Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಯಲಬುರ್ಗಾ ಕ್ಷೇತ್ರದ ಮೇಲೆ ಶ್ರೀನಾಥ ಕಣ್ಣು!

ಯಲಬುರ್ಗಾ: ಜಿಲ್ಲೆಯಲ್ಲಿ ತಮ್ಮದೇ ಹಿಡಿದ ಹೊಂದಿರುವ ಮಾಜಿ ಸಂಸದ ಶ್ರೀರಾಮುಲು ಅವರ ಮಗ ಎಚ್.ಆರ್. ಶ್ರೀನಾಥ್ 2023ರ ವಿಧಾನ ಸಭಾ ಚುನಾವಣೆಯಲ್ಲಿ ಯಲಬುರ್ಗಾದಿಂದ ಅಖಾಡಕ್ಕಿಳಿಯಲು ಚಿಂತಿಸಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದ್ದು, ಆಕಾಂಕ್ಷಿಯಾಗಿದ್ದ ಎಚ್.ಆರ್.ಶ್ರೀನಾಥ್ ಕ್ಷೇತ್ರ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ. 1990 ರಿಂದಲೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛೆಯಿಸಿದ್ದರು. ಆದರೆ, ಹೈಕಮಾಂಡ್ ಮತ್ತು ಸ್ಥಳೀಯ ನಾಯಕರ ಒಪ್ಪಿಗೆಯ ಮೇರೆಗೆ ಕ್ಷೇತ್ರವನ್ನು ಮಾಜಿ ಸಚಿವ ಬಸವರಾಜ ರಾಯರೆಡ್ಡಿಗೆ ಬಿಟ್ಟು ಕೊಡುವ ಮೂಲಕ ಔದಾರ್ಯತೆ ಮೆರೆದಿದ್ದರು ಎಂದು ಮೂಲಗಳು ತಿಳಿಸಿವೆ.

ಹಿಂದುಳಿದ ವರ್ಗಕ್ಕೆ ಹಾಗೂ ಮೂಲ ಕಾಂಗ್ರೆಸ್ ಕುಟುಂಬಕ್ಕೆ ಸೇರಿದ ಎಚ್.ಆರ್.ಶ್ರೀನಾಥ್ ಅವರು 2023 ರ ವಿಧಾನ ಸಭಾ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ – ಬಿಜೆಪಿ ನಡುವೆ ಫೈಟ್ ಬೀಳಲಿದೆ. ಈವರೆಗೂ ಕಾಂಗ್ರೆಸ್ ನಿಂದ ಹಿಂದುಳಿದ ವರ್ಗಕ್ಕೆ ಟಿಕೆಟ್ ನೀಡಿಲ್ಲ ಎನ್ನುವ ಮಾತುಗಳು ಕಾಂಗ್ರೆಸ್ಸಿನ ಹಿಂದುಳಿದ ವರ್ಗದ ನಾಯಕರ ಆರೋಪವೂ ಆಗಿದೆ.

ರಾಯರೆಡ್ಡಿಗೆ ತಲೆ ನೋವು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲು ಹಾಗೂ ಶಿವರಾಜ ತಂಗಡಗಿ ಯವರ ಸಚಿವ ಸ್ಥಾನ ಕಳೆದ ಆರೋಪ ರಾಯರೆಡ್ಡಿ ಯವರ ಮೇಲಿದೆ. ಈ ಕಾರಣದಿಂದ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಈ ಭಾರಿ ರಾಯರೆಡ್ಡಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವುದರಿಂದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ತಲೆ ನೋವಾಗಿ ಪರಿಣಮಿಸಲಿದೆ. 

ಕ್ಷೇತ್ರದ ಅಭಿವೃದ್ಧಿ ಮರೀಚಿಕೆ: ಮೂರ್ನಾಲ್ಕು ದಶಕದಿಂದ ಯಲಬುರ್ಗಾ ಮತಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಬಸವರಾಜ ರಾಯರೆಡ್ಡಿ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಸರಿಸಿಲ್ಲ ಎಂಬ ಆರೋಪಗಳಿವೆ. ಇತ್ತೀಚೆಗೆ ಹಳ್ಳದಲ್ಲಿ 2 ಪೇದೆ, 4 ಮಹಿಳೆಯರು ಕೊಚ್ಚಿಕೊಂಡು ಹೋಗಿರುವುದು. ಮನೆ ಕುಸಿದು ವ್ಯಕ್ತಿ ಸಾವು ನಡೆದಿದ್ದು, ಆಡಳಿತಾವಧಿಯಲ್ಲಿ ಸೇತುವೆಗಳು ಹಾಗೂ ಮನೆ ನಿರ್ಮಾಣಕ್ಕೆ ಆದ್ಯತೆ ನೀಡಿಲ್ಲ ಎಂಬ ಆರೋಪಗಳು ರಾಯರೆಡ್ಡಿ ಮೇಲೆ ಕೇಳಿಬಂದವು. ಸ್ಥಳೀಯರ ಕೈಗೆ ಸಿಗದಿರುವುದು, ಕಾರ್ಯಕರ್ತರ ವಿಶ್ವಾಸ ಗಳಿಸದಿರುವುದು, ಮೂಲಸೌಕರ್ಯ ಒದಗಿಸದಿರುವುದು ರಾಯರೆಡ್ಡಿಗೆ ಮುಳುವಾಗಿದೆ. 

-ಕೋಟ್

ನಮಗೆ ತಿಳುವಳಿಕೆ ಬಂದಾಗಿನಿಂದಲೂ ಈವರೆಗೂ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಈ ಭಾರಿ ಹಿಂದುಳಿದ ವರ್ಗದ ನಾಯಕ ಹೆಚ್.ಆರ್.ಶ್ರೀನಾಥ ಅವರಿಗೆ ಟಿಕೆಟ್ ನೀಡಿದರೆ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿದಂತಾಗಲಿದೆ.

ಹೆಸರು ಹೇಳಲು ಇಚ್ಛೆಯಿಸದ ಮೂಲ ಕಾಂಗ್ರೆಸ್ ಕಾರ್ಯಕರ್ತ.

ಕಳೆದ 1990 ರಿಂದಲೂ ನಾನು ಯಲಬುರ್ಗಾ ಮತಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛಿಯಿಸಿದ್ದೇನು. ಜಿಲ್ಲಾ ಮಟ್ಟದ ನಾಯಕರ ಮಾತಿಗೆ ಬೆಲೆ ನೀಡಿ ಈವರೆಗೂ ಸ್ಪರ್ಧಿಸಿಲ್ಲ. ಈ ಭಾರಿ ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ತವಕದಲ್ಲಿದ್ದೇನೆ.

ಹೆಚ್.ಆರ್.ಶ್ರೀನಾಥ, ಮಾಜಿ ಎಂಎಲ್‍ಸಿ.

Related posts

ಸಂವಿಧಾನ ಜಾರಿಗೊಂಡು 74 ವರ್ಷವಾದರೂ ಅಸ್ಪೃಶ್ಯತೆ ಜೀವಂತ.ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ..

satyadarshana

ಹೆಬ್ಬಾಳ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ಗ್ರಾಮಸ್ಥರಿಂದ ಅಭೂತಪೂರ್ವ ಸ್ವಾಗತ.

satyadarshana

ಕೊಪ್ಪಳ ಜಿಲ್ಲಾ ರಜತ ಮಹೋತ್ಸವ: ಗಮನ ಸೆಳೆದ ಮೆರವಣಿಗೆ —

satyadarshana

Leave a Comment