Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

“ಮಳೆಯೇ ಪರಿಸರದ ಬ್ಯಾಂಕ್ ಪರಿಸರವೇ ಆಕ್ಸಿಜನ್ ಟ್ಯಾಂಕ್” -ದಂಡಿನ

 

ಗದಗ:(ಸತ್ಯದರ್ಶನ ) 11 ಸಪ್ಟಂಬರ್. ಮಳೆ ಬಂದರೆ ಕೆಡಲ್ಲ ಮಗ ಉಂಡರೆ ಕೆಡಲ್ಲ ಎಂಬ ಗಾದೆಯಂತೆ ನಾಡಿನ ಕೃಷಿಕರ ಬದುಕಿಗೆ ಹಾಗೂ ಸಕಲ ಜೀವರಾಶಿಗೆ ನೆಲೆಯಾಗಿರುವುದೇ ಮೇಘರಾಜನ ಕೃಪೆ. ಆದರೆ ಅಮೃತವು ಅತಿಯಾದರೇ ವಿಷವೆಂಬ ನಿಲುವು ಇತ್ತಿಚೆಗೆ ಸುರಿದ ಮಳೆಯಿಂದ ಗೋಚರಿಸಿದೆ ಎಂದು ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರವಿ ದಂಡಿನ ಹೇಳಿದರು.

ರೋಣ ತಾಲೂಕಿ‌ ಬೂದಿಹಾಳ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವನಗೌಡ ಪಾಟೀಲ್ ಮಾತನಾಡುತ್ತಾ ಸರಕಾರ ಕೋಟ್ಯಂತರ ರೂ.ವೆಚ್ಚ ಮಾಡಿ ಶೈಕ್ಷಣಿಕ ಅನೇಕ ಯೋಜನೆ ಜಾರಿ ಮಾಡಿದರೂ ಗ್ರಾಮೀಣ ಮಕ್ಕಳು ಇನ್ನೂ ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದರೂ ಬಡ ಮಕ್ಕಳಿಗೆ, ಪೋಷಕರಿಗೆ ಸರಿಯಾದ ಮಾಹಿತಿ ಇಲ್ಲ. ಆಧುನಿಕ ಕಾಲದಲ್ಲಿಯೂ ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ಅಕ್ಷರಸ್ಥರು, ನೌಕರರು ಶಾಲೆಗೆ ಸೇರಿಸಲು ಶ್ರಮಪಡಬೇಕು ಎಂದು ಕಿವಿಮಾತು ಹೇಳಿದರು.

ಕನಕದಾಸ ಶಿಕ್ಷಣ ಕ್ಷೇತ್ರದಲ್ಲಿ ಬಡ ಮಕ್ಕಳಿಗೆ ಸಾವಿರಾರು ಬಡ ವಿದ್ಯಾರ್ಥಿಗಳ ಬಾಳಿಕೆ ಬೇಳಕಾಗಿ ಇಂದು ರಾಜ್ಯಾದ್ಯಂತ ಶಾಲಾ- ಕಾಲೇಜುಗಳನ್ನ ತೆರೆದು ಬಡ ಮಕ್ಕಳ ಪಾಲಿನ ಆಶಾದೀಪವಾಗಿದ್ದಾರೆ. ತಂದೆಯಂತೆ ರವಿ ದಂಡಿನ ಕೂಡಾ ಸಾಕಷ್ಟು ಜನ ಪರವಾದ ಕಾಳಜಿಯನ್ನು ಹೊಂದಿ ಜನಮನ್ನಣೆಯನ್ನು ಪಡೆದಿದ್ದಾರೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ ಎನ್ನುತ್ತಾ

ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮೀಣ ಭಾಗದ ಶೇ.30ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು.

ಪ್ರತಿಭೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಪ್ರತಿಭೆಗೆ ಎಲ್ಲೇ ಹೋದರೂ ಬೆಲೆ ಸಿಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಜ್ಞಾನ ಸಂಪಾದಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಯಲ್ಲಪ್ಪಗೌಡ ಪಾಟೀಲ್, ಎನ್ ಎಸ್ ಮಡಿವಾಳರ, ಸೋಮನಗೌಡ ಯಲ್ಲಪ್ಪಗೌಡ್ರು, ಯಾದವ ಸಂಘದ ಜಿಲ್ಲಾಧ್ಯಕ್ಷ ಹರೀಶ ಪೂಜಾರ ಪರಸರವನ್ನು ನಾವು ಕಾಪಾಡಿದರೆ ನಮ್ಮನ್ನು ಪರಿಸರ ಕಾಪಾಡುತ್ತದೆ. ಎಂದು ಹೇಳಿದರು.

ಕ್ರೀಡಾ, ಮಾಜಿ ಸೈನಿಕರು, ಶಿಕ್ಷಕರು ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿ ದಂಡಿನ ಅಭಿಮಾನಿ ಬಳಗದಿಂದ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಶಿವಯ್ಯ ಪಾಟೀಲ್ ವಹಿಸಿದ್ದರೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ವೇದಮೂರ್ತಿ ಕಲ್ಲಯ್ಯ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಚಂದ್ರವ್ವ ಬೇನಹಾಳ, ಆಂಜನಯ್ಯ ಪೂಜಾರ, ಆನಂದ ನಿಂಗರಡ್ಡಿ, ಸಿ ಎಲ್ ಪಾಟೀಲ್, ಬಿ ಎಲ್ ಪಾಟೀಲ್ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಹಿರಿಯರು ಯುವಕ ಮಿತ್ರರು ಉಪಸ್ಥಿತರಿದ್ದರು.

Related posts

ಸರ್ಕಾರ ರಚಿಸಲು ತಯಾರಿ ನಡೆಸಿದ ಕಾಂಗ್ರೆಸ್‌ * ಡಿಕೆ ಶಿವಕುಮಾರ್‌ಗೆ ಹೊಸ ಜವಾಬ್ದಾರಿ ವಹಿಸಿದ ಎಐಸಿಸಿ

satyadarshana

ಎಲೆಕ್ಷನ್‌ ಸಿದ್ಧತೆ :ಕಾಂಗ್ರೆಸ್‌ ಟಿಕೆಟ್‌ಗೆ 750 ಅರ್ಜಿ!

satyadarshana

ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025

satyadarshana

Leave a Comment