Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕಾಲಮಿತಿಯೊಳಗಾಗಿ ಜನನ-ಮರಣ ನೋಂದಣಿ ಕಾರ್ಯ ಜರುಗಲಿ.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ

ಗದಗ(ಸತ್ಯದರ್ಶನ) ಸೆ. 22: ಜನನ-ಮರಣ ನೋಂದಣಿ ವೈಯಕ್ತಿಕ ಅನುಕೂಲಗಳಿಗಾಗಿ ಹಾಗೂಗದಗ(ಕರ್ನಾಟಕ ವಾರ್ತೆ)ಸೆ. 22: ಜನನ-ಮರಣ ನೋಂದಣಿ ವೈಯಕ್ತಿಕ ಅನುಕೂಲಗಳಿಗಾಗಿ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಸುರಕ್ಷತೆಯನ್ನು ಒದಗಿಸಲು ಅತೀ ಪ್ರಮುಖವಾದ ದಾಖಲೆಯಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗಾಗಿಯೇ ಸಂಬಂಧಿಸಿದ ತಂತ್ರಾಂಶದಲ್ಲಿ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಜನನ-ಮರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಜನನ-ಮರಣ ನೋಂದಣಿಗಾಗಿ ನಿಯೋಜಿತ ನೋಂದಣಾಧಿಕಾರಿಗಳು ಪ್ರಮಾಣ ಪತ್ರಕ್ಕೆ ಸಹಿ ಮಾಡುವದರ ಮೂಲಕ ನೋಂದಣಿಗಾಗಿ ನಿಗದಿಪಡಿಸಲಾದ ತಂತ್ರಾಂಶದಲ್ಲಿ ಕಾಲಮಿತಿಯೊಳಗಾಗಿ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದರು. ನೋಂದಣಿ ಕಾರ್ಯದಲ್ಲಿ ನ್ಯೂನತೆಗಳು ಕಂಡುಬಂದರೆ ಕೂಡಲೇ ಅವುಗಳನ್ನು ಸರಿಪಡಿಸಿ ವಿಳಂಭಕ್ಕೆ ಆಸ್ಪದ ನೀಡದೆ ಕಾಲಮಿತಿಯೊಳಗೆ ನೋಂದಣಿಯಾಗುವಂತೆ ನಿಗಾವಹಿಸಬೇಕು. ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರರು ಈ ಕುರಿತು ಸಭೆ ಜರುಗಿಸಿ ವರದಿ ನೀಡುವಂತೆ ತಿಳಿಸಿದರು.

ಜನನ-ಮರಣ ನೋಂದಣಿ ಪ್ರಮಾಣ ಪತ್ರ ವಿತರಣೆಯಿಂದ ಜಮೆ ಆಗುವ ಮೊತ್ತವನ್ನು ನಿಯಮಿತವಾಗಿ ಸರ್ಕಾರಕ್ಕೆ ಜಮೆ ಮಾಡುವದರ ಜೊತೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಹೊರಡಿಸಲಾಗುವ ಆದೇಶಗಳನ್ನು ಪಾಲಿಸಲು ಸೂಚನೆ ನೀಡಿದರು. ಜನನ-ಮರಣ ಪ್ರಮಾಣ ಪತ್ರಗಳು ಅತೀ ಪ್ರಮುಖ ದಾಖಲೆಗಳಾಗಿದ್ದು ಇವುಗಳ ಕುರಿತು ಮಾಹಿತಿಯನ್ನು ನೋಂದಣಿ ಮಾಡುವ ಮುನ್ನ ಕುಲಂಕೂಷವಾಗಿ ಪರಿಶೀಲನೆ ಮಾಡುವಂತೆ ತಿಳಿಸಿದ ಅವರು ಪ್ರಮಾಣ ಪತ್ರ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಲು ನಿಗಾವಹಿಸುವಂತೆ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್. ಸೂಚನೆ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ.ಎ.ಕಂಬಾಳಿಮಠ ಮಾತನಾಡಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 365, ಪಟ್ಟಣ ಪ್ರದೇಶಗಳಲ್ಲಿ 19 ಒಟ್ಟು 384 ನೋಂದಣಿ, ಉಪನೋಂದಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನೇವರಿ-2022 ರಿಂದ ಇಲ್ಲಿಯವರೆಗೆ ಕಾಲಮಿತಿಯೊಳಗೆ ಶೇ. 99.44 ರಷ್ಟು ಜನನ ನೋಂದಣಿ ಕಾರ್ಯ ಮಾಡಲಾಗಿರುತ್ತದೆ ಎಂದು ಸಭೆಗೆ ಮಾಹತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ ಸೇರಿದಂತೆ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಜರಿದ್ದರು. ಸಾಮಾಜಿಕ ಸ್ಥಾನಮಾನಕ್ಕೆ ಸುರಕ್ಷತೆಯನ್ನು ಒದಗಿಸಲು ಅತೀ ಪ್ರಮುಖವಾದ ದಾಖಲೆಯಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ನೋಂದಣಾಧಿಕಾರಿಗಳು ಜನನ-ಮರಣ ನೋಂದಣಿಯನ್ನು ಕಾಲಮಿತಿಯೊಳಗಾಗಿಯೇ ಸಂಬಂಧಿಸಿದ ತಂತ್ರಾಂಶದಲ್ಲಿ ದಾಖಲಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅಧಿಕಾರಿಗಳಿಗೆ ಸೂಚನೆ ನೀಡಿದರು.

Related posts

2021ನೇ ಸಾಲಿಗೆ ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಮಠಕ್ಕೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಘೋಷಣೆ

satyadarshana

ಬೆಳ್ಳಂಬೆಳಗ್ಗೆ ಗದಗ, ಹಡಗಲಿ, ಹಾವೇರಿ ಸೇರಿ 6 ಕಡೆಗಳಲ್ಲಿ ದಾಳಿ

satyadarshana

ಅಧಿಕ ಮಳೆಯಿಂದಾಗಿ ಹಾನಿಗೊಳಗಾದ ಮನೆ ಹಾಗೂ ಬೆಳೆಗೆ ಅಪಾರ ಪ್ರಮಾಣದ ಪರಿಹಾರ ವಿತರಣೆ

satyadarshana