ಗಜೇಂದ್ರಗಡ : ಅ.20 ಗಜೇಂದ್ರಗಡ ತಾಲೂಕ ಕುರಬರ ಸಂಘ ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತಿದ್ದು ಡಿಸೆಂಬರ ಅತ್ಯಂತದ ವೇಳಿಗೆ ಸಿದ್ದರಾಮಯ್ಯನವರನ್ನು ಕರೆಯಿಸಿ ಗಜೇಂದ್ರಗಡದಲ್ಲಿ ದೊಡ್ಡ ಮಟ್ಟದ ಜಾಗೃತಿ ಸಮಾವೇಶ ಮಾಡುತ್ತಿದ್ದೇವೆ . ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಮತ್ತೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಬೇಕು ಎಂಬುವದು ರಾಜ್ಯದ ಜನರ ಬಯಕೇಯಾಗಿದೆ ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲಾ ಆದ್ದರಿಂದ ಈ ಭಾರಿ ನಮ್ಮ ಸಮಾಜ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುತ್ತದೆ ರೋಣ ವಿಧಾನ ಸಭಾ ಕ್ಷೇತ್ರದಲ್ಲಿ ಜಿ.ಎಸ್.ಪಾಟೀಲರು ಶಾಸಕರಾಗಬೇಕು ಅದಕ್ಕಾ ನಾವೆಲ್ಲರೂ ಶ್ರಮಿಸುತ್ತೇವೆ ಆದರೆ ನಮ್ಮ ಹಾಲಿನಲ್ಲಿ ಹುಳಿ ಹಿಂಡಲು ಎಲ್ಲಿಂದಲೋ ಕೇಲವರು ಬಂದಿದ್ದಾರೆ ಅವರು ಬಂದು ಹಾಲಿನಲ್ಲಿ ಹುಳಿ ಹಿಂಡಲು ಬಂದರೆ ಅದು ನೆಡೆಯುವದಿಲ್ಲಾ ಎಂದು ವಿ.ಆರ್.ಗುಡಿಸಾಗರ ಹೇಳಿದರು .
ಅವರು ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಗೊಷ್ಠಿಯಲ್ಲಿ ಭಾಗವಹಿಸಿ ಮಾತನಡಿದರು. ಪತ್ರಿಕಾಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ
ಗಜೇಂದ್ರಗಡ ಕುರುಬರ ಸಂಘದ ಗೌರಾವಧ್ಯಕ್ಷ ಎಚ್.ಎಸ್.ಸೋಂಪುರ ಮಾತನಾಡಿ, ಕುರುಬರ ಎಸ್ಟಿ ಮೀಸಲಾತಿ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಮೊತ್ತೊಮ್ಮೆ ಮುಖ್ಯಮಂತ್ರಿ ಆಗುವುದು ರಾಜ್ಯದ ಜನತೆಗೆ ಅನಿವಾರ್ಯತೆ. ಅಲ್ಲದೇ ರೋಣ ಹಾಗೂ ಗಜೇಂದ್ರಗಡ ಕುರುಬ ಸಮಾಜವು ಸರ್ವ ಸಮುದಾಯಗಳ ಹಿತಚಿಂತಕ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಜಿ.ಎಸ್.ಪಾಟೀಲ ಅವರನ್ನು ಶಾಸಕರನ್ನಾಗಿ ಆರಿಸಿ ತರಲು ಅವರ ಬೆನ್ನಿಗೆ ಇದ್ದೇವೆ. ಆದರೆ ರಾಜಕೀಯ ಹಾಗೂ ಅನ್ಯಪಕ್ಷದ ಪಿತೂರಿಯಿಂದ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೆಲ ವ್ಯಕ್ತಿಗಳು ಮುಂದಾಗಿದ್ದಾರೆ. ಇಂತಹ ದುರುದ್ಧೇಶದ ಕೆಲಸಕ್ಕೆ ಕಡಿವಾಣ ಹಾಕುಲು ಒಗ್ಗಟ್ಟು ಪ್ರದರ್ಶಿಸುತ್ತೇವೆ ಎಂದರು.
ಈ ವೇಳೆ ಗಜೇಂದ್ರಗಡ ಕುರುಬರ ಸಂಘದ ಅಧ್ಯಕ್ಷ ಅಂದಪ್ಪ ಬಿಚ್ಚೂರ, ರೋಣ ಕುರುಬರ ಸಂಘದ ಅಧ್ಯಕ್ಷ ಬಸವರಾಜ ಜಕ್ಕಲ್ಲ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೊಡತಗೇರಿ, ಮುಖಂಡರಾದ ಶರಣಪ್ಪ ಬೆಟಗೇರಿ, ಶರಣಪ್ಪ ಹಾದಿಮನಿ, ರಾಮಲಿಂಗಪ್ಪ ಬೆನಕನವಾರಿ,
ಲಿಂಗಪ್ಪ ಹಂಡಿ, ಹೊನ್ನಿಕೇರಪ್ಪ ಕುರಿ, ಬಸವರಾಜ ಬೆನಕನಾರಿ, ಶರಣಪ್ಪ ಹತ್ತಿಕಟಗಿ ಇದ್ದರು.
*********
