.
ನಾಗಾವಿಯ ಗ್ರಾಮೀಣಾಭಿವೃದ್ಧಿ ಮತು ಪಂಚಾಯತರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದಲ್ಲಿ ಬುಧವಾರ ಜರುಗಿದ ಸ್ವಗ್ರಾಮ ಫೆಲೋಶಿಪ್ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸ್ವಗ್ರಾಮ ಫೆಲೋಶಿಪ್ ಯೋಜನೆಯು ನಮ್ಮ ಗ್ರಾಮ ನಮ್ಮ ಹೆಮ್ಮೆ ಧ್ಯೇಯ ವಾಕ್ಯದೊಂದಿಗೆ ಆರಂಭಗೊಂಡಿದೆ. ಗ್ರಾಮೀಣ ಪ್ರದೇಶದ ಜನರು ತಮ್ಮದೇ ಆದಂತಹ ಸಂಸ್ಕøತಿ, ಸಂಪ್ರದಾಯದ ಮೂಲಕ ವ್ಯವಸಾಯದಲ್ಲಿ ತೊಡಗಿರುತ್ತಾರೆ. ಸಾವಯವ ಬಗ್ಗೆ ಇತ್ತಿಚಿಗೆ ಹೆಚ್ಚಿನ ಜಾಗೃತಿ ಮೂಡುತ್ತಿದೆ. ಸಾವಯವ ಉತ್ಪನ್ನಗಳ ಬಳಕೆ ಅಧಿಕವಾಗಿರುವದರಿಂದ ಸಾವಯವ ಅಂಗಡಿಗಳು ಆರಂಭಗೊಳ್ಳುತ್ತಿವೆ ಎಂದರು.
ಜನೌಷಧಿ ಕೇಂದ್ರಗಳ ಮಾದರಿಯಲ್ಲಿ ಸಾವಯವ ಹಣ್ಣಿನ ಮಳಿಗೆ ಆರಂಭವಾಗಬೇಕು ಈ ಮೂಲಕ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಮತ್ತು ಉತ್ತಮ ಹಣ್ಣುಗಳ ಬಳಕೆಯಿಂದ ಆರೋಗ್ಯಯುತ ಜೀವನಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಮತ ವ್ಯಕ್ತಪಡಿಸಿದ ಅವರು ಕೋವಿಡ್ ರೋಗ ಬಂದು ಕಡಿಮೆಯಾದ ನಂತರ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಅಧಿಕವಾಗಿದೆ ಎಂದರು.
ಸ್ವಗ್ರಾಮ ಫೆಲೋಶಿಪ್ ಸರಿಯಾದ ರೀತಿಯ ಅನುಷ್ಠಾನಕ್ಕಾಗಿ ನಿರಂತರ ಪ್ರಯತ್ನ, ಛಲ ಅಚಲವಾಗಿರಬೇಕು. ಫೆಲೋಶಿಪ್‍ನಿಂದಾಗಿ ದೇಶಿಯ ಆಹಾರ ಪದ್ಧತಿಗೆ ಪ್ರತಿಯೊಬ್ಬರು ಪ್ರೋತ್ಸಾಹಿಸೋಣ. ಸಾವಯವ ಕೃಷಿಕರ ಉತ್ಪನ್ನಗಳ ಸಾಗಾಟ ಸಂದರ್ಭದಲ್ಲಿ ಸಂಸ್ಥೆಯಿಂದ ರಿಯಾಯಿತಿ ದರದಲ್ಲಿ ರೈತರಿಗೆ ಸಹಕರಿಸುವ ಕುರಿತು ಸಂಸ್ಥೆಯಿಂದ ಅನುಕೂಲ ಮಾಡಿಕೊಡಲಾಗುತ್ತಿದೆ. ಇನ್ನೂ ಹೆಚ್ಚಿನ ಸಹಕಾರವನ್ನು ನೀಡಲು ನಮ್ಮ ಸಂಸ್ಥೆ ಸದಾ ಸಿದ್ಧ ಎಂದರು.
ವಿ.ವಿ.ಕುಲಪತಿಗಳಾದ ವಿಷ್ಣುಕಾಂತ ಚಟಪಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಗ್ರಾಮ ಫೆಲೋಶಿಪ್ ಪರಿಕಲ್ಪನೆಯು ನಮ್ಮ ಗ್ರಾಮ ನಮ್ಮ ಹೆಮ್ಮೆ ಎಂಬ ಘೋಷವಾಕ್ಯದೊಂದಿಗೆ ಆರಂಭಿಸಲಾಗಿದೆ. ಇದು ಮೂರು ವರ್ಷಗಳ ನಿರಂತರ ಅನುಷ್ಠಾನ ಯೋಜನೆಯಾಗಿದೆ. ಸ್ವರಾಜ್ಯ ಕಲ್ಪನೆ ಅನಾದಿ ಕಾಲದಿಂದಲೂ ನಮ್ಮ ದೇಶದಲ್ಲಿದ್ದು ಅದರ ಸರಿಯಾದ ಅನುಷ್ಠಾನದಿಂದ ಯಶಸ್ವಿಗೆ ಮುಂದಾಗೋಣ ಎಂದರು.
ಗ್ರಾಮೀಣಾಭಿವೃದ್ಧಿ ವಿ.ವಿ.ಯಲ್ಲ ವಿಧ್ಯಾಭ್ಯಾಸ ಪಡೆದ ವಿಧ್ಯಾರ್ಥಿಗಳೆಲ್ಲರೂ ಗ್ರಾಮೀನ ಭಾಗದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂಬ ಧೃಡಸಂಕಲ್ಪದೊಂದಿಗೆ ಮುನ್ನಡೆಯೋಣ. ಗ್ರಾಮೀಣ ಬೇರು ಜಾಗತಿಕ ಮೇರು ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಕರೇ ನೀಡಿದರು.
