ಗದಗ ( ಸತ್ಯ ದರ್ಶನ ) ಸೆ 14: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂಬ ಸುಳ್ಳು ವದಂತಿಗಳು ಹರಿದಾಡುತ್ತಿವೆ.
ಇದರೊಂದಿಗೆ ಸಂಬಂಧಿಸಿದಂತೆ ಬೇರೆ ದೇಶದ/ ರಾಜ್ಯದ ವಿಡಿಯೋಗಳನ್ನು ಪ್ರಕಟಪಡಿಸಲಾಗುತ್ತಿದೆ. ಇಂತಹವುಗಳಿಂದ ಸಾರ್ವಜನಿಕರು ಬಹಳಷ್ಟು ಆತಂಕಗೊಂಡು/ ಭಯಗೊಂಡು ಅಪರಿಚಿತ ಅಮಾಯಕ ವ್ಯಕ್ತಿಗಳನ್ನು ತಡೆದು/ ಹಿಡಿದು ಹಲ್ಲೆ ಮಾಡುವ ಘಟನೆಗಳು ಇತ್ತೀಚೆಗೆ ಕಂಡುಬರುತ್ತವೆ.
ತಮ್ಮ ತಮ್ಮ ಗ್ರಾಮ , ಪಟ್ಟಣ, ಶಹರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಶಯಾಸ್ಪದ ವ್ಯಕ್ತಿಗಳು/ ಅಪರಿಚಿತರು ಕಂಡುಬಂದಲ್ಲಿ ತಕ್ಷಣ ಉಚಿತ 112 ಸಹಾಯವಾಣಿಗೆ ಕರೆ ಮಾಡಬೇಕು.
ಆಗ ಪೊಲೀಸರು ಸದರಿ ಘಟನಾ ಸ್ಥಳಕ್ಕೆ ತಕ್ಷಣ ಬಂದು ಕೂಲಂಕುಶವಾಗಿ ವಿಚಾರಣೆ ಮಾಡುತ್ತಾರೆ.
ಸಾರ್ವಜನಿಕರು ಆತಂಕಗೊಂಡು ಯಾವುದೇ ಕಾರಣಕ್ಕೂ ಅಮಾಯಕ ವ್ಯಕ್ತಿಗಳಿಗೆ ತಡೆಒಡ್ಡುವುದಾಗಲಿ, ಹಲ್ಲೆ ಮಾಡುವುದಾಗಲಿ ಅಥವಾ ಅವರಿಗೆ ತೊಂದರೆ ಕೊಡುವುದಾಗಲಿ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ತುರ್ತು ಸಂಪರ್ಕದ ಸಹಾಯವಾಣಿ:-112, ಗದಗ ಜಿಲ್ಲಾ ನಿಸ್ತಂತು ಕೇಂದ್ರ -08372-238300/9480804400 ಸಂಪರ್ಕಿಸಬಹುದು ಎಂದು ಜಿಲ್ಲಾ ಪೊಲೀಸ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.