Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕಾಲಮಿತಿಯೊಳಗಾಗಿ ಜನನ-ಮರಣ ನೋಂದಣಿ ಕಾರ್ಯ ಜರುಗಲಿ.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನನ-ಮರಣ ನೋಂದಣಿಗಾಗಿ ನಿಯೋಜಿತ ನೋಂದಣಾಧಿಕಾರಿಗಳು ಪ್ರಮಾಣ ಪತ್ರಕ್ಕೆ ಸಹಿ ಮಾಡುವದರ ಮೂಲಕ ನೋಂದಣಿಗಾಗಿ ನಿಗದಿಪಡಿಸಲಾದ ತಂತ್ರಾಂಶದಲ್ಲಿ ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದರು. ನೋಂದಣಿ ಕಾರ್ಯದಲ್ಲಿ ನ್ಯೂನತೆಗಳು ಕಂಡುಬಂದರೆ ಕೂಡಲೇ ಅವುಗಳನ್ನು ಸರಿಪಡಿಸಿ ವಿಳಂಭಕ್ಕೆ ಆಸ್ಪದ ನೀಡದೆ ಕಾಲಮಿತಿಯೊಳಗೆ ನೋಂದಣಿಯಾಗುವಂತೆ ನಿಗಾವಹಿಸಬೇಕು. ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರರು ಈ ಕುರಿತು ಸಭೆ ಜರುಗಿಸಿ ವರದಿ ನೀಡುವಂತೆ ತಿಳಿಸಿದರು.

ಜನನ-ಮರಣ ನೋಂದಣಿ ಪ್ರಮಾಣ ಪತ್ರ ವಿತರಣೆಯಿಂದ ಜಮೆ ಆಗುವ ಮೊತ್ತವನ್ನು ನಿಯಮಿತವಾಗಿ ಸರ್ಕಾರಕ್ಕೆ ಜಮೆ ಮಾಡುವದರ ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಹೊರಡಿಸಲಾಗುವ ಆದೇಶಗಳನ್ನು ಪಾಲಿಸಲು ಸೂಚನೆ ನೀಡಿದರು. ಜನನ-ಮರಣ ಪ್ರಮಾಣ ಪತ್ರಗಳು ಅತೀ ಪ್ರಮುಖ ದಾಖಲೆಗಳಾಗಿದ್ದು ಇವುಗಳ ಕುರಿತು ಮಾಹಿತಿಯನ್ನು ನೋಂದಣಿ ಮಾಡುವ ಮುನ್ನ ಕುಲಂಕೂಷವಾಗಿ ಪರಿಶೀಲನೆ ಮಾಡುವಂತೆ ತಿಳಿಸಿದ ಅವರು ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ನಿಗಾವಹಿಸುವಂತೆ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಸೂಚನೆ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಎ.ಕಂಬಾಳಿಮಠ ಮಾತನಾಡಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 365, ಪಟ್ಟಣ ಪ್ರದೇಶಗಳಲ್ಲಿ 19 ಒಟ್ಟು 384 ನೋಂದಣಿ, ಉಪನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನೇವರಿ-2022 ರಿಂದ ಇಲ್ಲಿಯವರೆಗೆ ಕಾಲಮಿತಿಯೊಳಗೆ ಶೇ. 99.44 ರಷ್ಟು ಜನನ ನೋಂದಣಿ ಕಾರ್ಯ ಮಾಡಲಾಗಿರುತ್ತದೆ ಎಂದು ಸಭೆಗೆ ಮಾಹತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಸೇರಿದಂತೆ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು.

Related posts

ಹಾಲಿನಲ್ಲಿ ಹುಳಿ ಹಿಂಡಲು ಬಂದರೆ ನೆಡೆಯುವದಿಲ್ಲಾ ಎಚ್ಚರಿಕೆ ನೀಡಿದ : ಗುಡಿಸಾಗರ

satyadarshana

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಬರುವ ಗ್ರಾಮಿಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ SFI ಮನವಿ* 

satyadarshana

ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಸದಸ್ಯರಿಂದ ದಿಢೀರ್ ಭೇಟಿ ಪರಿಶೀಲನೆ

satyadarshana