ಸಿಎಚ್‍ಸಿ, ಎಸ್.ವಿ.ನೈನಾಪೂರ ಹಾಜರಿದ್ದರು.  

Related posts

ದೇಶಾದ್ಯಂತ ಭಾರೀ ಸುದ್ದಿಯಾಗಿರುವ ಲಖೀಂಪುರ ಹಿಂಸಾಚಾರ ಪ್ರಕರಣ ಈಗ ಸುಪ್ರೀಂ ಅಂಗಳ ತಲುಪಿದೆ..

satyadarshana

ಗಜೇಂದ್ರಗಡದಲ್ಲಿ ಆಧಾರ ತಿದ್ದುಪಡಿ ಕೇಂದ್ರ ಉದ್ಘಾಟನೆ.

satyadarshana

ರಾಜಧಾನಿಯಲ್ಲಿ‌ ನಡೆದಿದ್ದ ‘ಬೃಹತ್ ಐಟಿ ದಾಳಿ‌’ಯಲ್ಲಿ ಬಯಲಾದ ಅಕ್ರಮ ಎಷ್ಟು ಗೊತ್ತೇ.?

satyadarshana

Leave a Comment