ಚಾಣಾಕ್ಯ ವಿಶ್ವವಿದ್ಯಾಲಯ ಸಹಪ್ರಾಧ್ಯಾಪಕ ಪ್ರೋ ಎಂ.ಎಸ್.ಚೈತ್ರಾ ಮಾತನಾಡಿ ನಾವೆಲ್ಲ ಬಾಲ್ಯದಲ್ಲಿ ಹಳ್ಳಿಗಳಲ್ಲಿಯೇ ಹುಟ್ಟಿ ಬೆಳೆದಾಗ ನಮ್ಮ ಬದುಕೆಲ್ಲ ಇಲ್ಲಿಯೇ ಎಂದು ಅರಿತು ಸಂತೋಷವಾಗಿ ಕಾಲ ಕಳೆಯುತ್ತಿದ್ದ ದಿನಗಳಿತ್ತು. ನಮ್ಮ ವಿಧ್ಯಾಭ್ಯಾಸ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಬಂದ ನಾವು ಹಲವಾರು ವರ್ಷಗಳ ನಂತರ ಹುಟ್ಟಿದ ಹಳ್ಳಿಗೆ ಭೇಟಿ ನೀಡಿದಾಗ ಹಳ್ಳಿಯ ಬದುಕು ಅಸಾಧ್ಯವೆನಿಸುತ್ತಿದೆ. ಆದರೆ ಅದು ವಾಸ್ತವವಾಗಿದೆ ಸ್ವಾತಂತ್ರ್ಯ ದೊರೆತಾಗ ದೇಶದಲ್ಲಿ 6.5ಲಕ್ಷ ಇದ್ದ ಗ್ರಾಮಗಳ ಸಂಖ್ಯೆ ಈಗ 5.5ಲಕ್ಷಕ್ಕೆ ಬಂದಿಳಿದಿದೆ. ಈ ಹಿಂದೆ ಹಳ್ಳಿಗಳಿಂದ ನಗರಗಳೂ ಮುನ್ನೆಡಯುತ್ತಿದ್ದವು. ಬದಲಾದ ವಾತಾವರಣದಲ್ಲಿ ನಗರಗಳಿಂದ ಹಳ್ಳಿಗಳು ನಡೆಯುವಂತಹ ಕಾಲ ಬಂದಿದೆ. ಗ್ರಾಮಗಳಲ್ಲಿ ಸರ್ಕಾರದಿಂದ ಅಗತ್ಯದ ಮೂಲಭೂತ ಸೌಕರ್ಯಗನ್ನು ಕಲ್ಪಿಸಿದ್ದಾಗಿಯೂ ಸಹ ನಗರಕ್ಕೆ ಹೋಗುವ ವಲಸಿಗರ ಸಂಖ್ಯೆಯು ಮಾತ್ರ ಅಧಿವಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಸ್ವಗ್ರಾಮ ಫೆಲೋಶಿಪ್ ಕುರಿತ ಪರಿಚಯ ಮಾಹಿತಿಯ ಪೋಸ್ಟರ ಹಾಗೂ ಗ್ರಾಮೋದಯ ತ್ರೈಮಾಸಿಕ ಸಂಚಿಕೆಯ ಬಿಡುಗಡೆಯನ್ನು ಮಾಡಲಾಯಿತು. ಸ್ವಗ್ರಾಮ ಫೆಲೋಶಿಪ್ ಸಲಹೆಗಾರರಾದ ತಿಪ್ಪೇಸ್ವಾಮಿ ಕೆ.ಟಿ.ಅವರು ಯೋಜನೆಯ ಪರಿಚಯ ಹಾಗೂ ಕಾರ್ಯಯೋಜನೆಯ ಪ್ರಸ್ತುತಿ ಪಡಿಸಿದರು.
ವೇದಿಕೆಯಲ್ಲಿ ಪ್ರಜ್ಞಾಪ್ರವಾಹ ದಕ್ಷಿಣ ಮಧ್ಯಕ್ಷೇತ್ರದ ಸಂಯೋಜಕರಾದ ರಘುನಂದನ, ಯೂಥಫಾರ ಸೇವಾ ಸಂಸ್ಥೆಯ ವ್ಯವಸ್ಥಾಪಕರಾದ ವೆಂಕಟೇಶ ಮೂರ್ತಿ, ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ ನಜೀರ ಸಾಬ ವಿಧ್ಯಾಪೀಠದ ನಿರ್ದೇಶಕ ಪ್ರೋ. ಷಣ್ಮುಕ ಎ, ಉಪಸ್ಥಿತರಿದ್ದರು. ವಿ.ವಿ.ಕುಲಸಚಿವ ಪ್ರೋ. ಬಸವರಾಜ ಲಕ್ಕನವರ ಅತಿಥಿಗಳನ್ನು ಸ್ವಾಗತಿಸಿದರು. ಸಂಶೋಧನಾ ಸಂಯೋಜಕಿ ಡಾ.ಸುನಂದಾ ಕಳಕನ್ನವರ ಕಾರ್ಯಕ್ರಮ ನಿರ್ವಹಿಸಿದರೆ ಸ್ವಗ್ರಾಮ ಫೆಲೋಶಿಪ್ ಸಂಯೋಜಕ ಅಭಿಷೇಕ ಹೆಚ್.ಇ. ವಂದಿಸಿದರು.
